ವಿರಾಟ್‌ ಸೇವೆ ಲಭ್ಯ ಸಿಹಿ ತಿನ್ನಲು ನಾಚಿಕೆ ಬೇಡ – ಝೋಮ್ಯಾಟೋ..!

ವಿರಾಟ್‌ ಕೊಹ್ಲಿ ತಮ್ಮ ಸೋಶಿಯಲ್‌ ಮೀಡಿಯಾದಲ್ಲಿ ತಂದೆ ಆಗುತ್ತಿರುವ ಸಿಹಿಸುದ್ದಿಯನ್ನು ಹಂಚಿಕೊಂಡ ಬೆನ್ನಲ್ಲೇ ವಿರುಷ್ಕಾ ದಂಪತಿಗಳಿಗೆ ಅಭಿಮಾನಿಗಳು ತಮ್ಮದೇ ಆದ ಸ್ಟೈಲ್‌ನಲ್ಲಿ ವಿಶ್‌ ಮಾಡುತ್ತಿದ್ದಾರೆ. ಇನ್ನು ಕೆಲವ್ರು ಸ್ವೀಟ್‌ ಕೇಳುವ ಮೂಲಕ ವಿರುಷ್ಕಾ ದಂಪತಿಗಳಿಗೆ ಶುಭಾಶಯಗಳನ್ನು ಹೇಳಿದ್ದಾರೆ. ಹೀಗಿರುವಾಗಲೇ ಝೋಮ್ಯಾಟೋ ಕೂಡ ವಿಭಿನ್ನವಾಗಿ ಟ್ವೀಟ್‌ ಮಾಡುವ ಮೂಲಕ ನೆಟ್ಟಿಗರ ಮನಸ್ಸನ್ನು ಗೆದ್ದಿದೆ. ವಿರಾಟ್‌ ಸಂತಸದ ಸುದ್ದಿಯನ್ನು ಹಂಚಿಕೊಂಡ ನಂತರ ಅನೇಕರು ಟ್ವೀಟ್‌ ಮಾಡಿ ಶುಭಕೋರಿದ್ದು, ಅದೇ ರೀತಿ ಝೋಮ್ಯಾಟೋ ಕೂಡ ಶುಭಕೋರಿದೆ ತಮ್ಮ ಟ್ವೀಟರ್‌ನಲ್ಲಿ

ʻಇದು ನಿಜವಾದ ಶುಭ ಸುದ್ದಿ, ಸಿಹಿ ತಿನ್ನಲು ನಾಚಿಕೊಳ್ಳಬೇಡಿ ನಿಮಗಾಗಿ ʻವಿರಾಟʼ ಸೇವೆ ಲಭ್ಯವಿರುತ್ತದೆ ಎಂದು ಬರೆದು ವಿರುಷ್ಕಾ ದಂಪತಿಗಳಿಗೆ ಶುಭಕೋರಿದ್ದಾರೆ. ಹೀಗೆ ಟ್ವೀಟ್‌ ಮಾಡದ ಕೆಲವೆ ಹೊತ್ತಿನಲ್ಲಿ ಸಾವಿರಾರು ಲೈಕ್ಸ್‌ ಪಡೆದಿದ್ದು, ಕೆಲವ್ರು ಕಾಮೆಂಟ್‌ ಮಾಡುವ ಮೂಲಕ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಸದ್ಯ ಈ ಟ್ವೀಟ್‌ನಿಂದಾಗಿ ಸೋಶಿಯಲ್‌ ಮೀಡಿಯಾದಲ್ಲಿ ಅನೇಕ ಜೋಕ್‌ಗಳು ಕೂಡ ಓಡಾಡಲು ಶುರುವಾಗಿದೆ.

ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಳ್ಳಿ

Similar Articles

Comments
Top