ಸಾಯಿಬಾಬಾ ಟೆಂಪಲ್ ಎದುರೇ ಅವಳು ಬಾಯ್ ಫ್ರೆಂಡ್ ಗೆ

 ವೀಡಿಯೋ ಕಾಲ್ ಮಾಡಿ ಏನ್ ಮಾಡಿದ್ಲು ಅಂದ್ರೆ?

ಕಾಲ‌ ಕೆಟ್ಟೋಯ್ತು ಅಂತೀವಿ….! ಕಾಲ ಕೆಡೋದು ಅಂದ್ರೆ ಏನು?  ಕೆಟ್ ಕೆರ ಹಿಡಿತಾ ಇರೋದು ನಾವೇ…!
ಈ ಸೋಶಿಯಲ್ ಮೀಡಿಯಾ ಜಮಾನದಲ್ಲಿ ತಿಂಡಿ ತಿಂದಿದ್ದು , ಊಟ ಮಾಡಿದ್ದು ಎಲ್ಲವನ್ನೂ ಫೇಸ್ ಬುಕ್ , ಇನ್ ಸ್ಟಾದಲ್ಲಿ ಪೋಸ್ಟ್ ಮಾಡಲೇ ಬೇಕು…! ವಾಟ್ಸಪ್ ಸ್ಟೇಟಸ್ ನಲ್ಲಿ ನಿತ್ಯದ ಆಗು ಹೋಗುಗಳು ಬೀಳದೇ ಇದ್ರೆ ದಿನ ಕಂಪ್ಲೀಟ್ ಆಗಲ್ಲ..!
ಪುರಾಣ ಸಾಕು, ನೇರವಾಗಿ ವಿಷಯಕ್ಕೆ ಬರ್ತೀನಿ.
ದಿನ ಬೆಳಗ್ಗೆ ಎದ್ದು, ಸ್ನಾನ ಮಾಡಿ ಸಾಯಿ ಬಾಬಾ ದೇವಸ್ಥಾನಕ್ಕೆ ಹೋಗಿ ಬಂದು ಕೆಲಸದಲ್ಲಿ ತೊಡಗಿಸಿಕೊಳ್ಳೋದು ನನ್ನ ಬಹುದಿನ ರೂಢಿ. ಹಾಗೆ ನಿನ್ನೆ ಸಹ ಹೋಗಿದ್ದೆ.
ಸಾಯಿಬಾಬಾ ಗೆ ಕೈ ಮುಗಿದು ಹೊರಗೆ ಬಂದೆ. ಅಂಗಳದಲ್ಲಿ ತೀರ್ಥ ಪ್ರಸಾದ ಕೊಡ್ತಿದ್ರು. ತೀರ್ಥ ತಗೋಂಡು, ಪ್ರಸಾದದ ರೂಪದಲ್ಲಿ ಕೊಡ್ತಿದ್ದ ಪಲಾವ್ ತಗೊಂಡು ಗೇಟ್ ನಿಂದ ಆಚೆ ಬಂದು, ನನ್ನಂತಹ ಇತರ ಭಕ್ತಾದಿಗಳ ಜೊತೆ ನಿಂತು ತಿನ್ತಿದ್ದೆ.
ಅಷ್ಟೋತ್ತಿಗೆ ಐದಾರು ಜನ ಹುಡ್ಗೀರು ಸಹ ಪ್ರಸಾದ ತಗೊಂಡು ನಾವಿರುವಲ್ಲಿಗೆ ಬಂದ್ರು. ಅದರಲ್ಲಿ ಒಬ್ಬಾಕೆ ಪ್ರಸಾದದ ಬಟ್ಟಳನ್ನು ಒಂದು ಕೈಯಲ್ಲಿ ಹಿಡಿದು, ಇನ್ನೂಂದು ಕೈನಿಂದ ವಾಟ್ಸಪ್ ಓಪನ್ ಮಾಡಿ ವೀಡಿಯೋ ಕಾಲ್ ಮಾಡಿದ್ಲು…! ಅವಳು ಕಾಲ್ ಮಾಡಿದ್ದು ತನ್ನ ಬಾಯ್ ಫ್ರೆಂಡ್ ಗೆ‌.‌ ಅವಳಲ್ಲಿ ಪ್ರಜ್ಞೆ ಇದ್ದಿದ್ದರೆ ಹಾಗೆ ಎಲ್ಲರೆದುರು ವೀಡಿಯೋ ಕಾಲ್ ಮಾಡ್ತಿರ್ಲಿಲ್ಲ. ಅದೂ ಈಯರ್ ಫೋನ್ ಹಾಕಿಕೊಳ್ಳದೆ ಅಕ್ಕಪಕ್ಕದವರಿಗೆ ಸಂಭಾಷಣೆ ಕೇಳುವಂತೆ ಮಾತಾಡ್ತಿರ್ಲಿಲ್ಲ…! ಹೋಗ್ಲಿ, ಈಕೆಗಂತೂ ಬುದ್ಧಿ, ಪರಿಜ್ಞಾನ ಇಲ್ಲ. ಆ ಹುಡುಗನಿಗಾದರೂ ಇರಬಹುದಿತ್ತಲ್ಲವೇ? ನೆಟ್ಟಗೆ ಮೀಸ ಚಿಗುರದ ಅವನಿಗೂ ಬುದ್ಧಿ ಇರಲಿಲ್ಲ..!
