ರೂಂ ತಲುಪೋಕೆ‌ ಈ ಹುಡುಗ ಮಾಡಿದ ಐಡಿಯಾ ನೋಡಿ ಶಾಕ್ ಆಗ್ತೀರಾ.!

used zomato as taxi

ಬೆಂಗಳೂರಿನಂತಹ ಮಹಾ ನಗರಿಯಲ್ಲಿ ಒಂದು ಕಡೆಯಿಂದ ಇನ್ನೊಂದು ಏರಿಯಾಗೆ ಹೋಗಬೇಕು ಅಂದ್ರೆ ದಿನಗಟ್ಟಲೇ ಬೇಕಾಗುತ್ತೆ, ಇನ್ನು ಕ್ಯಾಬ್, ಆಟೋ,ಬಸ್ ಹಿಡಿಯೋದರಲ್ಲಿ ಸಾಕಾಗಿ ಹೋಗಿರುತ್ತೆ, ಆದ್ರೆ ಇಲ್ಲೊಬ್ಬ ಯುವಕ ಮಾಡಿರೋ ಐಡಿಯಾ ನೀವೂ ಮಾಡಿದ್ರೆ ಬೇಗ ಮನೆ ಸೇರಿಕೊಳ್ಳಬಹುದು, ಹೌದು ಹೈದರಾಬಾದ್ ಒಬೇಶ್ ಕೊಮಿರಿಶೆಟ್ಟಿ ತನ್ನ ಮನೆಯನ್ನು ತಲುಪಲು ಝೋಮ್ಯಾಟೋವನ್ನು ಬಳಸಿಕೊಂಡಿದ್ದಾರೆ. ಈ ಬಗ್ಗೆ ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಂಡಿರೋ ಈ ಯುವಕ ರೂಂಗೆ ಹೋಗಲು ಯಾವೂದೇ ಆಟೋ ಸಿಗದಿದ್ದಾದ, ಕ್ಯಾಬ್ ಫೇರ್ ಕೂಡ ದುಬಾರಿಯಾಗಿತ್ತು, ಆಗ ಐಡಿಯಾ ಉಪಯೋಗಿಸಿ ಹತ್ತಿರದಲ್ಲೇ ಇರೋ ಝೋಮ್ಯಾಟೋ ಸೇವೆ ಇರೋ ಹೋಟೆಲ್ ನಲ್ಲಿ ಆಹಾರ ಆರ್ಡರ್ ಮಾಡಿ, ಬಳಿಕ ಡೆಲಿವರಿ ಬಾಯ್ ಗೆ ಕಾಲ್ ಮಾಡಿ ಆ ಡೆಲಿವರಿ ಬಾಯ್ ಜೊತೆಗೆ ರೂಂ ತಲುಪಿದ್ದಾನೆ. ಇದರ ಬಗ್ಗೆ ತನ್ನ ಟ್ವಿಟರ್ ನಲ್ಲಿ ಬರೆದುಕೊಂಡಿದ್ದು ‘ಒಂದೇ ಕಲ್ಲಿನಲ್ಲಿ ಎರಡು ಹಕ್ಕಿ ಹೊಡೆದಿದ್ದೇನೆ ಅಂತ ಬರೆದುಕೊಂಡಿದ್ದಾರೆ, ಇನ್ನು ಈ ಪೋಸ್ಟ್ ಗೆ ಝೋಮ್ಯಾಟೋ ‘ಹೊಸ ಸಮಸ್ಯೆಗೆ ಹೊಸ‌ಪರಿಹಾರ’ ಅಂತ ಕಾಮೆಂಟ್ ಮಾಡಿದೆ, ಇನ್ನು ಈ ವಿಷಯ ತಿಳಿದ ನೆಟ್ಟಿಗರು ಸಹ ಫಿದಾ ಆಗಿದ್ದು ಸದ್ಯ ಈ ಪೋಸ್ಟ್ ಈಗ ಎಲ್ಲಾ ಕಡೆ ವೈರಲ್ ಆಗಿದೆ.

ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಳ್ಳಿ

Similar Articles

Comments
Top