ಹಾರ ಕೇಕ್ ಏನು ತರಬೇಡಿ, ಬರೋವಾಗ ಗಿಡ ತನ್ನ ಎಂದು ಮನವಿ ಮಾಡಿದ ಉಪ್ಪಿ.!

ಸ್ಯಾಂಡಲ್‍ವುಡ್‍ನಲ್ಲಿ ಇತ್ತೀಚೆಗೆ ಸ್ಟಾರ್ ನಟರು ತಮ್ಮ ಹುಟ್ಟುಹಬ್ಬವನ್ನು ಅದ್ದೂರಿಯಾಗಿ ಆಚರಿಸದೆ ಸರಳ ರೀತಿಯಲ್ಲಿ ಆಚರಿಸುವ ಜೊತೆಗೆ ಸಾಮಾಜಿಕ ಕಾರ್ಯಕ್ರಮದಲ್ಲಿ ತಮ್ಮ ಹುಟ್ಟುಹಬ್ಬವನ್ನು ಆಚರಿಸಿಕೊಳ್ತಾ ಇದ್ದಾರೆ. ಆ ಸಾಲಿಗೆ ಈಗ ರಿಯಲ್ ಸ್ಟಾರ್ ಉಪೇಂದ್ರ ಕೂಡ ಸೇರಿಕೊಳ್ತಾ ಇದ್ದಾರೆ. ಇದೇ ಸೆಪ್ಟೆಂಬರ್ 18 ರಂದು ರಿಯಲ್ ಸ್ಟಾರ್ ಉಪೇಂದ್ರ ಅವರ ಹುಟ್ಟುಹಬ್ಬವಿದ್ದು ಅಂದು ಅದ್ಧೂರಿಯಾಗಿ ಹುಟ್ಟುಹಬ್ಬ ಆಚರಿಸಲು ಉಪ್ಪಿ ಅಭಿಮಾನಿಗಳು ಸಕಲ ತಯಾರಿಗಳನ್ನು ನಡೆಸುತ್ತಿದ್ದಾರೆ. ಆದ್ರೆ ಉಪೇಂದ್ರ ಮಾತ್ರ ಅಭಿಮಾನಿಗಳಲ್ಲಿ ಒಂದು ಮನವಿಯನ್ನು ಮಾಡಿಕೊಂಡಿದ್ದಾರೆ. ತಮ್ಮ ಟ್ವಿಟರ್ ನಲ್ಲಿ ಮನವಿ ಮಾಡಿಕೊಂಡಿರುವ ಉಪ್ಪಿ, ಸೆಪ್ಟೆಂಬರ್ 18 `ಅಭಿಮಾನಿಗಳ ದಿನ’ ಅಂದ್ರೆ ನನ್ನ ಹುಟ್ಟುಹಬ್ಬ. ಹಾಗಾಗಿ ತಾವುಗಳು ಯಾರೂ ಕೂಡ ಕೇಕ್, ಹೂವಿನ ಹಾರ, ಹೂಗುಚ್ಛ ಮತ್ತು ಉಡುಗೊರೆಗಳನ್ನು ತರಬೇಡಿ. ನಿಮಗೆ ತರಲೇಬೇಕು ಎಂದೆನಿಸಿದರೆ ಗಿಡಗಳನ್ನು ತನ್ನಿ. ಮುಂದೆ ಅವುಗಳನ್ನು ಪೋಷಿಸಿ ಬೆಳೆಸುವ ಜವಾಬ್ದಾರಿ ನಾನು ತೆಗೆದುಕೊಳ್ಳುತ್ತೇನೆ ಅಂತ ಅಭಿಮಾನಿಗಳಲ್ಲಿ ಮನವಿಮಾಡಿಕೊಂಡಿದ್ದಾರೆ.

ಒಟ್ಟಿನಲ್ಲಿ ರಿಯಲ್ ಸ್ಟಾರ್ ಉಪೇಂದ್ರ ತಮ್ಮ ಹುಟ್ಟುಹಬ್ಬದಂದು ಒಂದೊಳ್ಳೆ ಕಾರ್ಯಕ್ಕೆ ಸಾಕ್ಷಿಯಾಗ್ತಾ ಇದ್ದು ಉಪ್ಪಿಯ ಪರಿಸರ ಪ್ರಜ್ಞೆಯ ಅಲೋಚನೆಗೆ ಈಗ ಎಲ್ಲರಿಂದ ಮೆಚ್ಚುಗೆಯೂ ವ್ಯಕ್ತವಾಗುತ್ತಿದೆ.

ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಳ್ಳಿ

Similar Articles

Comments
Top