ಟಿಕ್ ಟಾಕ್ ಪ್ರಿಯರಿಗೆ ಶುಭ ಸುದ್ದಿ ದುಡ್ಡು ಮಾಡುವ ಸುವರ್ಣವಕಾಶ!

ಟಿಕ್ ಟಾಕ್ ಪ್ರಿಯರಿಗೆ ಟಿಕ್ ಟಾಕ್ ಬ್ಯಾನ್ ಆದ ಮೇಲೆ ಎಲ್ಲಿಲ್ಲದ ಬೇಸರ ಉಂಟಾಗಿತ್ತು, ಇನ್ನು ಟಿಕ್ ಟಾಕ್ ಬ್ಯಾನ್ ಆಗುತ್ತಿದ್ದಂತೆ ಇನ್ಸ್ಟಾಗ್ರಾಮ್ ರೀಲ್ ಅನ್ನು ಪರಿಚಯಿಸಿದ್ರು ಅದು ಜನರನ್ನು ಆಕರ್ಷಿಸುವಲ್ಲಿ ವಿಫಲವಾಯ್ತು, ಇನ್ನು ಟಿಕ್ ಟಾಕ್ ಮತ್ತೆ ಭಾರತದಲ್ಲಿ ಬರಲಿದೆ ಅನ್ನೋ ಸುದ್ದಿ ಕೂಡ ಜೋರಾಗಿ ಹರಿದಾಡ್ತಾ ಇದೆ. ಇದೆಲ್ಲದರ ನಡುವೆ ಯೂಟ್ಯೂಬ್ ಇದೀಗ ಹೊಸ ಸುದ್ದಿಯನ್ನು ಕೊಟ್ಟಿದೆ.

ಕಳೆದ ವರ್ಷದಿಂದ ಯೂಟ್ಯೂಬ್ ನಲ್ಲೂ ಟಿಕ್ ಟಾಕ್ ಮಾದರಿಯಲ್ಲಿ ವಿಡಿಯೋ ಮಾಡುವ ಅವಕಾಶ ಬರಲಿದೆ ಇದರಿಂದ ಯೂಟ್ಯೂಬ್ ವಿಡಿಯೋ ರೀತಿಯಲ್ಲೇ ಹಣವನ್ನು ಸಂಪಾದಿಸಬಹುದು ಅನ್ನೋ ಸುದ್ದಿ ಬಂದಿತ್ತು, ಆದ್ರೀಗ ಯೂಟ್ಯೂಬ್ ಕಡೆಯಿಂದ ಯೂಟ್ಯೂಬ್ ಶಾರ್ಟ್ಸ್ ಅನ್ನು ಭಾರತದಲ್ಲಿ ಲಾಂಚ್ ಮಾಡಿದೆ,

ಯೂಟ್ಯೂಬ್ ಶಾರ್ಟ್ಸ್ ಅನ್ನು ಯೂಟ್ಯೂಬ್ ಆಪ್ ನಲ್ಲಿಯೇ ಸೇರಿಸಲಾಗಿದೆ, ಹಳೆಯ ಕೆಲವು ಯೂಟ್ಯೂಬರ್ ಗಳಿಗೆ ಯೂಟ್ಯೂಬ್ ಶಾರ್ಟ್ಸ್ ಮಾಡುವ ಅವಕಾಶವನ್ನು ಮಾಡಿಕೊಟ್ಟಿದೆ, ನಿಮಗಿನ್ನು ಯೂಟ್ಯೂಬ್ ಶಾರ್ಟ್ಸ್ ಆಪ್ಷನ್ ಅಪ್ ಡೇಟ್ ಆಗಿಲ್ಲವೆಂದರೆ 15 to 60 ಸೆಕೆಂಡ್ ವಿಡಿಯೋ , ಟಿಕ್ ಟಾಕ್ ರೀತಿ ವರ್ಟಿಕಲ್ ಆಗಿ ರೆಕಾರ್ಡ್ ಮಾಡಿ, ಶಾರ್ಟ್ಸ್ ಅಂತ ಹ್ಯಾಶ್ ಟ್ಯಾಗ್ ಹಾಕಿ ಅಪ್ಲೋಡ್ ಮಾಡಿದರೆ ಅದು ಶಾರ್ಟ್ಸ್ ವಿಡಿಯೋ ಆಗಿ ಫೀಚರ್ ಆಗುತ್ತೆ.

ಇನ್ನು ಮುಂದೆ ಟಿಕ್ ಟಾಕ್ ಮಾದರಿಯಲ್ಲಿ ಯೂಟ್ಯೂಬ್ ಶಾರ್ಟ್ಸ್ ನಲ್ಲಿ ವಿಡಿಯೋ ಮಾಡಿ ಎಂಜಾಯ್ ಮಾಡಬಹುದು, ಸದ್ಯ ಬೀಟ ವರ್ಷನ್ ಭಾರತದಲ್ಲಿ ಲಾಂಚ್ ಮಾಡಿದ್ದು, ಸ್ವಲ್ಪ ದಿನದಲ್ಲಿ ಎಲ್ಲರ ಮೊಬೈಲ್ ನಲ್ಲೂ ಯೂಟ್ಯೂಬ್ ಶಾರ್ಟ್ಸ್ ಬರಲಿದೆ. ಇನ್ನು ಈ ಯೂಟ್ಯೂಬ್ ಶಾರ್ಟ್ಸ್ ನಲ್ಲಿ ವಿಡಿಯೋ ಹಾಕುವ ಮೂಲಕ ನೀವು ಕೂಡ ಇಲ್ಲಿ ಯೂಟ್ಯೂಬ್ ನಲ್ಲಿ ಹಣಗಳಿಸುವ ರೀತಿ ಇಲ್ಲೂ ಗಳಿಸ ಬಹುದು ಎನ್ನಲಾಗುತ್ತಿದೆ. ಸದ್ಯ ಯೂಟ್ಯೂಬ್ ಶಾರ್ಟ್ಸ್ ಭಾರತದಲ್ಲಿ ಪರಿಚಯವಾಗಿದ್ದು ಮುಂದಿನ‌ ದಿನಗಳಲ್ಲಿ ಇದು ಎಲ್ಲರಿಗೂ ಅನುಕೂಲ ಆಗುವುದರಲ್ಲಿ ಅನುಮಾನವಿಲ್ಲ.

ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಳ್ಳಿ

Similar Articles

Comments
Top