ಭಾರತದಲ್ಲಿ ಟಿಕ್‍ಟಾಕ್ ಬ್ಯಾನ್ ಆದ್ರೂ ಪಬ್‍ಜಿ ಬ್ಯಾನ್ ಯಾಕೆ ಆಗಲಿಲ್ಲ ಗೊತ್ತಾ..?!

ದೇಶದಲ್ಲಿ ದೊಡ್ಡ ಮಟ್ಟದಲ್ಲಿ ಸಂಚಲ ಸೃಷ್ಟಿಸಿದ ವಿಷಯವಂದ್ರೆ ಅಂದು ಚೀನಾದ 59 ಆ್ಯಪ್‍ಗಳನ್ನು ಭಾರತ ಸರ್ಕಾರ ಬ್ಯಾನ್ ಮಾಡಿರುವುದು, 59 ಆ್ಯಪ್‍ಗಳು ದೇಶದ ಗೌಪ್ಯತೆಯ ದೃಷ್ಟಿಯಿಂದ ಬ್ಯಾನ್ ಮಾಡಲಾಗಿದ್ದು, ಈಗ ಎಲ್ಲರ ತಲೆಯಲ್ಲೂ ಓಡುತ್ತಿರೋ ವಿಷಯವಂದ್ರೆ ಟಿಕ್ ಟಾಕ್ ಸೇರಿದಂತೆ ಹಲವು ಆ್ಯಪ್‍ಗಳನ್ನು ಬ್ಯಾನ್ ಮಾಡಿರುವ ಭಾರತ ಸರ್ಕಾರ, ಪಬ್ ಜಿಯನ್ನು ಯಾಕೆ ಬ್ಯಾನ್ ಮಾಡಿಲ್ಲ ಅನ್ನೋ ಮಾತುಗಳು ಸಹ ಈಗ ಕೇಳಿ ಬರ್ತಾ ಇದೆ.
ನಿಮಗೆಲ್ಲರಿಗೂ ಗೊತ್ತಿರೊ ಹಾಗೆ ಪಬ್ ಜಿ ಒಂದು ರೀತಿಯಲ್ಲಿ ಜನರನ್ನು ಹುಚ್ಚರಂತೆ ಮಾಡಿರುವ ಆ್ಯಪ್ ಅಂದರೆ ತಪ್ಪಿಲ್ಲ, ಒಂದುಇ ಕಡೆ ಟಿಕ್ ಟಾಕ್‍ನಿಂದ ಒಂದಿಷ್ಟು ಜನ ತಮ್ಮ ಮನಸ್ಸನ್ನು ಹಾಳು ಮಾಡಿಕೊಂಡಿದ್ದರೆ, ಇತ್ತ ಪಬ್‍ಜಿ ಮೂಲಕ ಹುಚ್ಚರಾಗಿ ಹೋಗಿದ್ದೇವೆ, ಅದೆಷ್ಟೋ ಜನ ಚಿಕನ್ ಡಿನ್ನರ್ ಅನ್ನೋ ವಿನ್ನರ್ ಗೇಮ್ ಆಡುವ ಸಲುವಾಗಿ ನಿದ್ದೆ ಬಿಟ್ಟು ಆಡುವ ಮೂಲಕ ಅರೆ ಹುಚ್ಚರಂತೆ ರೋಡಿನಲ್ಲಿ ಓಡಾಡೋ ಜನರನ್ನು ನಾವು ನೀವೂ ಸೋಶಿಯಲ್ ಮೀಡಿಯಾದಲ್ಲಿ ನೋಡಿರುತ್ತವೆ.

