ನಿನ್ಗೆ ಕನ್ನಡ ಬರಲ್ವಾ ಬಡವ ರಾಸ್ಕಲ್ ಅಂದ ರಿಷಭ್ ಶೆಟ್ಟಿ..!

eno badava rascal kannada baralva song

ನಿರ್ದೇಶಕ ರಿಷಭ್ ಶೆಟ್ಟಿ ಈಗ ಕನ್ನಡ ಬರೋದಿಲ್ಲದವರ ಮೇಲೆ ಸಿಕ್ಕಾಪಟ್ಟೆ ಸಿಟ್ಟಾಗಿದ್ದಾರೆ. ನಿಮ್ ಪುಣ್ಯ ನಿಮ್ಗೆ ಕನ್ನಡನಾಡು ಸಿಕ್ಕೈತೆ, ನಿಮ್ಗೆ ನಮ್ ಎದೆಯಲ್ಲಿ ಜಾಗ ಐತೆ ಅಂತ ಹಾಡು ಹೇಳೋ ಮೂಲಕ ರಿಷಭ್ ಏನೋ ಬಡವ ರಾಸ್ಕಲ್ ನಿನ್ಗೆ ಕನ್ನಡ ಬರಲ್ವಾ ಅಂತ ಹಾಡು ಹೇಳಿದ್ದಾರೆ. 9 ಸುಳ್ಳು ಕಥೆಗಳು ಚಿತ್ರಕ್ಕೆ ಮೊದಲ ಬಾರಿಗೆ ಹಾಡು ಹೇಳಿರೋ ರಿಷಭ್ ತಾವೂ ಚಿಕ್ಕ ವಯಸ್ಸಿನಲ್ಲಿ ಕೆರಾಡಿ ಬೀಡಿನಮನೆಯಲ್ಲಿ‌ ಕುಣಿತ ಭಜನೆ ಕಲಿತಿದ್ದು ಈಗ ಹಾಡು ಹಾಡೋಕೆ ಕಾನ್ಫಿಡೆನ್ಸ್ ತಂದುಕೊಟ್ಟಿದೆಯಂತೆ. ಕನ್ನಡದ ಬಗ್ಗೆ ಹಾಡಿರೋ ಈ ಹಾಡಲ್ಲಿ ಅನ್ಯ ರಾಜ್ಯದವರು ಕನ್ನಡ್ ಅನ್ನೊದನ್ನು.. ಕನ್ನಡ ಕಲಿಸೋಕೆ ನಾವೇ ಹಿಂದೇಟ್ ಹಾಕ್ಬಿಟ್ವಾ ಅಂತ ಹೇಳಿರೋ ಈ ಹಾಡು..ಕನ್ನಡ ಕಲಿತೆ..ಕನ್ನಡ ಗೊತ್ತಿದ್ದು ಕನ್ನಡ ಮಾತನಾಡದೇ ಇರೋರಿಗೆ ಸುತ್ತಿಕೊಂಡು ಹೊಡೆದ ರೀತಿ ಇದೆ..

ಕರ್ನಾಟಕ ರಾಜ್ಯೋತ್ಸವ ಅಂಗವಾಗಿ 9 ಸುಳ್ಳು ಕಥೆಗಳು ಚಿತ್ರತಂಡ ಈ ಹಾಡನ್ನು ರಿಲೀಸ್ ಮಾಡಿದ್ದು ಸದ್ಯ ಇದು ಟ್ರೆಂಡ್ ಆಗ್ತಾ ಇದ್ದು, ಕನ್ನಡ ಕಲಿದೆ ಇರೋ ಬಡವ ರಾಸ್ಕಲ್‍ಗಳಿಗೆ.. ಏನೋ ಕನ್ನಡ ಬರಲ್ವಾ ಕತ್ತೆ ಬಡವ ಅನ್ನೋ ರೇಂಜ್‍ಗೆ ಇದೆ..ಒಟ್ಟಿನಲ್ಲಿ ಕನ್ನಡ್ ಗೊತ್ತಿಲ್ಲ ಅನ್ನೋರಿಗೆ ಕನ್ನಡ ಗೊತ್ತಿರೋರು ಈ ಹಾಡನ್ನು ಒಮ್ಮೆ ಅಲ್ಲ ಮತ್ತೊಮ್ಮ..ಮಗದೊಮ್ಮೆ ಕೇಳಿಸಿ.. ಕನ್ನಡ ಕಲಿಸಿ..

9 ಸುಳ್ಳು ಕಥೆಗಳು ಚಿತ್ರ
ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಳ್ಳಿ

Similar Articles

Comments
Top