ಹೆಲ್ಮೆಟ್‌ ಧರಿಸಿಲ್ಲ ಎಂದು ಟ್ರ್ಯಾಕ್ಟರ್‌ ಚಾಲಕನಿಗೂ ದಂಡ..!

ಟ್ರಾಫಿಕ್‌ ರೂಲ್ಸ್‌ನಲ್ಲಿ ಬದಲಾವಣೆಯಾದ ಮೇಲೆ ದೇಶದಲ್ಲಿ ಚಿತ್ರ ವಿಚಿತ್ರ ಘಟನೆಗಳು ನಡೀತಾ ಇರೋದನ್ನ ನಾವೂ ನೋಡ್ತಾ ಇದ್ದೀವಿ, ಹೌದು ಒಂದು ಕಡೆ ಬೈಕ್‌ ಬೆಲೆಗಿಂತ ದಂಡದ ಬೆಲೆ ಜಾಸ್ತಿ ಆಯ್ತು ಆಂತ ಬೈಕನ್ನೇ ಸುಟ್ಟು ಹಾಕಿದ ಘಟನೆ ಒಂದು ಕಡೆಯಾದ್ರೆ, ಲುಂಗಿ ಉಟ್ಟು ಲಾರಿ ಓಡಿಸಿದಕ್ಕಾಗಿ ಪೆನಾಲ್ಟಿ ಬಿದ್ದ ಘಟನೆಯೂ ನಡೆದಿದೆ, ಆದ್ರೆ ಈಗ ಟ್ರ್ಯಾಕ್ಟರ್‌ ಓಡಿಸುವಾಗ ಹೆಲ್ಮೆಟ್‌ ಹಾಕಿಲ್ಲ ಅಂತ ಮೂರು ಸಾವಿರ ದಂಡ ಕಟ್ಟಿಸಿಕೊಂಡ ಘಟನೆ ಉತ್ತರಪ್ರದೇಶದ ಹಾಪುರದಲ್ಲಿ ನಡೆದಿದೆ.

ಟ್ರ್ಯಾಕ್ಟರ್‌ ಚಾಲಕ ದೇವೇಂದ್ರ ಕುಮಾರ್‌ ದಂಡದ ಚಲನ್‌ ನೋಡಿ ಗಾಬರಿಯಾಗಿದ್ದಾನೆ, ನಂತರ ಸಮೀಪದ ಆರ್‌ಟಿಓ ಕಛೇರಿಯಲ್ಲಿ ಈ ಬಗ್ಗೆ ವಿಚಾರಿಸಿದಾಗ ಇದು ಟೂ ವೀಲರ್‌ಗೆ ನೀಡಿದ ಚಲನ್‌ ಎಂದು ಹೇಳಿದ್ದಾರೆ. ಈ ಕುರಿತು ಪೊಲೀಸ್‌ ಅಧಿಕಾರಿ ಪ್ರತಿಕ್ರಿಯಿಸಿದ್ದು, ಇದು ಸಣ್ಣ ಯಡವಟ್ಟಿನಿಂದ ಆದ ಘಟನೆ ಚಾಲಕನಿಗೆ ಕಳುಹಿಸಲಾದ ದಂಡದ ಚಲನ್‌ ಹಿಂತಿರುಗಿಸಲು ಹೇಳಿದ್ದು, ದಂಡದ ಮೊತ್ತವನ್ನು ನಮ್ಮ ಇಲಾಖೆಯಿಂದ ವಾಪಾಸ್‌ ನೀಡುವುದಾಗಿ ಹೇಳಿದ್ದಾರೆ.

ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಳ್ಳಿ

Similar Articles

Comments
Top