ನಿಮಗೆ ಟಿವಿ ನೋಡೋ ಅಭ್ಯಾಸ ಇದ್ಯಾ..? ಅರೇ ಇದೇನಪ್ಪ ಟಿವಿ ನೋಡೋ ಅಭ್ಯಾಸ ಇದ್ಯಾ ಅಂತ ಕೇಳ್ತೀರಲ್ಲ, ಯಾರ್ ತಾನೇ ಟಿವಿ ನೋಡಲ್ಲ, ದಿನಕ್ಕೆ 2 ರಿಂದ 3 ಗಂಟೆನಾದ್ರು ಟಿವಿ ನೋಡೋ ನೋಡ್ತಾರೆ ಅಂತ ಹೇಳ್ತಿರಾ ಅಲ್ವಾ. ಆದ್ರೆ ಇಲ್ಲೊಂದು ಕಂಪನಿ ಟಿವಿ ನೋಡುದ್ರೆ ನಿಮಗೆ ಕನಿಷ್ಟ 65 ಸಾವಿರ ರೂಪಾಯಿ ಸಂಬಳವನ್ನು ನೀಡುತ್ತಂತೆ, ನಿಮಗೆ ನಂಬೋಕೆ ಆಗ್ತಾ ಇಲ್ವಾಲ್ಲ, ಆದ್ರೂ ಇದು ನಿಜ , ಆದ್ರೆ ನೀವು ಈ ರೀತಿ ಸಂಬಳ ಪಡೀಬೇಕು ಅಂದ್ರೆ ಒಂದಿಷ್ಟು ರೂಲ್ಸ್ ಅಂಡ್ ರೆಗ್ಯೂಲೆಶನ್ಸ್ಗಳಿ ಇದೆ ಅದನ್ನ ನೀವು ಪಾಲಿಸಿದ್ರೆ ಆಉತು ನೀವು ಖಂಡಿತ ಭರ್ಜರಿ ಸಂಬಳ ಪಡೆದುಕೊಳ್ಳ ಬಹುದು.
ಮೊದಲೇನಾದಾಗಿ ಈ ಟಿವಿ ನೋಡೋ ಕೆಲಸಕ್ಕೆ ಸೇರಿಕೊಳ್ಳ ಬೇಕು ಅಂದ್ರೆ ನಿಮಗೆ ಚೆನ್ನಾಗಿ ಇಂಗ್ಲೀಷ್ ಬರವಣಿಗೆ ಜೊತೆ ಮಾತಾಡೋಕು ಬರಬೇಕು, ಜೊತೆಗೆ ನಿಮ್ಮ ವಯಸ್ಸು 18 ವರ್ಷ ಮೀರಿರ ಬೇಕು.

ಹೌದು ಆನ್ಬೈ ಎಂಬ ಕಂಪನಿ ಇಂತಹ ಒಂದು ಕೆಲಸದ ಆಫರ್ ಅನ್ನು ನೀಡಿದೆ, ಆದ್ರೆ ಈ ಕೆಲಸ ಮಾಡಬೇಕಾದ್ರೆ ನೀವೂ ಟಿವಿ,ಕ್ಯಾಮರಾ,ಆನ್ರಾಯ್ಡ್,ಹೆಡ್ಫೋನ್ ಮತ್ತು ಹೋಮ್ ಥಿಯೇಟರ್ ಬಗ್ಗೆ ಜ್ಞಾನವನ್ನು ಹೊಂದಿರಬೇಕು.
ಇವೆಲ್ಲಾ ಗೊತ್ತಿದ್ದು ನೀವೂ ಕೆಲಸಕ್ಕೆ ಆಯ್ಕೆಯಾದರೆ,ನೀವು ಉತ್ಪನ್ನದ ಗುಣಮಟ್ಟ ಮತ್ತು ಅದರ ಕೆಲಸದ ನಿಕರತೆ ಜೊತೆಗೆ ಯಾವೆಲ್ಲಾ ಡಿಫೆಕ್ಟ್ ಇದೆ ಅನ್ನೋದನ್ನ ಗುರುತಿಸಿ ಅದರ ಬಗ್ಗೆ ಒಂದು ರಿವ್ಯೂ ಬರೆದು ಕೊಡಬೇಕು .
ಈ ವಿಚಾರವಾಗಿ ಹೇಳಿಕೊಂಡಿರೋ ಆನ್ಬೈ ಮಾಲೀಕರು ಗ್ರಾಹಕರಿಗೆ ಉತ್ತಮವಾದ ಉತ್ಪನ್ನವನ್ನು ಕೊಡುವ ನಿಟ್ಟಿನಲ್ಲಿ, ಈ ವಿಮರ್ಶೆಗಳನ್ನು ಸಂಗ್ರಹಿಸಿ ಆ ಮೂಲಕ ಗ್ರಾಹಕರಿಗೆ ಉತ್ತಮ ಗುಣಮಟ್ಟದ ಉತ್ಪನ್ನವನ್ನು ನೀಡುವುದು, ಆ ಮೂಲಕ ಗ್ರಾಹಕರ ವಿಶ್ವಾಸ ಗಳಿಸಲು ಇದು ಅನುಕೂಲವಾಗಲಿದೆ ಅಂತ ಹೇಳಿಕೊಂಡಿದ್ದಾರೆ.
ನಿಮಗೂ ಏನಾದ್ರು ಈ ಕೆಲಸದ ಅವಶ್ಯಕತೆ ಇದ್ರೆ ಈ ಕೂಡಲೇ ಅಪ್ಲೈ ಮಾಡಿ ಆದ್ರೆ ಇಂಗ್ಲೀಷ್ನಲ್ಲಿ ಪರಿಣಿತಿ ಇರಬೇಕು ಅದರ ಜೊತೆಯಲ್ಲಿ ಎಲೆಕ್ಟ್ರಾನಿಕ್ಸ್ ಐಟಂ ವಿಷಯದಲ್ಲೂ ಜ್ಞಾನವಿರಬೇಕು.