ಒಂದು ಫೋನ್‌ ಕಾಲ್‌ನಿಂದ ಮುರಿದು ಬಿತ್ತು ಮದುವೆ..!

ನಿಮ್ಮ ಮಗಳನ್ನು ಮದುವೆಯಾಗುತ್ತಿರುವ ಹುಡುಗನಿಗೆ ಈಗಾಗಲೇ ಮದುವೆಯಾಗಿ ಮಕ್ಕಳಿದ್ದಾರೆ, ನಿಮ್ಮ ಮಗಳ ಜೀವನ ಹಾಳು ಮಾಡಬೇಡಿ ಎಂದು ಬಂದ ಅನಾಮದೇಯ ಕರೆಯಿಂದ ಮದುವೆಯೊಂದು ಮುರಿದು ಬಿದ್ದ ಘಟನೆ ರಾಮನಗರದ ಚನ್ನಪಟ್ಟಣದ ತಿಟ್ಟಮಾರನಹಳ್ಳಿಯಲ್ಲಿ ನಡೆದಿದೆ. ಎಲೆಕೇರಿ ವಧು ಮತ್ತು ಎಲೀಯೂರು ಗ್ರಾಮದ ಬಸವರಾಜುಗೂ ಆರು ತಿಂಗಳ ಹಿಂದೆ ಮದುವೆ ನಿಶ್ಚಯವಾಗಿತ್ತು, ಇಂದು ಚನ್ನಪಟ್ಟಣದ ತಿಟ್ಟಮಾರನಹಳ್ಳಿಯ ಚೇತನ ಸಮುದಾಯ ಭವನದಲ್ಲಿ ಮದುವೆ ನಡೆಯಬೇಕಿತ್ತು, ಆದ್ರೆ ನಿನ್ನೆ ವಧುವಿನ ಕಡೆಯವರಿಗೆ ನಿನ್ನೆ ಸಾಯಂಕಾಲ ಆರತಕ್ಷತೆಗೂ ಮುನ್ನ ಅನಾಮಧೇಯ ಕರೆಬಂದಿದ್ದು, ವರನಿಗೆ ಮದುವೆಯಾಗಿದೆ ಮಗುವಿದೆ ಎಂದು ಹೇಳಿದ್ದಾರೆ.

ಇದರಿಂದ ವಧುವಿನ ಕಡೆಯವರು ಆರತಕ್ಷತೆಗೂ ಮುನ್ನವೇ ಮದುವೆಯನ್ನು ನಿಲ್ಲಿಸಿದ್ದಾರೆ ಅಲ್ಲದೇ ವಧುವಿಗೆ ಬೇರೆ ಹುಗುಗನ ಜೊತೆ ಮದುವೆ ಮಾಡಲು ಸಹ ತೀರ್ಮಾನಿಸಿದ್ದಾರೆ. ಆದ್ರೆ ಆರೋಪ ಕೇಳಿ ಬಂದಿರೋ ವರ ಬಸವರಾಜು ಆರೋಪವನ್ನು ಸಾಭೀತುಮಾಡಿ ಎಂದು ಪಟ್ಟು ಹಿಡಿದಿದ್ದು,ಪೊಲೀಸ್‌ ಠಾಣೆಯಲ್ಲಿ ಹೈಡ್ರಾಮವೇ ನಡೆದಿದೆ, ಇನ್ನು ಸ್ಥಳಿಯ ಪೊಲೀಸರು ಆ ಅನಾಮಧೇಯ ಕರೆ ಮಾಡಿದವರ ಹುಡುಕಾಟದಲ್ಲಿದ್ದಾರೆ.

ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಳ್ಳಿ

Similar Articles

Comments
Top