ವಿಶ್ವ ಕ್ರಿಕೆಟ್ಗೆ ಈಗಾಗಲೇ ಇಂಗ್ಲೆಂಡ್ ಮತ್ತು ವಿಂಡೀಸ್ ಟೂರ್ನಿ ಚಾಲನೆ ಕೊಟ್ಟಿದ್ದು, ಈಗಾಗಲೇ ಮೊದಲ ಟೆಸ್ಟ್ ಪಂದ್ಯದಲ್ಲಿ ವಿಂಡೀಸ್ ಗೆದ್ದು ಬೀಗಿದೆ. ಹೀಗಿರುವಾಗಲೇ ಇತ್ತ ಬಿಸಿಸಿಐ ಕೂಡ ಕೆಲವ ಪ್ರಮುಖ ಟೂರ್ನಿಗಳಲ್ಲಿ ಪಾಲ್ಗೊಳಲು ಮತ್ತು ಟೂರ್ನಿಯನ್ನು ನಡೆಸಲು ಈಗಾಗಲೇ ಉತ್ಸುಕವಾಗಿದ್ದು, ಅದರ ಬಗ್ಗೆ ಈಗಾಗಲೇ ಚಿಂತನೆಯನ್ನು ನಡೆಸುತ್ತಿದೆ. ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ ಹೇಳಿರುವ ಹಾಗೇ ಐಪಿಎಲ್ ಟೂರ್ನಿಯನ್ನು ನಡೆಸಲು ತೀರ್ಮಾನವನ್ನು ಮಾಡಿಕೊಂಡಿದ್ದು, ಟಿ20 ವಿಶ್ವಕಪ್ ರದ್ದಾಗುವ ಹಿನ್ನೆಲೆಯಲ್ಲಿ ಅದೇ ವೇಳಪಟ್ಟಿಯಲ್ಲಿ ಐಪಿಎಲ್ ಟೂರ್ನಿಯನ್ನು ನಡೆಸಲು ಬಿಸಿಸಿಐ ತೀರ್ಮಾನವನ್ನು ತೆಗೆದುಕೊಂಡಿದೆ.
ಇನ್ನು ಅಕ್ಟೋಬರ್ ಮತ್ತು ನವೆಂಬರ್ ತಿಂಗಳಿನಲ್ಲಿ ಐಪಿಎಲ್ ಟೂರ್ನಿ ನಡೆಸಲು ತೀರ್ಮಾನವನ್ನು ತೆಗೆದುಕೊಂಡಿದ್ದು, ಹೀಗಿರುವಾಗಲೇ ಡಿಸೆಂಬರ್ ಮೂರಕ್ಕೆ ಆಸ್ಟ್ರೇಲಿಯಾ ವಿರುದ್ಧ ಪ್ರಾರಂಭವಾಗ ಬೇಕಾಗಿದ್ದ ಟೆಸ್ಟ್ ಸರಣಿ ಈಗ ಒಂದು ವಾರ ಮುಂದೂಡಲು ಬಿಸಿಸಿಐ ಚಿಂತನೆಯನ್ನು ನಡೆಸಿದಯಂತೆ.
ಇನ್ನು ಅಸ್ಟ್ರೇಲಿಯಾ ಪ್ರವಾಸದಲ್ಲಿ ಟೆಸ್ಟ್ ಸರಣಿಯ ಜೊತೆಯಲ್ಲಿ ಟಿ೨೦ ಮತ್ತು ಏಕದಿನ ಸರಣಿಯನ್ನು ಟೀಂ ಇಂಡಿಯಾ ಆಡಬೇಕಾಗಿತ್ತು, ಆದ್ರೆ ಈಗ ಟಿ೨೦ ಮತ್ತು ಏಕದಿನ ಪಂದ್ಯಗಳನ್ನು ಕಡಿತಗೊಳಿಸಲು ಬಿಸಿಸಿಐ ಚಿಂತನೆ ನಡೆಸಿದ್ದು, ಡಿಸೆಂಬರ್ 10 ರಿಂದ ಟೆಸ್ಟ್ ಸರಣಿ ಆರಂಭಿಸಲು ಬಿಸಿಸಿಐ ಚಿಂತನೆ ನಡೆಸಿದೆ. ಇನ್ನು ಟೆಸ್ಟ್ ಸರಣಿ ಆರಂಭಕ್ಕೂ ಮುನ್ನ 2 ಅಭ್ಯಾಸ ಪಂದ್ಯಗಳನ್ನು ಸಹ ನೆಡಸಲು ಚಿಂತನೆಯನ್ನು ನಡೆಸಲಾಗಿದೆ.
