ಭಾರತದಲ್ಲಿ ಟಿಕ್ ಟಾಕ್ ಬ್ಯಾನ್.!ಚೀನಾಗೆ ಶಾಕ್ ಕೊಟ್ಟ ಭಾರತ..!

ಗಡಿಯಲ್ಲಿ ಚೀನಾ ಮತ್ತು ಭಾರತ ನಡುವಿನ ಗಡಿ ವಿಚಾರದಲ್ಲಿ ಗುದ್ದಾಟ ನಡೆಯುತ್ತಿದ್ದು, ಹೀಗಿರುವಾಗಲೇ ಭಾರತ ಚೀನಾಗೆ ದೊಡ್ಡ ಶಾಕ್ ನೀಡಿದೆ, ಹೌದು ಭಾರತದಲ್ಲಿ ದೊಡ್ಡ ಮಟ್ಟದಲ್ಲಿ ಜನಸಾಮಾನ್ಯರನ್ನು ಹುಚ್ಚು ಹಿಡಿಸಿದ್ದ ಟಿಕ್‍ಟಾಕ್ ಸೇರಿದಂತೆ ಒಟ್ಟು 59 ಚೀನಿ ಆ್ಯಪ್‍ಗಳನ್ನು ಭಾರತ ಬ್ಯಾನ್ ಮಾಡಿದೆ.


ಹೌದು ಟಿಕ್ ಟಾಕ್ ಭಾರತದಲ್ಲಿ ಯಾವ ಮಟ್ಟಕ್ಕೆ ನೆಲೆಯೂರಿತ್ತು ಅನ್ನೊದು ಎಲ್ಲರಿಗೂ ಗೊತ್ತಿರುವ ವಿಚಾರ, ಇನ್ನು ಟಿಕ್ ಟಾಕ್‍ನಿಂದಾಗಿ ಅದೆಷ್ಟೋ ಜನಕ್ಕೆ ಅನುಕೂಲವಾಗಿದ್ದರೆ, ಇನ್ನು ಕೆಲವ್ರು ಅದರಿಂದಾಗಿ ಒಂದಿಷ್ಟು ಸಮಸ್ಯೆಗಳನ್ನು ಎದುರಿಸಿದ್ದಾರೆ, ಇನ್ನು ಅದೆಷ್ಟೋ ಜನ ತಮ್ಮ ಟ್ಯಾಲೆಂಟ್‍ಗಳನ್ನು ಟಿಕ್‍ಟಾಕ್ ಮೂಲಕ ತೋರಿಸೋ ಪ್ರಯತ್ನಗಳನ್ನು ಮಾಡಿದ್ರೆ, ಇನ್ನು ಕೆಲವ್ರು ತಮ್ಮ ಟ್ಯಾಲೆಂಟ್‍ಗೆ ಯಾವುದೇ ಲೈಕ್ಸ್ ಬರಲಿಲ್ಲ ಅಂತ ಜೀವ ಕಳೆದುಕೊಂಡಿರು ಉದಾಹರಣೆಗಳನ್ನು ನಾವು ನೋಡಿದ್ದೇವೆ, ಇನ್ನು ಟಿಕ್ ಟಾಕ್ ಕೇವಲ ತಮ್ಮ ಟ್ಯಾಲೆಂಟ್ ಮಾತ್ರವಲ್ಲ, ತಮ್ಮ ಹುಚ್ಚಾಟಗಳನ್ನು ಪ್ರದರ್ಶಿಸಲು ಉಪಯೋಗಿಸಿಕೊಂಡಿದ್ದು ಇದೆ, ಅಷ್ಟೇ ಅಲ್ಲದೇ ಇದರಿಂದಾಗಿ ಅದೆಷ್ಟು ಜನ ಹುಚ್ಚರಾಗಿ ಹೋಗಿದ್ದಾರೆ.

