ರಶ್ಮಿಕಾ ಬಿಟ್ಟ ವೃತ್ರ ಸಕ್ಸಸ್ ಆಯ್ತು, ಕ್ಷಣ ಕ್ಷಣ ಥ್ರಿಲ್ ಕೊಡ್ತಿದೆ ವೃತ್ರ.!

vruthraa kannada movie review

ಒಂದು ರೇಂಜಿಗೆ ನಿರೀಕ್ಷೆ ಹುಟ್ಟಿಸಿದ್ದ ವೃತ್ರ ಸಿನಿಮಾ ಕಳೆದ ಶುಕ್ರವಾರ ರಾಜ್ಯದಾದ್ಯಂತ ತೆರೆಗೆ ಬಂದಿದೆ. ರಿಲೀಸ್ ಆದ ಎಲ್ಲಾ ಕಡೆ ಪ್ರೇಕ್ಷಕರಿಂದ ಒಳ್ಳೆಯ ರೆಸ್ಪಾನ್ಸ್ ಪಡೆದುಕೊಂಡಿದೆ. ಟ್ರೈಲರ್ ನಿಂದ ಸಾಕಷ್ಟು ಕುತೂಹಲ ಹುಟ್ಟಿಸಿದ್ದ ಈ ಚಿತ್ರ ಸಿನಿಮಾ ರಿಲೀಸ್ ಆದ್ಮೇಲೂ ನಿರೀಕ್ಷೆಯನ್ನ ಉಳಿಸಿಕೊಂಡಿದೆ.

ರಶ್ಮಿಕಾ ಬಿಟ್ಟ ವೃತ್ರ ಸಕ್ಸಸ್ ಆಯ್ತು, ಕ್ಷಣ ಕ್ಷಣ ಥ್ರಿಲ್ ಕೊಡ್ತಿದೆ ವೃತ್ರ.!

ಸುಲಭವಾದ ಕೇಸ್ ಒಂದನ್ನು ಕಾಲ್ ಮಾಡಲು ಹೊರಟು ಅದಕ್ಕೆ ಸಿಗುವ ಪ್ರತಿಯೊಂದು ಸುಳಿವನ್ನು ಹೇಗೆ ಕಂಡುಹಿಡಿಯುತ್ತಾರೆ ಅದನ್ನು ಹೇಗೆ ಬೋಧಿಸುತ್ತಾರೆ ಎಂಬುದರ ಸುತ್ತ ಚಿತ್ರ ಸುತ್ತುತ್ತದೆ. ಇದಕ್ಕೂ ಚಿತ್ರದ ಹೆಸರಿಗೂ ಸಂಬಂಧವೇ ಎಂದು ತಿಳಿಯಲು ಚಿತ್ರಮಂದಿರಕ್ಕೇ ಹೋಗಬೇಕು ಕಾದಂಬರಿಯಂತೆ ಇಲ್ಲದೆ ವಿಭಿನ್ನ ಶೈಲಿಯಲ್ಲಿ ನಿರ್ದೇಶಕ ಸಿನಿಮಾವನ್ನು ಅಂತ್ಯಗೊಳಿಸಿದ್ದಾರೆ. ಕೊನೆಯವರೆಗೂ ಪ್ರೇಕ್ಷಕರನ್ನು ಹಿಡಿದಿಟ್ಟುಕೊಳ್ಳುವಂತೆ ಪ್ರತಿ ಹಂತದಲ್ಲೂ ಟ್ವಿಸ್ಟ್ ಗಳನ್ನು ನೀಡಿದ್ದಾರೆ.

