ಟ್ರಾಫಿಕ್ ಪೊಲೀಸರ ಈ ಐಡಿಯಾಗೆ ಈಗ ಎಲ್ಲರ ಸೆಲ್ಯೂಟ್..!

traffic bombe

ಬೆಂಗಳೂರು‌ ಎಂದಾಕ್ಷಣ ಮೊದಲು ಕಣ್ಣಿಗೆ ಗೋಚರಿಸೋದು ಅಲ್ಲಿನ ಟ್ರಾಫಿಕ್..ಇಲ್ಲಿನ ಟ್ರಾಫಿಕ್‌ ಕಿರಿ ಕಿರಿಗೆ ಜನ ಸಾಮಾನ್ಯರು ಹೈರಾಣಾಗಿ ಹೋಗಿದ್ದಾರೆ.ಇನ್ನು ಟ್ರಾಫಿಕ್ ಪೊಲೀಸರು ಟ್ರಾಫಿಲ್ ರೂಲ್ಸ್ ಫಾಲೋ ಮಾಡದೇ ಇರೋರನ್ನ ಹಿಡಿಯೋದ್ರಲ್ಲಿ ಹೈರಾಣಾಗಿ ಹೋಗಿದ್ದಾರೆ..ಹಾಗಾಗಿ ಈಗ ಬೆಂಗಳೂರು ಟ್ರಾಫಿಕ್ ಪೊಲೀಸ್ ಈಗ ಹೊಸದೊಂದು ಐಡಿಯಾ ರೆಡಿಮಾಡಿದೆ ಅದೇ ಮ್ಯಾನಿಕ್ವೀನ್.

ಹೌದು ಮ್ಯಾನಿಕ್ವೀನ್ ಇದೊಂದು ಗೊಂಬೆಯಾಗಿದ್ದು ಸೇಮ್ ಟ್ರಾಫಿಕ್ ಪೊಲೀಸರ ರೀತಿ ಗೋಚರಿಸಲಿದೆ. ಸದ್ಯ ಇದನ್ನು ಹುಳಿಮಾವು ಸರಹದ್ದಿನ ವ್ಯಾಪ್ತಿಯ ಬನ್ನೇರುಘಟ್ಟ ರಸ್ತೆಯ ಗೊಟ್ಟಿಗೆರೆ ಜಂಕ್ಷನ್ ನಲ್ಲಿ ಈ ಮ್ಯಾನಿಕ್ವೀನ್ ನಿಲ್ಲಿಸಲಾಗಿದೆ. ಈ ಗೊಂಬೆ ದೂರದಲ್ಲಿ ಬರುತ್ತಿರುವ ವಾಹನ ಸವಾರರಿಗೆ ಎಚ್ಚರಿಕೆಯನ್ನು ನೀಡುತ್ತದೆ.ಆ ವಾಹನ ಸವಾರ ಸಂಚಾರಿ ನಿಯಮವನ್ನು ಪಾಲಿಸುತ್ತಿಲ್ಲದಿದ್ದರೆ ಪಾಲಿಸುವ ರೀತಿ ಮಾಡುತ್ತದೆ. ಪ್ರಾಯೋಗಿಕವಾಗಿ ಒಂದು ಕಡೆ ಮಾಡಿರೋ ಈ ಐಡಿಯಾಗೆ ಒಂದು ಬೊಂಬೆಗೆ 8ಸಾವಿರ ವೆಚ್ಚ ತಗುಲಲಿದೆ. ಇನ್ನು ಈ ಐಡಿಯಾವನ್ನು ಬೆಂಗಳೂರಿನ ಎಲ್ಲಾ ಕಡೆ ಈ ಗೊಂಬೆಯನ್ನು ನಿಲ್ಲಿಸೋ ಪ್ಲಾನ್ ಮಾಡಿಕೊಂಡಿದ್ದು. ಒಂದು‌ ಸ್ಟೇಷನ್ ವ್ಯಾಪ್ತಿಯಲ್ಲಿ ಐದು ಮ್ಯಾನಿಕ್ವೀನ್ ನಿಲ್ಲಿಸೋ ಐಡಿಯಾದಲ್ಲಿದೆ ಟ್ರಾಫಿಕ್ ಪೊಲೀಸ್.

ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಳ್ಳಿ

Similar Articles

Comments
Top