ಇನ್ನು ಟಿಕ್‍ಟಾಕ್‍ಯೇ ಜೀವನ ಅದನ್ನು ಬಿಟ್ಟರೇ ಬೇರೆ ಏನು ಇಲ್ಲ ಅನ್ನೋ ತರ ಆಡುತ್ತಿದ್ದರು ಜನ, ಇದೆಲ್ಲದಕ್ಕೂ ಈಗ ದೊಡ್ಡ ಬ್ರೇಕ್ ಬಿದ್ದಿದ್ದು, ಟಿಕ್‍ಟಾಕ್ ಅಭಿಮಾನಿಗಳಿಗೆ ದೊಡ್ಡ ಶಾಕ್ ನೀಡಿರೋದಂತು ನಿಜ,ಚೀನಾ ಮತ್ತು ಭಾರತ ಗಡಿಯಲ್ಲಿ ಪರಿಸ್ಥಿತಿ ಉಲ್ಬಣವಾಗುತ್ತಿದ್ದಂತೆ, ದೇಶದಲ್ಲಿ ದೊಡ್ಡ ಮಟ್ಟದಲ್ಲಿ ಟಿಕ್‍ಟಾಕ್ ಬ್ಯಾನ್ ಆಗಬೇಕು ಅನ್ನೋ ಕೂಗುಗಳು ಸಹ ಕೇಳಿ ಬರ್ತಾ ಇತ್ತು, ಅಷ್ಟೇ ಅಲ್ಲದೇ ಟಿಕ್‍ಟಾಕ್ ಮೂಲಕನೇ ಸೆಲೆಬ್ರಿಟಿಗಳಾಗಿದ್ದ ಅದೆಷ್ಟೋ ಜನ ಟಿಕ್‍ಟಾಕ್ ಅನ್ ಇನ್ಸ್ಟಾಲ್ ಮಾಡುವ ಮೂಲಕ ಚೀನೀ ಉತ್ಪಾನ ಬ್ಯಾನ್ ಆಗ ಬೇಕು ಅನ್ನೋ ಕೂಗಿಗೆ ಕೈ ಜೋಡಿಸಿದ್ರು, ಇನ್ನು ಇತ್ತಿಚೆಗೆ ನಟಿ ನಿರ್ದೇಶಕಿ ಕಂಗನಾ ರನಾವತ್ ಕೂಡ ಚೀನಾ ಉತ್ಪನ್ನಗಳನ್ನು ಬ್ಯಾನ್ ಮಾಡಬೇಕು ಮತ್ತು ಚೀನಾ ವಸ್ತುಗಳನ್ನು ಖರೀದಿ ಮಾಡುವುದನ್ನು ನಿಲ್ಲಿಸ ಬೇಕು ಅನ್ನೋ ಕರೆಯನ್ನು ಸಹ ನೀಡಿದ್ರು, ಇದೆಲ್ಲದರ ನಡುವೆ ಈಗ ಕೇಂದ್ರ ಸರ್ಕಾರ ಟಿಕ್‍ಟಾಕ್ ಬ್ಯಾನ್ ಮಾಡುವ ಮೂಲಕ ಚೀನಾ ದೇಶಕ್ಕೆ ಪರೋಕ್ಷವಾಗಿ ದೊಡ್ಡ ಹೊಡೆತವನ್ನೇ ಕೊಟ್ಟಿದೆ, ಅಷ್ಟೇ ಅಲ್ಲದೇ ಟಿಕ್ ಟಾಕ್ ಸೇರಿದಂತೆ ಒಟ್ಟು 59 ಕ್ಕೂ ಹೆಚ್ಚು ಚೀನೀ ಆಪ್‍ಗಳನ್ನು ಭಾರತ ಸರ್ಕಾರ ಬ್ಯಾನ್ ಮಾಡುವ ಮೂಲಕ ಚೀನಾಗೆ ಎಚ್ಚರಿಕೆಯನ್ನು ನೀಡಿದೆ. ನಮ್ಮ ತಂಟೆಗೆ ಬಂದರೆ ಅದೇನೇ ಇದ್ರು ಕಠಿಣ ನಿರ್ಧಾರಗಳನ್ನು ನಾವು ತೆಗೆದುಕೊಳ್ಳುತ್ತೇವೆ ಅನ್ನೊ ಸಂದೇಶವನ್ನು ಸದ್ಯ ಕೇಂದ್ರ ಸರ್ಕಾರ ರವಾನಿಸಿದೆ.

ಒಟ್ಟಿನಲ್ಲಿ ಟಿಕ್ ಟಾಕ್ ಸೇರಿದಂತೆ 59 ಆ್ಯಪ್‍ಗಳನ್ನು ಬ್ಯಾನ್ ಮಾಡುವ ಮೂಲಕ ಚೀನಾಗೆ ದೊಡ್ಡ ಹೊಡೆತವನ್ನು ನೀಡಿದೆ ಭಾರತ.

ಇನ್ನು ಟಿಕ್ ಟಾಕ್ ಜೊತೆಯಲ್ಲಿ ಬ್ಯಾನ್ ಆಗಿರುವ ಪ್ರಮುಖ ಆ್ಯಪ್‍ಗಳೆಂದರೆ
ಶೇರ್ ಇಟ್
ಯೂಸಿ ಬ್ರೌಸರ್
ಹಲೋ ಆ್ಯಪ್
ವಿ ಚಾಟ್
ವೈರಸ್ ಕ್ಲೀನರ್
ಕ್ಲಬ್ ಫ್ಯಾಕ್ಟರ್
ಟಿಕ್‍ಟಾಕ್ ಶೇರ್
ಬ್ಯೂಟಿ ಪ್ಲಸ್
ಮೇಲ್ ಮಾಸ್ಟರ್
ಸೇರಿದಂತೆ 59 ಆ್ಯಪ್‍ಗಳನ್ನು ಭಾರತ ಸರ್ಕಾರ ಬ್ಯಾನ್ ಮಾಡುವ ಮೂಲಕ ಗಡಿಯಲ್ಲಿ ಚೀನಾ ತೆಗೆದಿರೋ ಖ್ಯಾತೆಗೆ ತಕ್ಕ ಉತ್ತರವನ್ನು ನೀಡಿದೆ.

59 ಆ್ಯಪ್‍ಗಳನ್ನು ಭಾರತ ಸರ್ಕಾರ ಬ್ಯಾನ್
ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಳ್ಳಿ

Similar Articles

Comments
Top