ಟಿಕ್‌ಟಾಕ್‌ ಅನ್ನೇ ಮೀರಿಸುತ್ತೇ ಈ ರೀಲ್ಸ್‌.!

ಭಾರತದಲ್ಲಿ ಟಿಕ್‌ಟಾಕ್‌ ಸೇರಿದಂತೆ 59 ಚಿನೀ ಆ್ಯಪ್‌ಗಳು ಬ್ಯಾನ್‌ ಆಗುತ್ತಿದ್ದಂತೆ, ಅದಕ್ಕೆ ಪರ್ಯಾಯವಾಗಿ ಅನೇಕ ಆಪ್‌ಗಳು ತಲೆ ಎತ್ತುತ್ತಿವೆ, ಅದರಲ್ಲೂ ಟಿಕ್‌ಟಾಕ್‌ ಮಾದರಿಯಲ್ಲಿ ಟಿಕ್‌ಟಾಕ್‌ ಬ್ಯಾನ್‌ ಆಗುವುದಕ್ಕೂ ಮೊದಲೇ ಅನೇಕ ಆಪ್‌ಗಳು ಬಂದ್ರು ಅದಕ್ಕೆ ಸರಿಸಾಟಿಯಾಗಿ ಯಾವುದೇ ಆಪ್‌ಗಳು ನಿಲ್ಲಲಿಲ್ಲ, ಇನ್ನು ಟಿಕ್‌ಟಾಕ್‌ ಭಾರತದಲ್ಲಿ ಎಷ್ಟರ ಮಟ್ಟಿಗೆ ಪ್ರಭಾವ ಬೀರಿತ್ತಿ ಅನ್ನೋದು ನಿಮಗೆಲ್ಲರಿಗೂ ಗೊತ್ತಿರೋ ವಿಚಾರ..

ಟಿಕ್‌ಟಾಕ್‌ ಮೂಲಕ ತಮ್ಮ ಹುಚ್ಚಾಟದ ಜೊತೆಯಲ್ಲಿ ಟ್ಯಾಲೆಂಟ್‌ಗಳನ್ನು ತೋರಿಸಲು ಒಂದು ಫ್ಲಾಟ್‌ಫಾರಂ ಆಗಿತ್ತು, ಅಷ್ಟೇ ಅಲ್ಲದೇ ಟಿಕ್‌ ಟಾಕ್‌ ಮೂಲಕಾನೇ ಅದೆಷ್ಟೋ ಜನ ತಮ್ಮ ಹುಚ್ಚಾಟವನ್ನು ತೋರಿಸಿಯೋ ಅಥವಾ ತಮ್ಮ ಟ್ಯಾಲೆಂಟ್‌ ತೋರಿಸಿಯೋ ಸೆಲೆಬ್ರಿಟಿಗಳು ಆಗಿದ್ದಾರೆ. ಹೀಗಿರುವಾಗ ಟಿಕ್‌ಟಾಕ್‌ ಬ್ಯಾನ್‌ ಭಾರತದಲ್ಲಿ ಬ್ಯಾನ್‌ ಆಗಿದ್ದೇ ತಡ ಒಂದಿಷ್ಟು ಟಿಕ್‌ಟಾಕ್‌ ಸ್ಟಾರ್‌ಗಳಿಗೆ ಲೋಕವೇ ಕಳಚಿ ಬಿದ್ದಂತಾಯಿತು.

