ಬಿಗ್‌ಬಾಸ್‌ಗೆ ಶಿವರಾಜ್‌ ಕೆ.ಆರ್‌.ಪೇಟೆ, ಹನುಮಂತು ಯಾಕೆ ಹೋಗ್ಲಿಲ್ಲ..! ಅಸಲಿ ಸ್ಟೋರಿ ಇಲ್ಲಿದೆ ನೋಡಿ.!

shivaraj k r pete hanumantu bigg boss

ಬಿಗ್‌ಬಾಸ್‌ ಸೀಸನ್‌ 7 ಶುರುವಾಗಿ ಒಂದು ವಾರ ಕಳೆಯುತ್ತಿದೆ, ಆದ್ರೆ ಬಿಗ್‌ಬಾಸ್‌ ಶುರುವಾಗವ ಮೊದಲು ಮನೆಯೊಳಗೆ ಈ ವ್ಯಕ್ತಿ ಹೋಗ್ತಾರೆ, ಆ ವ್ಯಕ್ತಿ ಹೋಗ್ತಾರೆ ಅನ್ನೋ ಮಾತುಗಳು ಕೇಳಿ ಬರ್ತಾ ಇತ್ತು, ಅದರಲ್ಲೂ ಶಿವರಾಜ್‌ ಕೆ.ಆರ್‌.ಪೇಟೆ ಮತ್ತು ಹನುಮಂತಪ್ಪ ಈ ಬಾರಿ ಬಿಗ್‌ಬಾಸ್‌ ಮನೆಯಲ್ಲಿ ಇದ್ದೇ ಇರ್ತಾರೆ ಅನ್ನೋ ಸುದ್ದಿಯು ಇತ್ತು, ಅಲ್ಲದೇ ಅವರಿಬ್ಬರಿಗೂ ಆಫರ್‌ ಕೂಡ ಹೋಗಿದ್ದು ನಿಜ, ಆದ್ರೆ ಬಿಗ್‌ಬಾಸ್‌ ಗ್ರ್ಯಾಂಡ್‌ ಓಪನಿಂಗ್‌ನಲ್ಲಿ ಈ ಇಬ್ಬರು ಇಲ್ಲದ್ದು ನೋಡಿ ಅವರ ಅಭಿಮಾನಿಗಳಿಗೆ ನಿರಾಸೆ ಉಂಟಾಗಿತ್ತು, ಇನ್ನು ಅವರಿಬ್ಬರಿಗೂ ಬಿಗ್‌ಬಾಸ್‌ಗೆ ಹೋಗದಿರಲು ನಟ ದರ್ಶನ್‌ ಕೂಡ ಸಲಹೆ ನೀಡಿದ್ರು ಅನ್ನೋ ಗಾಳಿ ಸುದ್ದಿ ಕೂಡ ಎಲ್ಲೆಡೆ ಜೋರಾಗಿ ಹರಡಿತ್ತು, ಆದ್ರೆ ಈಗ ಅದರ ಸತ್ಯ ಗೊತ್ತಾಗಿದೆ. ಬಿಗ್‍ಬಾಸ್ ಮನೆಯಲ್ಲಿ ಕುರಿಪ್ರತಾಪ್ ಪಡೆಯುವ ಸಂಭಾವನೆ ಎಷ್ಟು ಗೊತ್ತಾ..?