ಇನ್ನು ಪಬ್ ಜಿ ಆಡಲು ಮೊಬೈಲ್ ಕೊಡಲಿಲ್ಲವೆಂದು ಸಹ ತಂದೆಯನ್ನೋ, ಅಕ್ಕನನ್ನೋ,ಅಮ್ಮನನ್ನೋ, ಸ್ನೇಹಿತರನ್ನೋ ಕೊಲೆ ಮಾಡಿರೋ ಘಟನೆಗಳನ್ನು ನೋಡಿರುತ್ತೆವೆ. ಇಷ್ಟಲ್ಲ ನಡೆದರು ಅದೆಷ್ಟೋ ಪೋಷಕರು ಪಬ್‍ಜಿ ಗೇಮ್ ಅನ್ನು ಬ್ಯಾನ್ ಮಾಡಬೇಕು ಅನ್ನೋ ಮಾತುಗಳನ್ನು ಆಡಿದ್ರು, ಆದ್ರೆ ಸದ್ಯ 59 ಚೀನಾ ಆ್ಯಪ್‍ಗಳನ್ನು ಬ್ಯಾನ್ ಮಾಡಿದ್ರು, ಚೀನಾದ ಆ್ಯಪ್ ಆದ ಪವ್‍ಜಿಯನ್ನು ಯಾಕೆ ಬ್ಯಾನ್ ಮಾಡಿಲ್ಲ ಅಂತ ಮಾತುಗಳು ಕೇಳಿ ಬರ್ತಾ ಇದೆ, ಆದ್ರೆ ಇರುವ ಸತ್ಯವೇ ಬೇರೆ ಹೌದು ಪಬ್ ಜಿ ಸಂಪೂರ್ಣವಾಗಿ ಚೀನಾ ಆ್ಯಪ್ ಅಲ್ಲ , ಬದಲಿಗೆ ಅದು ದಕ್ಷಿಣ ಕೊರಿಯಾದ ಬ್ಲೂ ಹೋಲ್ ಎಂಬ ಕಂಪನಿಗೂ ರೆಡಿ ಮಾಡಿರೋ ಆ್ಯಪ್ ಆಗಿದ್ದು, ಆ ಮೂಲಕ ಅದು ಕಾರ್ಯ ನಿರ್ವಹಿಸುತ್ತಿತ್ತು, ಸ್ವಲ್ಪ ಸಮಯದ ನಂತರ ಅದರ ಹೆಚ್ಚಿನ ನಿರ್ವಹಣೆಯನ್ನು ಚೀನಾದ ಒಂದು ಕಂಪನಿಯೂ ವಹಿಸಿಕೊಂಡಿದೆ, ಚೀನಾದ ಟೆನ್ಸೆಂಟ್ ಕಂಪನಿ ದಕ್ಷಿಣ ಕೊರಿಯಾದ ಬ್ಲೂ ಹೋಲ್ ಕಂಪನಿ ಜೊತೆ ಕೈ ಜೋಡಿಸಿ ಹೆಚ್ಚಿನ ನಿರ್ವಹಣೆಯನ್ನು ಚೀನಾ ಕಂಪನಿ ತೆಗೆದುಕೊಂಡಿದೆ, ಹೀಗಾಗಿ ಪಬ್ ಜಿ ಜಂಟಿ ಓನರ್‍ಶಿಪ್‍ನಲ್ಲಿ ಇರುವುದಿರಿಂದಾಗಿ ಇದನ್ನು ನಿಷೇಧಿಸುವ ನಿರ್ಧಾರವನ್ನು ಭಾರತ ಸರ್ಕಾರ ತೆಗೆದುಕೊಂಡಿಲ್ಲ.

ಇನ್ನು ಪಬ್‍ಜಿ ಜೊತೆಯಲ್ಲಿ ಇನ್ನು ಕೆಲವು ಆ್ಯಪ್‍ಗಳನ್ನು ಸಹ ನಿಷೇಧ ಮಾಡಿಲ್ಲ ಅವುಗಳೆಂದರೆ
ಎಂವಿ ಮಾಸ್ಟರ್
ಅಲಿ ಎಕ್ಸ್ ಪ್ರೆಸ್
ಟರ್ಬೊ ವಿಪಿಎನ್
ಡು ಮೊಬೈಲ್ ಆ್ಯಪ್ ಲಾಕ್
ರೋಜ್ ಬುಜ್ ವಿ ಮೀಡಿಯಾ
360 ಸೆಕ್ಯೂರಿಟಿ
ಆಪ್ ಲಾಕ್ಸ್
ನೊನೊ ಲೈವ್
ಗೇಮ್ ಆಫ್ ಸುಲ್ತಾನ್ಸ್
ಮಾಫಿಯ ಸಿಟಿ
ಬ್ಯಾಟಲ್ ಆಫ್ ಎಂಪೈರ್ಸ್

ಈ ರೀತಿ ಕೆಲವು ಚೀನಿ ಆ್ಯಪ್‍ಗಳನ್ನು ಇನ್ನು ಬ್ಯಾನ್ ಮಾಡಿಲ್ಲ, ಈ ಆ್ಯಪ್‍ಗಳಿಂದಲೂ ದೇಶದ ಸುಕ್ಷತೆಗೆ ದಕ್ಕೆ ಉಂಟಾದಲ್ಲಿ ಇವುಗಳನ್ನು ಸಹ ಬ್ಯಾನ್ ಮಾಡಲು ಬಹುದಾಗಿದೆ.

