ತುಂಗಭದ್ರಾ ಜಲಾಶಯದ ಒಳಹರಿವು ಹೆಚ್ಚಳ ಗೇಟ್ಸ್ ಓಪನ್ ..! TB Dam Video 2020

tunghabhadra dam gates opened 2020

ತುಂಗಭದ್ರ ಜಲಾಶಯ ಸತತ ಮಳೆಯಿಂದಾಗಿ ತುಂಬಿದ್ದು, ಇಂದು 8 ಗೇಟ್‍ಗಳ ಮೂಲಕ ನೀರನ್ನು ಬಿಡಲಾಗಿದೆ. ಈಗಾಗಲೇ ತುಂಗಭಧ್ರಾ ಜಲಾಶಯ ತುಂಬಬೇಕಾಗಿತ್ತು, ಆದ್ರೆ ಕೆಲವು ದಿನಗಳಿಂದ ಮಳೆಯ ಪ್ರಮಾಣ ಕಡಿಮೆಯಾದ ಹಿನ್ನೆಲೆಯಲ್ಲಿ ಜಲಾಶಯದ ಒಳಹರಿವು ಕಡಿಮೆಯಾಗಿತ್ತು. ಆದರೆ ಎರಡು ದಿನಗಳಿಂದ ಮಳೆಯ ಪ್ರಮಾಣದಲ್ಲಿ ಮತ್ತೆ ಏರಿಕೆ ಕಂಡಿದ್ದು ತುಂಗಭದ್ರಾ ಜಲಾಶಯದ ಒಳಹರಿವು ಹೆಚ್ಚಳವಾಗಿದೆ. ಜಲಾಶಯಕ್ಕೆ 49,073 ಕ್ಯೂಸೆಕ್ಸ್ ನೀರಿನ ಒಳಹರಿವು ಹೆಚ್ಚಾಗಿದ್ದು, ನದಿ ಪ್ರದೇಶದ ಜನರಿಗೆ ಈಗಾಗಲೇ ಎಚ್ಚರಿಕೆಯಿಂದ ಇರಲು ಹೇಳಲಾಗಿದೆ. ಈಗಾಗಲೇ 8 ಗೇಟ್‍ಗಳ ಮೂಲಕ 6963 ಕ್ಯೂಸೆಕ್ ನೀರನ್ನು ಹೊರಬಿಡಲಾಗಿದ್ದು, ಇದೇ ರೀತಿ ಮಳೆ ಮುಂದುವರೆದಿದ್ದೇ ಆದಲ್ಲಿ ನೀರು ಬಿಡುಗಡೆಯ ಪ್ರಮಾಣವನ್ನು ಹೆಚ್ಚಿಸಲಾಗುತ್ತದೆ ಎಂದು ಅಧಿಕಾರಿಗಳು ಹೇಳಿದ್ದಾರೆ. ಪ್ರಸ್ತುತ ಜಲಾಶಯದಲ್ಲಿ 95.60 ಟಿಎಂಸಿ ನೀರು ಸಂಗ್ರಹವಾಗಿದ್ದು ಜಲಾಶಯದ ಒಟ್ಟು ನೀರಿನ ಮಟ್ಟ 1633 ಅಡಿಗಳಿದ್ದರೆ,ಪ್ರಸ್ತುತ 1631.65 ಅಡಿಗಳಷ್ಟು ತುಂಬಿದೆ. ಸದ್ಯ ಮಂತಾಲಯ ಮತ್ತು ಸುತ್ತಮುತ್ತಲಿನ ಪ್ರದೇಶದ ಜನತೆಗೆ ಈಗಾಗಲೇ ಎಚ್ಚರಿಕೆಯಿಂದ ಇರಲು ಅಧಿಕಾರಿಗಳು ಸೂಚನೆ ನೀಡಿದ್ದಾರೆ.

ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಳ್ಳಿ

Similar Articles

Comments
Top