ವಿಕ್ರಂ ಲ್ಯಾಂಡರ್ ಸಂಪರ್ಕ ಸಿಗುವವರೆಗೂ ಸೇತುವೆಯಿಂದ ಇಳಿಯಲ್ಲ ಎಂದ `ರಜನಿಕಾಂತ್’.!

ಚಂದ್ರಯಾನ 2 ಇನ್ನೇನೂ ಯಶಸ್ವಿಯಾಗಿ ಚಂದ್ರನನ್ನೂ ಸ್ಪರ್ಶಿಸಲಿದೆ ಅನ್ನುವಾಗಲೇ, ವಿಕ್ರಂ ಲ್ಯಾಂಡರ್ ತನ್ನ ಸಂಪರ್ಕವನ್ನು ಕಳೆದುಕೊಂಡು ಇಡೀ ಭಾರತವೇ ಬೇಸರದಲ್ಲಿ ಇರುವಂತೆ ಮಾಡಿತು, ಆದ್ರೆ ರಜಿನಿಕಾಂತ್ ಎಂಬ ವ್ಯಕ್ತಿಯೊಬ್ಬ ವಿಕ್ರಂ ಲ್ಯಾಂಡರ್ ಸಂಪರ್ಕ ಕಳೆದುಕೊಂಡಿರುವುದಕ್ಕೆ ಮನನೊಂದು ಸೇತುವೆಯ ಕಂಬವನ್ನು ಹತ್ತಿರುವ ಘಟನೆ ಉತ್ತರ ಪ್ರದೇಶದ ಪ್ರಯಾಗ್‍ರಾಜ್‍ನಲ್ಲಿ ನಡೆದಿದೆ. ವಿಕ್ರಂ ಲ್ಯಾಂಡರ್ ಸಂಪರ್ಕಿಸುವವರೆಗೂ ನಾನು ಸೇತುವೆಯಿಂದ ಕೆಳಗೆ ಇಳಿಯುವುದಿಲ್ಲ ಎಂದು ಪ್ರಯಾಗ್‍ರಾಜ್‍ನಲ್ಲಿ ಇರುವ ನ್ಯೂ ಯಮುನಾ ಸೇತುವೆ ಕಂಬ ಹತ್ತಿದ್ದಾನೆ ರಜನಿಕಾಂತ್. ಸೋಮವಾರ ರಾತ್ರಿ ರಜನಿಕಾಂತ್ ಸೇತುವೆ ಕಂಬ ಹತ್ತಿ ರಾಷ್ಟ್ರಧ್ವಜವನ್ನು ಹಿಡಿದು ನಿಂತಿದ್ದಾನೆ. ಇದನ್ನು ನೋಡಿದ ಸಾರ್ವಜನಿಕರು ತಮ್ಮ ಮೊಬೈಲ್‍ನಲ್ಲಿ ವಿಡಿಯೋ ಮಾಡಿಕೊಂಡಿದ್ದಾರೆ. ಸೇತುವೆ ಮೇಲೆ ಗಂಟೆಗಟ್ಟಲೆ ನಿಂತಿದ್ದ ರಜನಿಕಾಂತ್ ನಂತ ಕಬ್ಬಿಣದ ತಟ್ಟೆ ಮೂಲಕ ಒಂದು ಪತ್ರವನ್ನು ಜನರಿಗೆ ನೀಡಿದ್ದಾನೆ. ಪತ್ರದಲ್ಲಿ ವಿಕ್ರಂ ಲ್ಯಾಂಡರ್ ಇಸ್ರೋ ಸಂಪರ್ಕಕ್ಕೆ ಬರುವವರೆಗೂ ನಾನು ಸೇತುವೆಯಿಂದ ಇಳಿಯುವುದಿಲ್ಲ, ಅಲ್ಲದೇ ನಾನು ಇಲ್ಲಿಯೇ ಇದ್ದು ಚಂದ್ರದೇವನಿಗೆ ಪ್ರಾರ್ಥನೆ ಮಾಡುತ್ತೇನೆ ಎಂದು ಬರೆದಿದ್ದಾನೆ.

ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಳ್ಳಿ

Similar Articles

Comments
Top