ಟಿಕ್‍ಟಾಕ್‍ಗಾಗಿ ಕಳ್ಳತನ ಮಾಡಿದ ವಿದ್ಯಾರ್ಥಿಗಳು.!

ಟಿಕ್‍ಟಾಕ್ ಸದ್ಯ ಯುವಪೀಳಿಗೆಯನ್ನು ಸದ್ಯ ತನ್ನತ್ತ ಸೆಳೆದುಕೊಂಡಿರೋ ಒಂದು ಆ್ಯಪ್, ಟಿಕ್‍ಟಾಕ್‍ಗಾಗಿ ಚಿತ್ರವಿಚಿತ್ರ ವೇಷ ತೊಟ್ಟು ಫ್ಯಾನ್ ಫಾಲೋವರ್ಸ ಪಡೆಯಲು ಹಪಿಹಪಿಸುತ್ತಿರುತ್ತಾರೆ, ಇನ್ನು ಟಿಕ್‍ಟಾಕ್‍ನಿಂದಲೇ ಅದೆಷ್ಟೋ ಜನ ತಮ್ಮ ಜೀವವನ್ನು ಕಳೆದುಕೊಂಡಿರುವವರು ಇದ್ದಾರೆ, ಆದ್ರೆ ಟಿಕ್‍ಟಾಕ್ ಹುಚ್ಚಿನಿಂದಾಗಿ ವಿದ್ಯಾರ್ಥಿಗಳು ಜೈಲುಪಾಲಾದ ಘಟನೆಯೊಂದು ಈಗ ಬೆಳಗಾವಿಯಲ್ಲಿ ನಡೆದಿದೆ. ಟಿಕ್‍ಟಾಕ್ ಮಾಡಲು ಕ್ಯಾಮರಾ, ಲ್ಯಾಪ್ ಟಾಪ್ ಮತ್ತು ಜಾಲಿಯಾಗಿ ತಿರುಗಾಡಲು ಬೈಕ್ ಕಳ್ಳತನ ಮಾಡಿದ್ದ ಮೂವರು ವಿದ್ಯಾರ್ಥಿಗಳನ್ನು ಪೊಲೀಸರು ಬಂಧಿಸಿದ್ದಾರೆ.

ಪದವಿ ವ್ಯಾಸಂಗ ಮಾಡುತ್ತಿದ್ದ ಸಂತೋಷ್, ಸಂಪತ್, ಮತ್ತೊಬ್ಬ ವಿದ್ಯಾರ್ಥಿ ಪ್ರತಿದಿನವೂ ಮೊಬೈಲ್‍ನಲ್ಲಿ ಟಿಕ್‍ಟಾಕ್ ಮಾಡುತ್ತಿದ್ದರು, ಅವರು ಅಂದುಕೊಂಡಷ್ಟು ಲೈಕ್ಸ್ ಕಮೆಂಟ್ ಬರದೆ ಇದ್ದ ಕಾರಣ, ಫೋಟೋ ಸ್ಟುಡಿಯೋ ಒಂದಕ್ಕೆ ನುಗ್ಗಿ ಅಲ್ಲಿ ಕ್ಯಾಮರಾ ಮತ್ತು ಲ್ಯಾಪ್‍ಟಾಪ್ ಕಳ್ಳತನ ಮಾಡಿದ್ದಾರೆ, ಅಲ್ಲದೇ ಜಾಲಿ ರೈಡ್‍ಮಾಡಲು ಮತ್ತು ಲೈಫ್ ಎಂಜಾಯ್ ಮಾಡಲು 7 ಮನೆಯಲ್ಲಿ ಕಳ್ಳತನ ಮಾಡಿದ್ದಾರೆ, ವಿದ್ಯಾರ್ಥಿಗಳು ಕಳ್ಳತನ ಮಾಡಿದ್ದ ದೃಶ್ಯಗಳು ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ಸಿಸಿಟಿವಿ ದೃಶ್ಯ ಆಧರಿಸಿ ಪೊಲೀಸರು ಮೂವರನ್ನು ಬಂಧಿಸಿದ್ದಾರೆ. ಒಟ್ಟಿನಲ್ಲಿ ಟಿಕ್‍ಟಾಕ್ ಗೀಳಿಗೆ ಬಿದ್ದ ವಿದ್ಯಾರ್ಥಿಗಳು ತಮ್ಮ ಅಮೂಲ್ಯವಾದ ಜೀವನ ಹಾಳು ಮಾಡಿಕೊಂಡಿದ್ದು ಮಾತ್ರ ಬೇಜಾರಿನ ವಿಷಯವೇ ಸರಿ..

ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಳ್ಳಿ

Similar Articles

Comments
Top