ಈ ಬಗ್ಗೆ ಸದ್ಯದರಲ್ಲಿಯೇ ಬಿಸಿಸಿಐ ಅಧಿಕೃತ ಘೋಷಣೆಯನ್ನು ಮಾಡಲಿದ್ದು, ಇನ್ನು ಆಸ್ಟ್ರೇಲಿಯಾ ಪ್ರವಾಸದ ನಂತರ ಇಂಗ್ಲೆಂಡ್ ಸರಣಿ ಆರಂಭವಾಗಲಿದ್ದು, ಈ ಸರಣಿಯಲ್ಲೂ ಒಂದಿಷ್ಟು ಬದಲಾವಣೆಯನ್ನು ಮಾಡಿಕೊಳ್ಳಲಾಗಿದ್ದು , ಆಂಗ್ಲರು ಭಾರತ ಪ್ರವಾಸ ಕೈಗೊಳ್ಳಲಿದ್ದು, ಭಾರತ ವಿರುದ್ಧ ಇಂಗ್ಲೆಂಡ್ 5 ಟೆಸ್ಟ್ ಸರಣಿ ಬದಲು ಮೂರು ಟೆಸ್ಟ್ ಆಡಲಿದ್ದು ಟೆಸ್ಟ್ ಸರಣಿ ಬಳಿಕ 5 ಟಿ20 ಹಾಗೂ 5 ಏಕದಿನ ಪಂದ್ಯಗಳನ್ನು ಆಡಲಿದೆ.
ಸದ್ಯ ಬಿಸಿಸಿಐ ಐಪಿಎಲ್ ನಡೆಸುವುದರ ಬಗ್ಗೆ ತಲೆಕೆಡಿಸಿಕೊಂಡಿದ್ದು, ಶತಾಯಗತಾಯ ಅಕ್ಟೋಬರ್ ತಿಂಗಳಲ್ಲಿ ಟೂರ್ನಿ ನಡೆಸಲು ಪ್ರಯತ್ನಗಳು ನಡೀತಾ ಇವೆ. ಇನ್ನು ಐಪಿಎಲ್ ಭಾರತದಲ್ಲಿ ನಡೆಯಲಿದೆಯೋ ಅಥವಾ ಯುಎಇ ಮತ್ತು ಶ್ರೀಲಂಕಾದಲ್ಲಿ ನಡೆಸುವುದೋ ಅನ್ನೋ ಚಿಂತನೆಯಲ್ಲೂ ಕೂಡ ಬಿಸಿಸಿಐ ಇದೆ.
ಒಟ್ಟಿನಲ್ಲಿ ಸದ್ಯದ ಪರಿಸ್ಥಿತಿಯಲ್ಲಿ ಯಾವುದೇ ದೊಡ್ಡ ಮಟ್ಟದಲ ಚಟುವಟಿಕೆ ನಡೆಯದೆ ಇದ್ದರು ಇನ್ನು ಸ್ವಲ್ಪ ದಿನಗಳಲ್ಲಿ ಬಿಸಿಸಿಐ ಯಾವ ರೀತಿಯ ಮುನ್ನೆಚ್ಚರಿಕೆ ಕ್ರಮಗಳನ್ನು ತೆಗೆದುಕೊಂಡು ಟೂರ್ನಿ ನಡೆಸ್ತಾರೆ ಅನ್ನೋದನ್ನ ಕಾದು ನೋಡಬೇಕು.