ಈ ಸಿನಿಮಾ ನೋಡಿ ಮೂರು ದಿನ ನಿದ್ದೆ ಮಾಡಿರಲಿಲ್ಲ-ವಿಜಯ್‌ ದೇವರಕೊಂಡ..!

ಕೆಲವೊಮ್ಮೆ ಒಂದೊಂದು ಘಟನೆಗಳು ನಮ್ಮ ಮನಸ್ಸಿನ ಮೇಲೆ ಗಾಢವಾಗಿ ಬೇರೂರಿ ಬಿಡುತ್ತದೆ. ಅದರಲ್ಲೂ ಸಿನಿಮಾ ಕಥೆಗಳು ಅಂತು ನಮ್ಮ ಜೀವನದಲ್ಲಿ ಹೆಚ್ಚಾಗಿ ಅನ್ವಯವಾಗುವಂತೆ ಮಾಡಿಬಿಡುತ್ತದೆ.ಅಲ್ಲದೇ ಸಿನಿಮಾ ನೋಡಿ ಬಂದ ಮೇಲು ಆ ಸಿನಿಮಾ ಕಥೆ ಹಲವು ದಿನಗಳ ವರಗೆ ನಮ್ಮನ್ನು ಕಾಡಲು ಶುರುಮಾಡಿ ಬಿಡುತ್ತದೆ. ಅದೇ ರೀತಿಯ ಘಟನೆ ಈಗ ಟಾಲಿವುಡ್‌ನ ಸ್ಟಾರ್‌ ನಟ ವಿಜಯ್‌ ದೇವರಕೊಂಡಾಗೂ ಆಗಿದೆ. ವಿಜಯ್‌ ದೇವಕೊಂಡಗೆ ಈ ಸಿನಿಮಾ ನೋಡಿದ ಮೇಲೆ ಮೂರು ದಿನ ನಿದ್ದೆ ಬಂದಿರಲಿಲ್ಲವಂತೆ.

ಹೌದು ಇತ್ತಿಚೆಗೆ ಟಿವಿ ಸಂದರ್ಶನವೊಂದರಲ್ಲಿ ಮಾತನಾಡಿದ ವಿಜಯ್‌ ದೇವರಕೊಂಡ ನಾನು ರಣ್‌ವೀರ್‌ ಸಿಂಗ್‌ ಅವರ ʻಗಲ್ಲಿಬಾಯ್‌ʼ ಸಿನಿಮಾ ನೋಡಿದ ಮೇಲೆ ನನಗೆ ಮೂರು ದಿನ ನಿದ್ದೆಯೇ ಬರಲಿಲ್ಲ ಅಂತ ಹೇಳಿದ್ದಾರೆ. ಆ ಸಿನಿಮಾ ನೋಡಿದ ಮೇಲೆ ನಾನು ಏನು ಮಾಡುತ್ತಿದ್ದೇನೆ ಅನ್ನೋ ಅನುಮಾನ ಶುರುವಾಯಿತು. ಯಾವ ಸಿನಿಮಾ ಮಾಡುತ್ತಿದ್ದೇನೆ ಅಂತ ಯೋಚನೆ ಶುರುವಾಯಿತು ಅಂತ ಹೇಳಿದ್ದಾರೆ. ಇನ್ನು ಇದೇ ಕಾರ್ಯಕ್ರಮದಲ್ಲಿ ರಣ್‌ವೀರ್‌ ಸಿಂಗ್‌ ಕೂಡ ಇದ್ದದ್ದು ಸಹ ಒಂದು ವಿಶೇಷ. ರಣ್‌ವೀರ್‌ಸಿಂಗ್‌ ಸಿನಿಮಾಗಳ ಆಯ್ಕೆ ಪಾತ್ರ ನಿರ್ವಹಣೆ ನೋಡಿ ವಿಜಯ್‌ ದೇವರಕೊಂಡ ಖುಷಿಪಡುತ್ತಾರಂತೆ ಮತ್ತು ಗಲ್ಲಿ ಬಾಯ್‌ ಸಿನಿಮಾ ಅವರಿಗೆ ಸ್ಫೂರ್ತಿ ನೀಡಿದೆ ಎಂದು ಹೇಳಿದ್ದಾರೆ.

ಇನ್ನು ʻಗಲ್ಲಿಬಾಯ್‌ʼ ಕಳೆದ ವರ್ಷ ರಿಲೀಸ್‌ ಆಗಿ ಮೆಚ್ಚುಗೆಯನ್ನು ಪಡೆದಿದ್ದ ಸಿನಿಮಾವಾಗಿತ್ತು, ಈ ಸಿನಿಮಾ ಈ ವರ್ಷ ಆಸ್ಕರ್‌ಗೆ ಆಯ್ಕೆಯಾದ ಭಾರತೀಯ ಸಿನಿಮಾ ಕೂಡ ಆಗಿತ್ತು.

ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಳ್ಳಿ

Similar Articles

Comments
Top