ವೃತ್ರ ಸಿನಿಮಾ ಟೈಟಲ್ ಎಷ್ಟು ಭಿನ್ನವಾಗಿದೆಯೋ ಅಷ್ಟೇ ಭಿನ್ನವಾಗಿದೆ. ಚಿತ್ರದ ಕಥಾ ಹಂದರ ಮತ್ತು ನಿರೂಪಣೆ. ಗೌತಮ್ ಅಯ್ಯರ್ ನಿರ್ದೇಶನ ಇಂಪ್ರೆಸೀವ್ ಆಗಿದೆ. ಕ್ಷಣ ಕ್ಷಣ ಕುತೂಹಲ ಭರಿತವಾಗಿ ಸಾಗೋ ವೃತ್ರ ಚಿತ್ರದಲ್ಲಿ ನಾಯಕಿಯಾಗಿ ಕಾಣಿಸಿಕೊಂಡಿರೋ ನಿತ್ಯಾಶ್ರೀ ಪಾತ್ರ ಇಂಟ್ರೆಸ್ಟಿಂಗ್ ಆಗಿದೆ.. ಈ ನಟಿಯ ಪರ್ಫಾರ್ಮೆನ್ಸ್ ಅದ್ಭುತವಾಗಿದ್ದು, ಖಂಡಿತ ಕನ್ನಡ ಚಿತ್ರರಂಗಕ್ಕೆ ಮತ್ತೊಬ್ಬ ಪರ್ಫಾರ್ಮರ್ ನಟಿ ಸಿಕ್ಕಿದಂತಾಗಿದೆ.. ಇವ್ರ ಜೊತೆಗ ನಟಿ ಸುಧಾರಾಣಿ ಹಾಗೂ ಪ್ರಕಾಶ್ ಬೆಳವಾಡಿ ಪಾತ್ರಗಳು ಹೈಲೈಟ್ ಆಗಿ ಕಾಣ್ತಿದೆ.. ಸೀನ್ ಟು ಸೀನ್ ಸಸ್ಪೆನ್ಸ್ ಥ್ರಿಲ್ಲರ್ ಮಾದರಿಯಲ್ಲಿ ಸಾಗೋ ಈ ಇನ್ವೆಸ್ಟಿಗೇಶನ್ ಸ್ಟೋರಿ..
ಟೆಕ್ನಿಕಲಿ ತುಂಬಾ ಸ್ಟ್ರಾಂಗ್ ಆಗಿ ಮಾಡಿದ್ದಾರೆ.. ಆದಿತ್ಯ ವೆಂಕಟೇಶ್ ಅವರ ಅದ್ಭುತವಾದ ಕ್ಯಾಮೆರಾ ವರ್ಕ್ಸ್ಚಿತ್ರದ ಕಥೆ ಮತ್ತು ನಿರೂಪಣೆಗೆ ಪ್ಲಸ್ ಆಗಿದೆ.. ಡಿಎ ವಸಂತ್ ಅವರ ಬ್ಯಾಕ್ ಗ್ರೌಂಡ್ ಮ್ಯೂಸಿಕ್ ಸಿನಿಮಾಗೆ ಸಿನಿಮಾಗೆ ಮತ್ತೊಂದು ಎನರ್ಜಿಯಾಗಿದೆ.. ಎಲ್ಲಾ ಆಂಗಲ್ನಿಂದ್ಲೂ ಥ್ರಿಲ್ ಕೊಡ್ತಿರೋ ವೃತ್ರ ಚಿತ್ರವನ್ನ ನಿಮಗೆಲ್ಲಾ ಗೊತ್ತಿರೋ ಹಾಗೇ ರಶ್ಮಿಕಾ ಮಂದಣ್ಣ ಮಾಡ್ಬೇಕಿತ್ತು.. ಆದ್ರೆ ಅವ್ರು ಕೈ ಬಿಟ್ಟ ನಂತ್ರ ಈ ಚಿತ್ರ ನಿತ್ಯಶ್ರೀ ಪಾಲಾಯ್ತು. ಸದ್ಯ ಚಿತ್ರ ನೋಡ್ತಿರೋ ಪ್ರೇಕ್ಷಕರು ಚಿತ್ರದ ಬಗ್ಗೆ ಪಾಸಿಟೀವ್ ಮಾತುಗಳನ್ನಾಡ್ತಿದ್ದಾರೆ… ಇಂತಹ ಪ್ರಯತ್ನಗಳು ಹೆಚ್ಚು ಹೆಚ್ಚು ಆಗ್ಬೇಕು… ಇಂತಹ ಸಿನಿಮಾಗಳು ಗೆಲ್ಲ ಬೇಕು.. ನಿಲ್ಲಬೇಕು ಅಂತ ಉದ್ಯಮದ ಮಂದಿಯೂ ಈ ಚಿತ್ರಕ್ಕೆ ಸಪೋರ್ಟ್ ಮಾಡ್ತಿದ್ದಾರೆ.. ಒಂದೇ ಮಾತಲ್ಲಿ ಹೇಳೋದಾಗ್ರೆ, ವೃತ್ರ ಸಿನಿಮಾ ಒಂದೊಳ್ಳೆ ಥ್ರಿಲ್ಲಿಂಗ್ ಸಿನಿಮಾ ಮಿಸ್ ಮಾಡ್ದೇ ನೋಡಿ ಎಂಜಾಯ್ ಮಾಡಿ.

ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಳ್ಳಿ

Similar Articles

Comments
Top