ವೀಡಿಯೋ ಕಾಲ್ ಮಾಡಿದ ಅವಳು ಪ್ರಸಾದದ ಬಟ್ಟಲ್ಲನ್ನು ಮೊಬೈಲ್ ಎದುರು ಅವನ ಮುಖದ ಮುಂದೆ ಹಿಡಿದು, ‘ತಿನ್ನು ಚಿನ್ನಿ. ನಿನ್ನ ಬಿಟ್ಟು ತಿನ್ನೋಕೆ ಮನಸ್ಸಿಲ್ಲ ಕಣೋ’ ಅಂತ ಡವ್ ಮಾಡೋಕೆ‌ ಶುರು ಮಾಡಿದ್ಲು…! ಅತ್ಲಗಿಂದ ಆ ಪುಣ್ಯಾತ್ಮ ಕೂಡ ಮೊಬೈಲ್ ಮೂಲಕವೇ ತಿಂದಂತೆ ಮಾಡಿ‌, ನಾನು ತಿಂದೆ ಅಲ ಬಂಗಾರ ನೀನು ತಿಂದು ಬೇಗ ಬಾ..ಕಾಯ್ತಾ ಇರ್ತೀನಿ ಅಂದ..!
ಇವರ ಈ ಓವರ್ ಆ್ಯಕ್ಟಿಂಗ್ ಹುಚ್ಚು ಪ್ರೀತಿಯನ್ನು ನನ್ನೂ ಒಳಗೊಂಡಂತೆ ಅಲ್ಲಿದ್ದವರೆಲ್ಲ ನೋಡಿದ್ರು…! ಆಕೆಯ‌ ಜೊತೆಗಿದ್ದ ಸ್ನೇಹಿತೆಯರು ಆಕೆಯನ್ನು ಎಚ್ಚರಿಸಿದರೂ ಸಹ ಆಕೆ ಎಚ್ಚೆತ್ತುಕೊಳ್ಳಲಿಲ್ಲ..! ಯಾರ್ ನೋಡಿದ್ರೆ ನಂಗೇನ್ರೇ? ನಾವ್ ನಮ್ಗೋಸ್ಕರ ಬದುಕೋದ್ರೇ ಅಂತ ಡೈಲಾಗ್ ಹೊಡೆದ್ಲು. ಅಷ್ಟರಲ್ಲಿ ವಯಸ್ಕರೊಬ್ಬರು ಅವಳ ಬಳಿ ಹೋಗಿ,‌ ನೋಡಮ್ಮ ಇವೆಲ್ಲ ನಿಮ್ ಮನೆಗೆ ಗೊತ್ತಾದ್ರೆ ಓದೋಕೆ ಕಳಿಸ್ತಾರ? ನೀನು ಹೀಗೆ ಮಾಡೋದ್ರಿಂದ ನಿನ್ನ ಅಪ್ಪ-ಅಮ್ಮನ ಮರ್ಯಾದಿ ಹೋಗೋದು ಅಂತ ಹೇಳಿದ್ರು. ಅವರ ಮಾತಿಗೂ ಆಕೆ ಬೆಲೆ ಕೊಡಲಿಲ್ಲ…! ಏನೂ ಅನ್ನದೆ, ಬರ್ರೆ ಇವ್ರಗಳ ಮಾತು ಕೇಳ್ತಾ ಇದ್ರೆ ಕ್ಲಾಸ್ ಗೆ ಲೇಟ್ ಆಗುತ್ತೆ ಅಂತ ಸ್ನೇಹಿತೆಯರನ್ನು ಕರೆದು ಹೊರಟು ಹೋದ್ಲು…! ಅಲ್ಲಿದ್ದವರೆಲ್ಲ….ಅವಳ ವರ್ತನೆಯಿಂದ ಶಾಲಾ-ಕಾಲೇಜು ವಿದ್ಯಾರ್ಥಿಗಳ ಬಗ್ಗೆ ಮಾತಾಡಿಕೊಳ್ಳಲಾರಂಭಿಸಿದರು. ಹಿರಿಯರು ಅವರ ಕಾಲಕ್ಕೆ ಜಾರಿದರು…!
ನನ್ನ ಪ್ರಕಾರ ಆ ಹುಚ್ಚು ಹುಡ್ಗಿ ಇನ್ನೂ ಹೈಸ್ಕೂಲ್ ಸ್ಟೂಡೆಂಟ್ ಇರಬೇಕು.‌ಇಲ್ಲ ಅಮ್ಮಮ್ಮ ಅಂದ್ರೆ ಪಿಯುಸಿ…!

ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಳ್ಳಿ

Similar Articles

Comments
Top