ಹೆಂಡತಿ ತವರು ಮನೆಗೆ ಹೋಗಿದ್ದಕ್ಕೆ ಟ್ಯಾಂಕರ್ ಏರಿ ಏನು ಮಾಡಿದ ಗೊತ್ತಾ..?

telangana man jumps from water tank

ಗಂಡ-ಹೆಂಡತಿ ಜಗಳ ಉಂಡು ಮಲಗೋ ತನಕ ಅಂತಾರೆ, ಆದ್ರೆ ಇಲ್ಲೊಂದು ಕುಟುಂಬದ ಜಗಳ ಆತ್ಮಹತ್ಯೆಯವರೆಗೆ ಬಂದು ನಿಂತಿದೆ, ಹೆಂಡತಿ ಜಗಳವಾಡಿಕೊಂಡು ತವರು ಮನೆಗೆ ಹೋಗಿದ್ದಾಳೆ ಎಂದು ನೊಂದ ಪತಿರಾಯ ಬೇಸರಗೊಂಡು ನೀರಿನ ಟ್ಯಾಂಕ್ ಏರಿ ಆತ್ಮಹತ್ಯೆಗೆ ಯತ್ನಿಸಿದ ಘಟನೆ ತೆಲಾಂಗಣದ ಸಿದ್ದಪೇಟಾದಲ್ಲಿ ನಡೆದಿದೆ, ಹೆಂಡತಿ‌ ತವರು ಮನೆಗೆ ಹೋಗಿದ್ದಕ್ಕೆ ಬೇಸರಗೊಂಡು ನೀರಿನ ಟ್ಯಾಂಕ್ ಏರಿ ಅಲ್ಲಿಂದ ಜಿಗಿದಿದ್ದಾನೆ, ಗ್ರಾಮಸ್ಥರು‌ ಎಷ್ಟೇ ಮನವೊಲಿಸಲು ಪ್ರಯತ್ನಿಸಿದ್ರು ಕೇಳದ ಯಾದಗಿರ್ ಎಂಬ ವ್ಯಕ್ತಿ ನೀರಿನ ಟ್ಯಾಂಕ್ ನಿಂದ ಜಿಗಿದು‌ ಆತ್ಮಹತ್ಯೆಗೆ ಯತ್ನಿಸಿದ್ದಾನೆ, ಇನ್ನು ಅಲ್ಲಿದ್ದ ಗ್ರಾಮಸ್ಥರು ಜಿಗಿದ ಯಾದಗಿರ್ ಅನ್ನು ಸಿಕಂದರಾಬಾದ್ ಆಸ್ಪತ್ರೆಗೆ ದಾಖಲಿಸಿದ್ದು ಯಾದಗಿರ್ ಜೀವ ಮರಣದ ಮಧ್ಯೆ ಹೋರಾಡಿತ್ತಿದ್ದಾನೆ.

ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಳ್ಳಿ

Similar Articles

Comments
Top