ಇನ್ನು ಟಿಕ್ ಟಾಕ್ ಸೇರಿದಂತೆ 59 ಆ್ಯಪ್‍ಗಳನ್ನು ಭಾರತ ಸರ್ಕಾರ ಬ್ಯಾನ್ ಮಾಡಿದ ಬೆನ್ನಲ್ಲೇ, ಬ್ಯಾನ್ ಮಾಡಿದ ಕೇವಲ 8 ಗಂಟೆಯಲ್ಲಿ ಗೂಗಲ್ ಪ್ಲೇ ಸ್ಟೋರ್ ಮತ್ತು ಆಪಲ್ ಸ್ಟೋರ್‍ಗಳಲ್ಲಿ ಟಿಕ್ ಟಾಕ್ ಆ್ಯಪ್ ಸೇರಿದಂತೆ 59 ಆ್ಯಪ್‍ಗಳನ್ನು ಡಿಲೀಟ್ ಮಾಡಿದ್ದು, ಸದ್ಯ ಈ ಆ್ಯಪ್‍ಗಳು ಲಭ್ವಯವಿಲ್ಲವಾಗಿದೆ.

ಇನ್ನು ಈಗಾಗಲೇ ಟಿಕ್‍ಟಾಕ್ ಡಿಲೀಟ್ ಮಾಡದೇ ಯೂಸ್ ಮಾಡುತ್ತಿರೋರು ಇನ್ಮುಂದೆ ಟಿಕ್‌ಟಾಕ್ ವಿಡಿಯೋ ನೋಡಲು ಸಾಧ್ಯವಿಲ್ಲ, ಹೌದು ಇನ್ನು ಮುಂದೆ ಟಿಕ್ ಟಾಕ್ ಯೂಸ್ ಮಾಡುವವರು ಆ್ಯಪ್ ಓಪನ್ ಮಾಡಿದ ಕೂಡಲೇ ಇಂಟರ್‍ನೆಟ್ ಕೂಡ ಅಲಭ್ಯವಾಗಲಿದೆ, ಇಂದು ಮಧ್ಯಾಹ್ನದಿಂದ ಎಲ್ಲಾ ಇಂಟರ್ ನೆಟ್ ಕಂಪನಿಗಳು ಸಹ ಬ್ಲಾಕ್ ಮಾಡಿವೆ, ಆದ್ದರಿಂದಾಗಿ ಟಿಕ್‍ಟಾಕ್ ಇಟ್ಟುಕೊಂಡಿರುವವರಿಗೂ ಸಹ ಈ ಆ್ಯಪ್ ಉಪಯೋಗಕ್ಕೆ ಬರದೇ ಹೋಗಲಿದೆ. ಈ ಮೂಲಕ ಚೀನಿ ಆಪ್ ಮೇಲೆ ಭಾರತ ಸರ್ಕಾರ ಕಟ್ಟು ನಿಟ್ಟಿನ ಕ್ರಮಗಳನ್ನು ತೆಗೆದುಕೊಂಡಿದ್ದು, ಈಗ ಪಬ್‍ಜಿ ಅನ್ನು ಬ್ಯಾನ್ ಮಾಡಿ ಅನ್ನೋ ಕೂಗು ಸಹ ಕೇಳಿ ಬರ್ತಾ ಇದೆ, ಇನ್ನು ಈಗಾಗಲೇ ದೇಶದ ಗೌಪ್ಯತೆ ವಿಷಯದಲ್ಲಿ ಯಾವುದೇ ಮಾಹಿತಿ ಸೋರಿಕೆಯಾಗುವ ಆಪ್‍ಗಳಿದ್ದರು ಆ ಆಪ್‍ಗಳನ್ನು ಬ್ಯಾನ್ ಮಾಡಲು ಭಾರತ ಸರ್ಕಾರ ನಿರ್ಧಾರ ಮಾಡಿದ್ದು ಮುಂದಿನ ದಿನಗಳಲ್ಲಿ ಬೇರೆ ಯಾವೆಲ್ಲ ಆ್ಯಪ್‍ಗಳು ಬ್ಯಾನ್ ಆಗಲಿವೇ ಕಾದು ನೋಡಬೇಕು.


ಇನ್ನು ಪಬ್ ಜಿ ವಿಚಾರದಲ್ಲೂ ಎದ್ದಿರುವ ಬ್ಯಾನ್ ವಿಷಯದಲ್ಲಿ ನಿಮ್ಮ ಅಭಿಪ್ರಾಯವೇನು, ಪಬ್‍ಜಿ ಬ್ಯಾನ್ ಆಗಬೇಕೇ ನಿಮ್ಮ ಅಭಿಪ್ರಾಯವೇನು ಕಾಮೆಂಟ್ ಮಾಡಿ ತಿಳಿಸಿ.

ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಳ್ಳಿ

Similar Articles

Comments
Top