ಇನ್ನು ಟಿಕ್‌ಟಾಕ್‌ಗೆ ಪರ್ಯಾಯವಾಗಿ ಯಾವುದೇ ಆಪ್‌ಗಳು ಬಂದ್ರು ಜನರ ಮನಸ್ಸನ್ನು ಗೆಲ್ಲುವಲ್ಲಿ ಅವು ಅಷ್ಟೇನೂ ಸಕ್ಸಸ್‌ ಕೂಡ ಆಗಲಿಲ್ಲ, ಇನ್ನು ಟಿಕ್‌ ಟಾಕ್‌ ರೀತಿಯ ಆಪ್‌ ಬರಲು ಕಷ್ಟ ಅನ್ನೋ ಮಾತುಗಳನ್ನ ಟಿಕ್‌ಟಾಕ್‌ಗೆ ಒಗ್ಗಿಕೊಂಡಿದ್ದವರು ಹೇಳಲು ಶುರುಮಾಡಿದ್ರು, ಆದ್ರೆ ಈಗ ಟಿಕ್‌ಟಾಕ್‌ ಅನ್ನೇ ಮೀರಿಸೋ ಆಪ್‌ ಈಗ ಲಾಂಚ್‌ ಆಗಿದ್ದು, ಈ ಆಪ್‌ಗೆ ಈಗ ಎಲ್ಲಾ ಟಿಕ್‌ಟಾಕ್‌ ಅಭಿಮಾನಿಗಳು ಫಿದಾ ಆಗಿ ಹೋಗಿದ್ದಾರೆ.

ಹೌದು ಫೇಸ್‌ಬುಕ್‌ ಮತ್ತು ಇನ್ಸ್ಟಾಗ್ರಾಂನ ದೊರೆಯಾದ ಮಾರ್ಕ್‌ ಜುಕರ್‌ಬರ್ಗ್‌ ಭಾರತದಲ್ಲಿ ಟಿಕ್‌ಟಾಕ್‌ ಬ್ಯಾನ್‌ ಆಗುತ್ತಿದ್ದಂತೆ ಟಿಕ್‌ಟಾಕ್‌ ಮಾದರಿಯಲ್ಲಿಯೇ ಹೊಸದೊಂದ ಸಾಫ್ಟ್‌ವೇರ್‌ ಬಿಡುಗಡೆ ಮಾಡುವ ಮೂಲಕ ತನ್ನ ಸಾಮ್ರಾಜ್ಯವನ್ನು ಇನ್ನಷ್ಟು ವಿಸ್ತರಿಸಿಕೊಳ್ಳಲು ಅನುವುಮಾಡಿಕೊಳ್ಳುತ್ತಿದ್ದಾನೆ.

ಟಿಕ್‌ಟಾಕ್‌ ಬ್ಯಾನ್‌ ಆಗುತ್ತಿದ್ದಂತೆ ಇನ್ಸ್ಟಾಗ್ರಾಂನಲ್ಲಿ ʻರೀಲ್ಸ್‌ʼ ಅನ್ನೋ ಸಾಫ್ಟ್‌ವೇರ್‌ ಡೆವೆಲಪ್‌ ಮಾಡುವ ಮೂಲಕ ಟಿಕ್‌ಟಾಕ್‌ಗೆ ಅಡಿಕ್ಟ್‌ ಆಗಿದ್ದವರನ್ನು ತನ್ನತ್ತ ಸೆಳೆದುಕೊಳ್ಳುತ್ತಿದ್ದಾನೆ. ಜುಲೈ ತಿಂಗಳಲ್ಲಿ ರಿಲೀಸ್‌ ಆದ ಈ ಸಾಫ್ಟ್‌ವೇರ್‌ ಇನ್ಸ್ಟಾಗ್ರಾಂನಲ್ಲಿ ಡೈರೆಕ್ಟ್‌ ಆಗಿ ಲಭ್ಯವಿದ್ದು, ಇದಕ್ಕಾಗಿ ಪ್ರತ್ಯೇಕ ಆಪ್‌ ಲಾಂಚ್‌ ಮಾಡಲಿಲ್ಲ, ಇನ್ಸ್ಟಾಗ್ರಾಂ ಯೂಸ್‌ ಮಾಡೋ ಪ್ರತಿಯೊಬ್ಬರು ʻರೀಲ್ಸ್‌ʼ ಅನ್ನೂ ಉಪಯೋಗಿಸ ಬಹುದಾಗಿದೆ. ಇನ್ನು ಈ ರೀಲ್ಸ್‌ನಲ್ಲಿ 15 ಸೆಕೆಂಡುಗಳ ವಿಡಿಯೋವನ್ನು ಯಾವುದೇ ಮ್ಯೂಸಿಕ್‌ ಉಪಯೋಗಿಸಿ ಅಪ್ಲೋಡ್‌ ಮಾಡಬಹುದಾಗಿದ್ದು, ಟಿಕ್‌ಟಾಕ್‌ನಲ್ಲಿ ಇರುವ ಎಲ್ಲಾ ಫೀಚರ್‌ಗಳನ್ನು ಇದರಲ್ಲಿ ಅಳವಡಿಸುವ ಮೂಲಕ ಬಳಕೆದಾರರಿಗೆ ಥ್ರಿಲ್‌ ನೀಡಿದ್ದಾರೆ.

