ಉಗ್ರಂ 2ಗೆ ಫಿಕ್ಸಾಯ್ತು ಡೇಟ್..! ಶ್ರೀಮುರುಳಿ ಇದ್ರಲ್ಲಿ ಹೇಗ್ ಕಾಣಿಸ್ತಾರೆ ಗೊತ್ತಾ..?

ಉಗ್ರಂ ಸಿನಿಮಾ ಶ್ರೀ ಮುರುಳಿಗೆ ಸ್ಯಾಂಡಲ್‍ವುಡ್‍ನಲ್ಲಿ ಮತ್ತೆ ಗಟ್ಟಿ ಬೇರುವಂತೆ ಮಾಡಿದ ಸಿನಿಮಾ, ಇನ್ನು ಮಾಸ್ ಲುಕ್ ತಂದುಕೊಟ್ಟ ಸಿನಿಮಾ, ಉಗ್ರಂ ಸಿನಿಮಾದ ನಂತರ ಸಾಲು ಸಾಲು ಸಿನಿಮಾಗಳಲ್ಲಿ ಬ್ಯುಸಿಯಾಗಿರೋ ರೋರಿಂಗ್ ಸ್ಟಾರ್ ಶ್ರೀಮುರುಳಿಗೆ ತನ್ನ ಅಭಿಮಾನಿಗಳು ಉಗ್ರಂ ಸೀಕ್ಷೆಲ್ ಬರುತ್ತಾ ಅಂತ ಸಾಮಾಜಿಕ ಜಾಲತಾಣಗಲ್ಲಿ ಕೇಳ್ತಾ ಇದ್ರು, ಇನ್ನು ಸಿನಿಮಾ ಕೂಡ ಬರುತ್ತೆ ಅನ್ನೋ ಮಾತು ಕೂಡ ಇತ್ತು, ಆದ್ರೆ ಅದು ಈಗ ಪಕ್ಕಾ ಆಗಿದೆ. ಈಗಾಗ್ಲೇ ಉಗ್ರಂ 2 ಚಿತ್ರದ ಸ್ಕ್ರಿಪ್ಟ್ ವರ್ಕ್ ನಡೀತಾ ಇದ್ದು, ಸದ್ಯ ನಿರ್ದೇಶಕ ಪ್ರಶಾಂತ್ ನೀಲ್ ಕೆಜಿಎಫ್ 2 ಚಿತ್ರದಲ್ಲಿ ಬ್ಯುಸಿಯಾಗಿದ್ದಾರೆ. Read : ತಪ್ಪಾಗಿದ್ದರೆ ಕ್ಷಮಿಸಿ ಎಂದ ರೋರಿಂಗ್‌ ಸ್ಟಾರ್‌..!

ಇನ್ನು ಶ್ರೀ ಮುರುಳಿ ಕೂಡ ಮದಗಜ ಸಿನಿಮಾದಲ್ಲಿ ಬ್ಯುಸಿಯಾಗಿದ್ದು ಈ ಎರಡು ಸಿನಿಮಾಗಳು ಮುಗಿದ ನಂತರ ಉಗ್ರಂ ಸಿನಿಮಾ ಶುರುವಾಲಿದೆಯಂತೆ, ಇನ್ನು ರೋರಿಂಗ್ ಸ್ಟಾರ್ ಶ್ರೀಮುರುಳಿ ಕೂಡ ಉಗ್ರಂಗಾಗಿ ತನ್ನ ಹಳೇ ಗೆಟಪ್‍ಗೆ ಬರಳಲು ಸ್ವಲ್ಪ ಸಮಯ ಬೇಕಾಗುತ್ತದೆ, ಹಾಗಾಗಿ ಉಗ್ರಂ 2 ಮುಂದಿನ ವರ್ಷ ಜುಲೈ ತಿಂಗಳಲ್ಲಿ ಶೂಟಿಂಗ್ ಶುರುಮಾಡಲಿದೆಯಂತೆ. ಒಟ್ಟಿನಲ್ಲಿ ಉಗ್ರಂ 2 ಚಿತ್ರದಲ್ಲಿ ರೋರಿಂಗ್ ಸ್ಟಾರ್ ಶ್ರೀಮುರುಳಿ ಯಾವ ರೀತಿ ಆರ್ಭಟಿಸಲಿದ್ದಾರೆ ಕಾದು ನೋಡಬೇಕು..

ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಳ್ಳಿ

Similar Articles

Comments
Top