ಸ್ಟಾರ್ ವಾರ್ – ದರ್ಶನ್, ಸುದೀಪ್‍ಗೆ ಎಲ್ಲಾ ಗೊತ್ತಿದೆ ಎಂದ ಉಪೇಂದ್ರ..!

upendra on star war sudeep darshan

ಇತ್ತೀಚೆಗೆ ಕಿಚ್ಚ ಸುದೀಪ್ ಮತ್ತು ಚಾಲೆಂಜಿಂಗ್ ಸ್ಟಾರ್ ಫ್ಯಾನ್ಸ್ ನಡುವಿನ ವಾರ್ ತಾರಕಕ್ಕೆ ಏರಿದೆ, ಒಂದು ಕಡೆ ಪೈಲ್ವಾನ್ ಸಿನಿಮಾ ಇನ್ನೊಂದು ಕಡೆ ಕುರುಕ್ಷೇತ್ರ ಹೀಗೆ ನಮ್ ಬಾಸ್ ಸಿನಿಮಾ ಗ್ರೇಟ್ ಅಂತ ಇಬ್ಬರು ಫ್ಯಾನ್ಸ್ ಗಳು ಸೋಶಿಯಲ್ ಮಿಡಿಯಾದಲ್ಲಿ ವಾರ್ ನಡೆಸುತ್ತಿದ್ದಾರೆ, ಇದರ ನಡುವೆ ಪೈಲ್ವಾನ್ ಸಿನಿಮಾದ ಪೈರಸಿ ವಿಚಾರವಾಗಿಯೂ ಬಹಳ ಚರ್ಚೆಗಳು ಸಹ ನಡೆದವು. ಇನ್ನು ಈ ನಿಟ್ಟಿನಲ್ಲಿ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರು ತಮ್ಮ ಟ್ವಿಟರ್‍ನಲ್ಲಿ ನನ್ನ ಅನ್ನದಾತರು ಮತ್ತು ಸೆಲೆಬ್ರಿಟಿ ತಂಟೆಗೆ ಮತ್ತು ಅವರನ್ನು ಕೆಣಕದಿರಿ ಅಂತ ಎಚ್ಚರಿಕೆ ನೀಡಿ ಪೋಸ್ಟ್ ಮಾಡಿದ್ರು, ಇನ್ನು ದರ್ಶನ್ ಪೋಸ್ಟ್ ಮಾಡಿದ ಕೆಲವೇ ಗಂಟೆಗಳಲ್ಲಿ ಕಿಚ್ಚ ಸುದೀಪ್ ಕೂಡ ಸುದೀರ್ಘವಾದ ಪತ್ರವನ್ನು ಬರೆದಿದ್ರು, ಈಗ ಈ ಇಬ್ಬರು ಸ್ಟಾರ್ ಗಳ ನಡುವಿನ ಮುನಿಸಿನ ಕುರಿತು ಇಂದು ತಮ್ಮ 52ನೇ ಹುಟ್ಟು ಹಬ್ಬ ಆಚರಿಸಿಕೊಂಡ ರಿಯಲ್ ಸ್ಟಾರ್ ಉಪೇಂದ್ರ ಅವರು ಮಾತನಾಡಿದ್ದಾರೆ.

ಮಾಧ್ಯಮದವರು ಕೇಳಿದ ಪ್ರಶ್ನೆಗೆ ಉತ್ತರಿಸಿದ ಬರ್ತ್‍ಡೇ ಬಾಯ್ ರಿಯಲ್ ಸ್ಟಾರ್ ಉಪೇಂದ್ರ `ಸ್ಟಾರ್ ವಾರ್ ಆಗ ಬೇಕು ಅದು ಸಣ್ಣಪುಟ್ಟದರಲ್ಲೇ ಇರಬೇಕು’ ಆದ್ರೆ ಅದು ದೊಡ್ಡ ಮಟ್ಟದಲ್ಲಿ ನಡೆಯಬಾರದು, ಅದು ಸುದೀಪ್‍ಗೂ ಗೊತ್ತಿದೆ, ದರ್ಶನ್ ಅವರಿಗೂ ಗೊತ್ತಿದೆ, ಅದರ ಬಗ್ಗೆ ತಲೆಕೆಡಿಸಿಕೊಳ್ಳುವುದು ಬೇಡ ಅಂತ ರಿಯಲ್ ಸ್ಟಾರ್ ಉಪೇಂದ್ರ ಹೇಳಿದ್ರು.

ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಳ್ಳಿ

Similar Articles

Comments
Top