ಇನ್ನು ನಿವೇನಾದ್ರೂ ಇನ್ಸ್ಟಾಗ್ರಾಂನಲ್ಲಿ ಫಾಲೋವರ್ಸ್‌ ಸಂಖ್ಯೆ ಹೆಚ್ಚಿನ ಸಂಖ್ಯೆಯಲ್ಲಿ ಹೊಂದಿದ್ದರೆ ನಿಮ್ಮ ರೀಲ್ಸ್‌ ವಿಡಿಯೋಗಳು ಹೆಚ್ಚು ವೀವ್ಯೂ ಆಗೋದರಲ್ಲಿ ಅನುಮಾನವೇ ಇಲ್ಲ.

tiktok vs reels

ಈಗಾಗಲೇ ʻರೀಲ್ಸ್‌ʼ ಭಾರತದಲ್ಲಿ ದೊಡ್ಡ ಮಟ್ಟದಲ್ಲಿ ಸದ್ದು ಮಾಡ್ತಾ ಇದ್ದು, ಟಿಕ್‌ಟಾಕ್‌ ಮಾದರಿಯಲ್ಲಿ ಇಲ್ಲೂ ಸಹ ತಮ್ಮ ಹುಚ್ಚಾಟ ಪ್ರದರ್ಶನ ಮತ್ತು ತಮ್ಮ ಟ್ಯಾಲೆಂಟ್‌ ಪ್ರದರ್ಶನಗಳನ್ನು ಶುರುಮಾಡಿಕೊಂಡಿದ್ದಾರೆ.

ಒಟ್ಟಿನಲ್ಲಿ ಟಿಕ್‌ಟಾಕ್‌ ಬದಲಿಗೆ ಹುಟ್ಟಿಕೊಂಡಿರೋ ʻರೀಲ್ಸ್‌ʼ ಅನ್ನೋ ಸಾಫ್ಟ್‌ವೇರ್‌ ಜನರಿಗೆ ಇಷ್ಟವಾಗಿದ್ದು, ಇದರ ಜೊತೆಯಲ್ಲಿ ಈಗ ಸೋಶೀಯಲ್‌ ಮೀಡಿಯಾದ ದೊರೆಯಾದ ಜುಕರ್‌ಬರ್ಗ್‌ ಜೇಬು ಸಹ ತುಂಬುತ್ತಾ ಹೋಗುತ್ತಿದೆ.

ಬೇರೆ ಆಪ್ ಗಳಿಗೆ ಹೋಲಿಸಿದರೆ ಈ ರೀಲ್ಸ್ ಶಾರ್ಟ್ ವಿಡಿಯೋ ಪ್ಲಾಟ್ ಫಾರ್ಮ್ ಜನರಿಗೆ ಹೆಚ್ಚು ಇಷ್ಟವಾಗುತ್ತಿದೆ

ನೀವೂ ಈಗಾಗಲೇ ರೀಲ್ಸ್ ವಿಡಿಯೋಗಳನ್ನು ನೋಡಿದ್ದರೆ ಇದು ಹೇಗಿದೆ ಅಂತ ಕಾಮೆಂಟ್ ಮಾಡಿ ತಿಳಿಸಿ

ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಳ್ಳಿ

Similar Articles

Comments
Top