ಹೊಸ ಪ್ರಯೋಗದಲ್ಲಿ ಮಿಂಚಿದ ರಾಕಿಂಗ್ ಜೋಡಿ ಯಶ್ ರಾಧಿಕಾ..!

ಸ್ಯಾಂಡಲ್‍ವುಡ್‍ನ ರಾಕಿಂಗ್ ಜೋಡಿ ಯಶ್ ಮತ್ತು ರಾಧಿಕಾ ಪಂಡಿತ್ ಹೊಸ ಪ್ರಯತ್ನ ಮಾಡಿದ್ದು, ಈ ಪ್ರಯತ್ನಕ್ಕೆ ಸ್ಯಾಂಡಲ್‍ವುಡ್ ಫುಲ್ ಫಿದಾ ಆಗಿ ಹೋಗಿದೆ, ಅರೆ ಏನಪ್ಪ ಹೊಸ ಪ್ರಯತ್ನ ಅಂತ ಯೋಚಿಸ್ತಾ ಇದ್ದೀರಾ.. ಯಶ್ ಮತ್ತು ರಾಧಿಕಾ ಪಂಡಿತ್ ಮತ್ತೆ ಒಂದಾಗಿ ಸಿನಿಮಾದಲ್ಲಿ ಬರ್ತಾ ಇದ್ದಾರೆ, ಆದ್ರೆ ಈ ಬಾರಿ ಆ ಜೋಡಿ ತೆರೆಮೇಲೆ ಮಿಂಚೋಲ್ಲ ಬದಲಿಗೆ ತೆರೆಯ ಹಿಂದೆ ಮಿಂಚಲಿದ್ದಾರೆ. ಕೆಜಿಎಫ್ ಚಿತ್ರದ ಮೂಲಕ ಸ್ಟಾರ್ ಮ್ಯೂಸಿಕ್ ಡೈರೆಕ್ಟರ್ ಆದ ರವಿ ಬಸ್ರೂರು ನಿರ್ದೇಶನದಲ್ಲಿ ವಿಭಿನ್ನ ಪ್ರಯೋಗಾತ್ಮಕ ಕಮರ್ಷಿಯಲ್ ಸಿನಿಮಾ ಬರ್ತಾ ಇದೆ ಅನ್ನೋ ಮಾಹಿತಿ ಇತ್ತು, ಇನ್ನು ಆ ಸಿನಿಮಾಗೆ `ಗಿರ್ಮಿಟ್’ ಅನ್ನೋ ಟೈಟಲ್ ಕೂಡ ಇಡಲಾಗಿತ್ತು, ಇನ್ನು ಈ ಚಿತ್ರದಲ್ಲಿ ಪಾತ್ರ ಮಾಡಿರೋರೆಲ್ಲರು ಸಹ ಚಿಕ್ಕ ವಯಸ್ಸಿನ ಮಕ್ಕಳು, ಆದ್ರೆ ಪಾತ್ರವನ್ನು ಮಾಡಿರೋರು ಮಾತ್ರ ಚಿಕ್ಕಮಕ್ಕಳು ಆದ್ರೆ ಪಾತ್ರವೆಲ್ಲವೂ ದೊಡ್ಡವರದ್ದೆ, ಅಂದ್ರೆ ಒಂದು ಪಕ್ಕಾ ಕಮರ್ಷಿಯಲ್ ಸಿನಿಮಾವನ್ನು ಚಿಕ್ಕ ಮಕ್ಕಳು ಮಾಡಿದ್ರೆ ಹೇಗಿರಬಹುದು ಅನ್ನೋ ಒಂದು ಸಣ್ಣ ಪ್ರಯತ್ನಕ್ಕೆ ಕೈ ಹಾಕಿದ್ದಾರೆ ನಿರ್ದೇಶಕ ರವಿ ಬಸ್ರೂರು,

ಆದ್ರೆ ಇಲ್ಲಿ ರಾಕಿಂಗ್ ಜೋಡಿ ಹೇಗಿ ಮಿಂಚ್ತಾರೆ ಅನ್ನೋ ಅನುಮಾನ ನಿಮಗೆಲ್ಲ ಶುರುವಾಗಿದೆ, ಇಲ್ಲಿ ಚಿಕ್ಕ ಮಕ್ಕಳೇ ಅಭಿನಯಿಸಿದ್ರು ಅವರಿಗೆ ಧ್ವನಿ ಮಾತ್ರ ದೊಡ್ಡವರದ್ದೇ, ಹಾಗಾಗಿ ಈ ಚಿತ್ರದ ನಾಯಕ ರಾಜ್ ಪಾತ್ರಕ್ಕೆ ಯಶ್ ಮತ್ತು ನಾಯಕಿ ರಶ್ಮಿ ಪಾತ್ರಕ್ಕೆ ರಾಧಿಕಾ ಪಂಡಿತ್ ಧ್ವನಿ ನೀಡಿದ್ದಾರೆ, ಇದರ ಒಂದು ಟ್ರೈಲರ್ ಈಗ ರಿಲೀಸ್ ಆಗಿದ್ದು ಈ ಟ್ರೈಲರ್ ಯಶ್ ಮತ್ತು ರಾಧಿಕಾ ಪಂಡಿತ್ ವಾಯ್ಸ್ ನಲ್ಲಿ ಮೂಡಿ ಬಂದಿದೆ. ಇನ್ನು ಇಡೀ ಸಿನಿಮಾದಲ್ಲಿ ನಾಯಕ ಮತ್ತು ನಾಯಕಿಗೆ ರಾಕಿಂಗ್ ಜೋಡಿ ವಾಯ್ಸ್ ನೀಡಿದ್ದು, ಈ ಮೂಲಕ ಮೊದಲ ಬಾರಿಗೆ ರಾಕಿಂಗ್ ಜೋಡಿ ಬೇರೆಯವರಿಗೆ ಡಬ್ಬಿಂಗ್ ಮಾಡೋ ಮೂಲಕ ಹೊಸ ಪ್ರಯೋಗಕ್ಕೆ ಮುನ್ನುಡಿ ಬರೆದಿದ್ದಾರೆ. ಇನ್ನು ಒಂದು ಡಿಫರೆಂಟ್ ಸ್ಟೈಲ್‍ನ ಸಿನಿಮಾ ಮಾಡಿರೋ ರವಿ ಬಸ್ರೂರು ಟ್ರೈಲರ್ ಮೂಲಕ ಕ್ಯೂರ್ಯಾಸಿಟಿ ಹುಟ್ಟಿಸಿದ್ದಾರೆ.

ಇನ್ನು ಈ ಚಿತ್ರಕ್ಕೆ ರಾಜ್‍ಕುಮಾರ್ ಬಂಡವಾಳ ಹೂಡಿದ್ದು, ಇದೇ ನವೆಂಬರ್ 8ರಂದು ಚಿತ್ರ ಮಂದಿರದಲ್ಲಿ ಚಿಕ್ಕ ಮಕ್ಕಳ ಕಮರ್ಷಿಯಲ್ ಆಕ್ಟಿಂಗ್ ಜೊತೆ ರಾಕಿಂಗ್ ಜೋಡಿಯ ಜಭರ್ ದಸ್ತ್ ವಾಯ್ಸ್ ಮೋಡಿ ಮಾಡಲಿದೆ..

ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಳ್ಳಿ

Similar Articles

Comments
Top