ಇತ್ತಿಚೆಗೆ ಅಧ್ಯಕ್ಷ ಇನ್‌ ಅಮೇರಿಕಾ ಚಿತ್ರದ ಸಕ್ಸಸ್‌ ಪ್ರೆಸ್‌ ಮೀಟ್‌ನಲ್ಲಿ ಮಾತನಾಡಿದ ಶಿವರಾಜ್‌ ನನಗೆ ಬಿಗ್‌ಬಾಸ್‌ ಮನೆಯಿಂದ ಆಫರ್‌ ಬಂದಿದ್ದು ನಿಜ, ಆದ್ರೆ ನಾನು ಜನರ ಆಶೀರ್ವಾದದಿಂದ ಎಲ್ಲವನ್ನು ಗಳಿಸಿಗೊಳ್ಳುತ್ತಿದ್ದೇನೆ, ಜನ ಪ್ರೀತಿಯನ್ನು ಗಳಿಸಿದ್ದೇನೆ ಬಿಗ್‌ಬಾಸ್‌ ಮನೆಗೆ ಹೋಗಿದ್ರು ಪ್ರೀತಿ ಗಳಿಸುತ್ತಿದ್ದೆ. ಆದ್ರೆ ನನಗೆ ಸಾಲು ಸಾಲು ಅವಕಾಶಗಳು ಸಿನಿಮಾದಲ್ಲಿ ಸಿಗುತ್ತಿದೆ, ಅಲ್ಲದೇ ಈಗಾಗಲೇ ಕೈಯಲ್ಲಿ ನಾಲ್ಕೈದು ಸಿನಿಮಾಗಳಿವೆ, ಭಜರಂಗಿ 2, ಮದಗಜ, ರಾಬರ್ಟ್‌ನಂತಹ ದೊಡ್ಡ ದೊಡ್ಡ ಸಿನಿಮಾದಲ್ಲಿ ನಟಿಸುತ್ತಿದ್ದೇನೆ, ಅಲ್ಲದೇ ರಾಬರ್ಟ್‌ ಸಿನಿಮಾ ನನ್ನ ಜೀವನದ ಮೈಲುಗಲ್ಲು ಸಿನಿಮಾ ಆಗಲಿದೆ ಅಂತ ಹೇಳಿದ್ರು, ಹಾಗಾಗಿ ಬಿಗ್‌ಬಾಸ್‌ಗೆ ಹೋಗಲು ಮನಸು ಮಾಡಲಿಲ್ಲ ಅಂತ ಹೇಳಿದ್ರು.

ಇನ್ನು ಸರಿಗಮಪ ಖ್ಯಾತಿ ಹನುಮಂತಪ್ಪ ಕೂಡ ಬಿಗ್‌ಬಾಸ್‌ ಮನೆಗೆ ಹೋಗ್ತಾರೆ ಅನ್ನೋ ಮಾತಿತ್ತು, ಆದ್ರೆ ರಿಯಾಲಿಟಿ ಶೋಗೆ ಹೋಗುವ ಸದಸ್ಯರ ಬಳಿ ಒಂದು ಅಗ್ರಿಮೆಂಟ್‌ಗೆ ಸಹಿ ಹಾಕಿಸಿಕೊಳ್ತಾರೆ ಆ ಪ್ರಕಾರ ಒಂದು ರಿಯಾಲಿಟಿ ಶೋನಲ್ಲಿ ಭಾಗವಹಿಸುತ್ತಿರುವಾಗ ಇನ್ನೊಂದು ರಿಯಾಲಿಟಿ ಶೋನಲ್ಲಿ ಭಾಗವಹಿಸುವಂತಿಲ್ಲ,

ಹಾಗಾಗಿ ಸದ್ಯ ಹನುಂತಪ್ಪ ಡ್ಯಾನ್ಸ್‌ ಕರ್ನಾಟಕ ಡ್ಯಾನ್ಸ್‌ ರಿಯಾಲಿಟಿ ಶೋನಲ್ಲಿ ಸ್ಪರ್ಧಿಯಾಗಿರುವುದರಿಂದ ಹನುಮನು ಕೂಡ ಬಿಗ್‌ಬಾಸ್‌ ಶೋಗೆ ಎಂಟ್ರಿಕೊಟ್ಟಿಲ್ಲ.. ಅನ್ನೋದು ಅಸಲಿ ಸ್ಟೋರಿ..

ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಳ್ಳಿ

Similar Articles

Comments
Top