ತಂಗಿ ಸ್ನಾನ ಮಾಡೋ ವಿಡಿಯೋವನ್ನು ಬಾಯ್‍ಫ್ರೆಂಡ್‍ಗೆ ಕಳುಹಿಸಿದ್ಲು ಅಕ್ಕ..!ಮುಂದೇನಾಯ್ತು..!

ಏನ್ ಕಾಲ ಬಂತು ರೀ.. ಆಸೆಗೂ ಒಂದು ಮಿತಿ ಇರಬೇಕು..ಆ ದುರಾಸೆಯಾದ್ರೆ ಯಾರಿಗೆ ಯಾವಾಗ ಆಪತ್ತು ಬರುತ್ತೆ ಅನ್ನೋದು ಮಾತ್ರ ಗೊತ್ತಾಗೋದಿಲ್ಲ..ಅದಕ್ಕೆ ಈಗ ಉತ್ತಮ ಉದಾಹರಣೆ ಮಹಾರಾಷ್ಟ್ರದ ಅಗ್ರಿಪಾಡಾದಲ್ಲಿ ನಡೆದಿದೆ..ತಾನು ಮದುವೆಯಾಗುತ್ತೇನೆ,ನಿನ್ನ ಸಹೋದರಿಯ ವಿಡಿಯೋ ಶೇರ್ ಮಾಡು ಎಂದು ಬಾಯ್ ಫ್ರೆಂಡ್ ಹೇಳಿದ್ದಕ್ಕೆ ದುರಾಸೆಯಿಂದ 25ವರ್ಷದ ಯುವತಿಯೊಬ್ಬಳು ತನ್ನ 20ವರ್ಷದ ಸಹೋದರಿ ಸ್ನಾನ ಮಾಡುವಾಗ ತನ್ನ ಬಾಯ್ ಫ್ರೆಂಡ್‍ಗೆ ವಿಡಿಯೋ ಕಾಲ್ ಮಾಡಿ ತನ್ನ ಸಹೋದರಿಯ ನಗ್ನ ವಿಡಿಯೋವನ್ನು ತೋರಿಸಿದ್ದಾಳೆ. ಇನ್ನು ಈ ವಿಡಿಯೋದಿಂದ ಸ್ಕ್ರೀನ್ ಶಾಟ್ ತೆಗೆದುಕೊಂಡ ಆ ಯುವಕ ಆ ಫೋಟೋಗಳನ್ನು ಹುಡುಗಿಯ ಸಂಬಂಧಿಕರಿಗೆ ಶೇರ್ ಕೂಡ ಮಾಡಿದ್ದಾನೆ.

ಈ ವಿಚಾರ ಗೊತ್ತಾಗುತ್ತಿದ್ದಂತೆ 20ವರ್ಷದ ಸಹೋದರಿ ಹತ್ತಿರದ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದು ಅಕ್ಕನನ್ನು ಬಂಧಿಸಲಾಗಿದೆ, ಆದ್ರೆ ವಿಡಿಯೋ ಕಾಲ್ ಮೂಲಕ ನಗ್ನ ವಿಡಿಯೋವನ್ನು ಶೇರ್ ಮಾಡಿಸಿಕೊಂಡಿದ್ದ ಯುವಕ ಸದ್ಯ ತಲೆಮರೆಸಿಕೊಂಡಿದ್ದು ಆ ಯುವಕನ ಶೋಧಕಾರ್ಯ ನಡೆಸುತ್ತಿದ್ದಾರೆ ಮಹಾರಾಷ್ಟ್ರ ಪೊಲೀಸರು.

ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಳ್ಳಿ

Similar Articles

Comments
Top