ಯುವಕರಿಗೆ ಕೆಲಸ ಕೊಡಿಸುವುದಾಗಿ ಮಹಿಳೆ ಮಾಡಿದ್ದೇನು ಗೊತ್ತಾ.?..!

ಮಹಿಳೆಯೊಬ್ಬಳು ನಿರುದ್ಯೋಗದಿಂದ ಬಳಲುತ್ತಿರುವ ಹುಡುಗರನ್ನೇ ಬಂಡವಾಳ ಮಾಡಿಕೊಂಡು ಅವರಿಂದ ಲಕ್ಷ ಲಕ್ಷ ಪೀಕಿಸಿ ಕೆಲಸ ಕೊಡಿಸುವುದಾಗಿ ಹೇಳಿ ಮೋಸ ಮಾಡಿದ ಘಟನೆ ರಾಯಚೂರಿನಲ್ಲಿ ನಡೆದಿದೆ. ಧಾರವಾಡ ಮೂಲದ ವಿಜಯಕುಮಾರಿ ಎಸ್‌.ಎಲಕಪಾಟಿ ಎಂಬಾಕೆ ವಂಚನೆ ಮಾಡಿದ ಮಹಿಳೆ, ರಾಯಚೂರು ಜಿಲ್ಲೆಯ ಲಿಂಗಸುಗೂರು ಪಟ್ಟಣದಲ್ಲಿ ಗ್ರಾಮೀಣ ಮತ್ತು ಕೃಷಿ ಅಭಿವೃದ್ಧಿ ಸಂಘದ ಹೆಸರಿನಲ್ಲಿ ಎನ್‌ಜಿಒ ಸ್ಥಾಪಿಸಿ ಹಲವು ಜನರಿಗೆ ಉದ್ಯೋಗ ಕೊಡಿಸುವುದಾಗಿ ಕೆಲವು ಯುವಕರಿಂದ ಹಣವನ್ನು ಪಡೆದು ನಾಪತ್ತೆಯಾಗಿದ್ದಾಳೆ.
ಗ್ರಾಮದಲ್ಲಿ ಎನ್‌ಜಿಒ ಸ್ಥಾಪಿಸಿಕೊಂಡು ಅಲ್ಲಿನ ಗ್ರಾಮೀಣ ಯುವಕರನ್ನೇ ಟಾರ್ಗೆಟ್‌ ಮಾಡಿದ್ದ ಈ ಯುವತಿ ಹಾಸ್ಟೇಲ್‌ ವಾರ್ಡನ್‌ ಮತ್ತು ಇಂಜಿನಿಯರಿಂಗ್‌ ಹಾಗೂ ಪಂಚಾಯಿತಿ ಕಾರ್ಯದರ್ಶಿ ಹುದ್ದೆಗಳನ್ನು ಕೊಡಿಸುವುದಾಗಿ ಹೇಳಿ ಲಿಂಗಸುಗೂರು ಗ್ರಾಮದ ಸುಮಾರು 10 ರಿಂದ 12 ಯುವಕರ ಬಳಿ ಸುಮಾರು 14.10 ಲಕ್ಷ ರೂಪಾಯಿ ಹಣವನ್ನು ಪಡೆದು ಪರಾರಿಯಾಗಿದ್ದಾಳೆ.
ಹಣ ಕಳೆದುಕೊಂಡವರು ಲಿಂಗಸುಗೂರು ಠಾಣೆಯಲ್ಲಿ ದೂರು ದಾಖಲಿಸಿದ್ದು, ನ್ಯಾಯ ಒದಗಿಸುವಂತೆ ಮನವಿ ಮಾಡಿಕೊಂಡಿದ್ದಾರೆ.

ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಳ್ಳಿ

Similar Articles

Comments
Top