ಕೊರೋನಾ ಹರಡುವ ಸ್ಪರ್ಧೆ ಏರ್ಪಡಿಸಿದ ವಿದ್ಯಾರ್ಥಿಗಳು..!

ಮನುಷ್ಯನ ಹುಚ್ಚಾಟಕ್ಕೆ ಕೊನೆಯೇ ಇಲ್ಲ ಅನ್ನೋ ಹಾಗೆ ಆಗಿದೆ, ಯಾವುದನ್ನು ಮಾಡಬೇಡಿ ಅನ್ನುತ್ತೇವೆಯೋ ಅದನ್ನೇ ಮಾಡುತ್ತೇನೆ ಅನ್ನೋ ಜಾಯಮಾನ ಈ ಮನುಷ್ಯನ ಬುದ್ಧಿ, ಒಂದು ಕಡೆ ಮಾಡಬಾರದನ್ನು ಮಾಡಿ ತಾನೇ ಸಮಸ್ಯೆಗಳನ್ನು ಎದುರಿಸುತ್ತಾನೆ,ಇನ್ನೊಂದು ಕಡೆ ತಾನು ಸಮಸ್ಯೆಗೆ ಸಿಕ್ಕಿ ಹಾಕಿಕೊಳ್ಳುವುದಲ್ಲದೇ ತನ್ನ ಜೊತೆ ಇರುವವರನ್ನು ಸಮಸ್ಯೆಗೆ ಸಿಲುಕಿಕೊಳ್ಳುವ ಹಾಗೆ ಮಾಡುತ್ತಾನೆ, ಇದರಿಂದಾಗಿ ಇಡೀ ವಿಶ್ವಯೇ ಸಮಸ್ಯೆಗೆ ಒಳಗಾಗುತ್ತದೆ. ಇದಕ್ಕೆ ಈಗ ಮತ್ತೊಂದು ಘಟನೆ ಸಾಕ್ಷಿಯಾಗಿದ್ದು, ಇದರಿಂದಾಗಿ ಇಡೀ ವಿಶ್ವವೇ ಈಗ ಆತಂಕಕ್ಕೆ ಒಳಗಾಗುವ ಹಾಗೇ ಆಗಿದೆ. ಹೌದು….

ಕೊರೊನಾ ಎಲ್ಲಾ ಕಡೆ ಆತಂಕದ ಮನೆ ಮಾಡಿದ್ದು, ಇಡೀ ವಿಶ್ವವೇ ಲಾಕ್‌ಡೌನ್‌ ಮಾಡುವ ಮೂಲಕ ಕೊರೋನಾ ಹಾವಳಿಯಿಂದ ತಪ್ಪಿಸಿಕೊಳ್ಳಲು ಹರಸಾಹಸ ಮಾಡ್ತಾ ಇವೆ, ಅಲ್ಲದೇ ಸೋಶಿಯಲ್‌ ಡಿಸ್ಟೆನ್ಸ್‌ ಮತ್ತು ಮಾಸ್ಕ್‌ ಧರಿಸಿಕೊಳ್ಳಿ,ಸ್ಯಾನಿಟೈಸರ್‌ ಉಪಯೋಗಿಸಿ ಅನ್ನೋ ಮೂಲಕ ಜಾಗೃತಿ ಮೂಡಿಸುತ್ತಿದ್ದರೆ, ಇತ್ತ ಅಮೇರಿಕಾದಲ್ಲಿ ಕೊರೋನಾ ಹಬ್ಬಿಸಲು ಸ್ಪರ್ಧೆಯನ್ನು ಏರ್ಪಡಿಸಿದ್ದಾರೆ.

ಹೌದು ಅಮೇರಿಕಾದ ಅಲಬಾಮಾದ ಟಸ್ಕಲೂಸಾ ಎಂಬಲ್ಲಿ ವಿದ್ಯಾರ್ಥಿಗಳು ಯಾರಿಗೆ ಮೊದಲು ಕೊರೋನಾ ಬರುತ್ತದೆ..? ಅನ್ನೋ ಸ್ಪರ್ಧೆ ಏರ್ಪಡಿಸಿದ್ದರು, ಇದಕ್ಕಾಗಿ ಪಾರ್ಟಿ ಏರ್ಪಾಟು ಮಾಡಲಾಗಿತ್ತು, ಇನ್ನು ಒಂದು ಹುಚ್ಚಾಟದ ಪಾರ್ಟಿಗೆ ಕೊರೊನಾ ಪಾಸಿಟಿವ್‌ ಬಂದವರನ್ನು ಕರೆಸಲಾಗಿತ್ತು, ಇನ್ನು ಈ ಕೊರೋನಾ ಪಾರ್ಟಿಯಲ್ಲಿ ಬಂದವರು ಮತ್ತು ಕೊರೋನಾ ಬಾರದವರನ್ನು ಒಂದೆಡೆ ಸೇರಿಸಿ ಪಾರ್ಟಿ ಮಾಡಲಾಗಿದ್ದು. ಈ ಮೂಲಕ ಯಾರಿಗೆ ಮೊದಲು ಕೊರೋನಾ ಬರುತ್ತದೆಯೋ ಅವರಿಗೆ ಬಹುಮಾನ ನೀಡಲಾಗುತ್ತದೆ ಎಂದು ಆಯೋಜಕರು ತಿಳಿಸಿದ್ದರು.


ಇನ್ನು ಪಾರ್ಟಿಗೆ ಬಂದವರು ಪಾಟ್‌ನಲ್ಲಿ ಹಣವನ್ನು ಹಾಕಬೇಕು.ಮೊದಲು ಯಾರಿಗೆ ಕೊರೊಣಾ ಬರುತ್ತದೆಯೋ ಅವರಿಗೆ ಪಾಟ್‌ನ್ಲಲಿ ಕಲೆಕ್ಟ್‌ ಆಗ ಹಣವನ್ನು ಬಹುಮಾನವಾಗಿ ನೀಡಲಾಗುತ್ತದೆ ಎಂದು ಆಯೋಜಕರು ಹೇಳಿದ್ದಾರೆ.

ಈಗಾಗಲೇ ಅಮೇರಿಕಾದಲ್ಲಿ ಕೊರೋನಾ ಹಾವಳಿ ವ್ಯಾಪಕವಾಗಿ ಹರಡಿದ್ದು, ಈ ಬೆನ್ನಲ್ಲೇ ಈ ರೀತಿಯ ಘಟನೆ ನಡೆದಿರೋದು ವ್ಯಾಪಕ ಟೀಕೆಗೆ ಗುರಿಗಾಗಿದೆ. ಇನ್ನು ಈ ವಿಚಾರವಾಗಿ ಕೊರೋನಾ ಹರಡಿಸುವ ಸ್ಪರ್ಧೆ ನಡೆದಿರುವುದನ್ನು ಟಸ್ಕಲೂಸಾ ಮೇಯರ್‌ ಒಪ್ಪಿಕೊಂಡಿದ್ದು , ಆದ್ರೆ ಈ ವಿಚಾರವಾಗಿ ಯಾವ ರೀತಿಯ ಕ್ರಮಗಳನ್ನು ತೆಗೆದುಕೊಂಡಿದ್ದಾರೆ ಎಂದು ಹೇಳಿಲ್ಲ.

ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಳ್ಳಿ

Similar Articles

Comments
Top