ರಜಿನಿ, ಪ್ರಭಾಸ್,ಕಮಲ್ ಹಾಸನ್‍ನಂತರ ಸ್ಟಾರ್ ನಟರ ಚಳಿ ಬಿಡಿಸಿದ ರಾಜ್ ಮೊಮ್ಮಗ ಯುವರಾಜ್ ಕುಮಾರ್..!

ಕರ್ನಾಟಕದಲ್ಲಿ ನೆರೆ ಪ್ರವಾಹದಿಂದ ಜನರು ಬಹಳಷ್ಟು ತೊಂದರೆಗೊಳಗಾಗಿದ್ದಾರೆ, ಇನ್ನು ಇದೇ ವೇಳೆ ಪ್ರವಾಹ ಪೀಡಿತ ಪ್ರದೇಶಗಳಿಗೆ ಕರ್ನಾಟಟಕದ ಜನತೆ ತಮ್ಮ ಕೈಲಾದ ಸಹಾಯವನ್ನು ಸಹಾ ಮಾಡ್ತಾ ಬರ್ತಾ ಇದ್ದಾರೆ, ಆದ್ರೆ ಈ ಡಾ.ರಾಜ್‍ಕುಮಾರ್ ಅವರ ಮೊಮ್ಮಗ ಮಾಡಿದ ಆ ಒಂದು ಫೇಸ್ ಬುಕ್ ಪೋಸ್ಟ್ ಇದೀಗ ವ್ಯಾಪಕ ವೈರಲ್ ಆಗಿದೆ
ಕರ್ನಾಟಕದಲ್ಲಿ ಸುರಿಯುತ್ತಿರುವ ಭಾರಿ ಮಳೆ ಮತ್ತು ಭಾರಿ ಅವಾಂತರಕ್ಕೆ ರಾಜ್ಯದ ಲಕ್ಷಾಂತರ ಮಂದಿಯ ಬದುಕು ಬೀದಿಗೆ ಬಿದ್ದಿದ್ದು, ರಾಜ್ಯದ ಮೂಲೆ ಮೂಲೆಯಿಂದ ಲಕ್ಷಾಂತರ ಮಂದಿ ತಮ್ಮ ಕೈಲಾದ ಮಟ್ಟಿಗೆ ಸಹಾಯವನ್ನು ಮಾಡ್ತಾ ಇದ್ದಾರೆ, ಆದರೆ ಇದೇ ವಿಚಾರಕ್ಕೆ ಸಂಬಂಧಿಸಿದಂತೆ ರಾಜ್ ಕುಟುಂಬದ ಕುಡಿ ಯುವರಾಜ್‍ಕುಮಾರ್ ಈಗ ಸಿಟ್ಟಿಗೆದ್ದಿದ್ದಾರೆ.
ಹೌದು ತಮಿಳುನಾಡು ಮತ್ತು ಬೇರೆ ರಾಜ್ಯಗಳಲ್ಲಿ ಪ್ರವಾಹ ತೊಂದರೆಗಳು ಉಂಟಾದಾಗ ನೆರವಿಗೆ ಹೋಗೋ ಸ್ಟಾರ್ ಗಳು ಕರ್ನಾಟಕದಲ್ಲಿ ಆದಾಗ ಯಾಕೆ ಬರೋದಿಲ್ಲ ಅಂತ ಯುವರಾಜ್‍ಕುಮಾರ್ ಕಿಡಿಕಾರಿದ್ದಾರೆ.

ತಮ್ಮ ಫೇಸ್ ಬುಕ್ ಮೂಲಕ ಆಕ್ರೋಶ ವ್ಯಕ್ತ ಪಡಿಸಿರೋ ಯುವರಾಜ್ ಕುಮಾರ್ `ನನ್ನದೊಂದು ಆಲೋಚನೆ, ನಮ್ಮ ಕರ್ನಾಟಕದ ಎಷ್ಟೋ ಜಿಲ್ಲೆಗಳಲ್ಲಿ ಜಲಪ್ರಳಯದ ಪರಿಣಾಮ ಲಕ್ಷಾಂತರ ಜನರು ನಷ್ಟದಲ್ಲಿದ್ದಾರೆ, ಅವರಲ್ಲಿ ನೂರಾರು ಜನ ನಿರಾಶ್ರಿತರಾಗಿದ್ದಾರೆ, ಆಹಾರವಿಲ್ಲ ಮೂಲಭೂತ ಸೌಕರ್ಯಗಳಿಲ್ಲ, ನಾವು ಕನ್ನಡಿಗರು, ಇಲ್ಲಿನ ಸಂಘ ಸಂಸ್ಥೆಗಳು, ಸೇನಾ ದಳಗಳು ಹಾಗೂ ಕರ್ನಾಟಕ ಸರ್ಕಾರ ಎಲ್ಲರೂ ಒಂದಾಗಿ ಕೈಲಾದಷ್ಟು ಸಹಾಯ ಮಾಡಲು ಪ್ರಯತ್ನ ಪಡುತ್ತಿದ್ದೇವೆ, ಆದರೆ ಬೇರೆಯವರು ಎಲ್ಲಿ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಬೇರೆ ರಾಜ್ಯದ ಸೆಲೆಬ್ರಿಟಿಗಳು,ಸ್ಟಾರ್ ಗಳು ರಾಜಕಾರಣಿಗಳು ತಮ್ಮ ಚಿತ್ರದ ಪ್ರಮೋಷನ್ ಮಾಡಲು, ಬ್ಯ್ರಾಂಡ್ ಅನ್ನು ಉತ್ತೇಜಿಸಲು,ತಮ್ಮ ಕ್ರಿಕೆಟ್ ತಂಡವನ್ನು ಪ್ರತಿನಿಧಿಸಲು, ಮತ ಕೇಳಲು ಕರ್ನಾಟಕಕ್ಕೆ ಬರುತ್ತಾರೆ, ಆದರೆ ಈಗ ಅವರೆಲ್ಲಾ ಎಲ್ಲಿದ್ದಾರೆ? ಇಲ್ಲಿ ಬರೋದು, ಸಹಾಯ ಮಾಡೋದು ಇರಲಿ, ನನಗೆ ಯಾರ ಟ್ವೀಟ್,ಪೋಸ್ಟ್ ನೋಡಿದ ನೆನಪು ಆಗುತ್ತಿಲ್ಲ ಎಂದು ಕಿಡಿಕಾರಿದ್ದಾರೆ ಯುವರಾಜ್ ಕುಮಾರ್, ನಾನು ಏನಾದರೂ ತಪ್ಪು ಹೇಳುತ್ತಿದ್ದೇನೆಯೇ? ತಪ್ಪಿದ್ದರೆ ಕ್ಷಮೆ ಇರಲಿ. ಯಾರೇ ಬರಲಿ,ಬಿಡಲಿ ನಮ್ಮವರ ಜೊತೆ ಎಲ್ಲರ ಜೊತೆ ನಾವು ಇರೋಣ ಎಂದು ಕರೆ ನೀಡಿದ್ದಾರೆ.


ಸದ್ಯ ಯುವರಾಜ್ ಕುಮಾರ್ ಅವರ ಈ ಒಂದು ಪೋಸ್ಟ್ ಈಗ ಎಲ್ಲಾ ಕಡೆ ವೈರಲ್ ಆಗಿದ್ದು ರಾಜ್ಯದ ಜನತೆಯಿಂದ ಮೆಚ್ಚುಗೆಗೆ ಪಾತ್ರವಾಗಿದೆ.

ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಳ್ಳಿ

Similar Articles

Comments
Top