ಕಪ್ ಗೆಲ್ಬೇಕು ಅಂದ್ರೆ ಫಿಟ್ ಆಗಿರಬೇಕು – ವಿರಾಟ್ ಕೊಹ್ಲಿ..!

virat-fitness

ಟೀಂ ಇಂಡಿಯಾ ವಿಶ್ವಕಪ್‍ನಲ್ಲಿ ಸತತ ಗೆಲುವಿನ ಅಲೆಯಲ್ಲಿ ತೆಲ್ತಾ ಇದ್ದು, ಇದೇ 27ರಂದು ವೆಸ್ಟ್ ಇಂಡೀಸ್ ವಿರುದ್ಧದ ಪಂದ್ಯಕ್ಕೆ ಭರ್ಜರಿ ತಯಾರಿ ನಡೆಸಿಕೊಂಡಿದೆ. ಇನ್ನು ತಂಡದಲ್ಲಿ ಗಾಯಾಳುಗಳ ಸಮಸ್ಯೆ ಕಾಡುತಿದ್ದು ಇದ್ಯಾವುದಕ್ಕೂ ತಲೆ ಕೆಡಿಸಿಕೊಳ್ಳದೇ ಕ್ಯಾಪ್ಟನ್ ವಿರಾಟ್ ಕೊಹ್ಲಿ ಜಿಮ್‍ನಲ್ಲಿ ಸಖತ್ ಆಗೆ ವರ್ಕೌಟ್ ಮಾಡುತ್ತಿದ್ದಾರೆ.

Read : ಡಿವೋರ್ಸ್ ಕೇಳಿದ ಪತಿಯಿಂದಲೇ ಇನ್ನೊಂದು ಮಗು ಬೇಕೆಂದ ಪತ್ನಿ !

ವಿರಾಟ್ ತಮ್ಮ ಫಿಟ್‍ನೆಸ್ ಬಗ್ಗೆ ಸಾಕಷ್ಟು ಕಾಳಜಿ ತೋರಿಸ್ತಾರೆ, ಇನ್ನು ಟೀಂ ಇಂಡಿಯಾದಲ್ಲಿ ಸಖತ್ ಫಿಟ್ ಆಟಗಾರ ಯಾರು ಅಂದ್ರೆ ಎಲ್ಲಾರೂ ಹೇಳೋದು ವಿರಾಟ್ ಅಂತಾನೇ, ಇನ್ನು ವಿಶ್ವಕಪ್ ಮತ್ತೊಮ್ಮೆ ಭಾರತಕ್ಕೆ ತರಲು ಟೀಂ ಇಂಡಿಯಾ ರೆಡಿಯಾಗಿದ್ದು, ಇದಕ್ಕಾಗಿ ಸಖತ್ ಕಸರತ್ತುಗಳನ್ನು ನಡೆಸುತ್ತಿದ್ದಾರೆ, ಇನ್ನು ಕ್ಯಾಪ್ಟನ್ ಕೊಹ್ಲಿ ರಾತ್ರಿಯಾದ್ರೂ ಜಿಮ್‍ನಲ್ಲಿ ಬೆವರಿಳಿಸುತ್ತಿದ್ದಾರೆ. ಈಗಾಗ್ಲೇ ದಾಖಲೆಗಳ ಮೇಲೆ ದಾಖಲೆ ಬರೆಯುತ್ತಿರೋ ವಿರಾಟ್ ಈಗಾಗ್ಲೇ ಹಳೇ ಆಟಗಾರರ ಹಲವು ರೆಕಾರ್ಡ್‍ಗಳನ್ನ ಫೀಸ್ ಫೀಸ್ ಮಾಡಿದ್ದಾರೆ,
ವಿರಾಟ್ ಸದ್ಯ ಜಿಮ್‍ನಲ್ಲಿ ವರ್ಕೌಟ್ ಮಾಡೋ ವಿಡಿಯೋ ಒಂದನ್ನ ಸಾಮಾಜಿಕ ಜಾಲತಾಣದಲ್ಲಿ ಶೇರ್ ಮಾಡಿದ್ದು ,ಯಾವತ್ತೂ ಜಿಮ್ ತಪ್ಪಿಸೋಲ್ಲ, ಕಷ್ಟಪಡದಿದ್ರೆ ಏನೂ ಮಾಡು ಸಾದ್ಯವಿಲ್ಲ ಅಂತ ಬರೆದುಕೊಂಡಿದ್ದಾರೆ.

ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಳ್ಳಿ

Similar Articles

Comments
Top