ಪಾಕಿಸ್ತಾನಿಯರಿಗೆ ಸಮಸ್ಯೆ ಆಗಲ್ಲ ಅಂತ ಪಾಕ್‌ಗೆ ಭಾರತ ಲಿಖಿತ ರೂಪದಲ್ಲಿ ತಿಳಿಸಬೇಕಂತೆ..!

ಭಾರತ ಮತ್ತು ಪಾಕಿಸ್ತಾನ ನಡುವಿನ ಬಾಂಧವ್ಯ ಅಷ್ಟೇನೂ ಉತ್ತಮವಾಗಿರದ ಹಿನ್ನೆಲೆಯಲ್ಲಿ, ಭಾರತ ಮತ್ತು ಪಾಕಿಸ್ತಾನ ನಡುವಿನ ಪಂದ್ಯಗಳು ಹೆಚ್ಚಾಗಿ ನಡೆಯುತ್ತಿಲ್ಲ, 2018ರಲ್ಲಿ ಏಷ್ಯಾ ಕಪ್‌ ಟೂರ್ನಿ ಆಯೋಜನೆ ಮಾಡಬೇಕಾಗಿದ್ದ ಬಿಸಿಸಿಐ, ಪಾಕ್‌ಗೆ ಆತಿಥ್ಯ ನೀಡಬೇಕಾದ ಹಿನ್ನೆಲೆಯಲ್ಲಿ ಟೂರ್ನಿ ಆಯೋಜನೆಯಿಂದ ಹಿಂದಸರಿದಿತ್ತು, ಈ ಹಿನ್ನೆಲೆಯಲ್ಲಿ ಯುಎಇನಲ್ಲಿ ಟೂರ್ನಿ ಕೂಡ ಆಯೋಜನೆ ಆಗಿತ್ತು, ಸದ್ಯ ಭಾರತ 2021 ಮತ್ತು 2023ರಲ್ಲಿ ಟಿ 20 ಮತ್ತು ಏಕದಿನ ವಿಶ್ವಕಪ್‌ ಆತಿಥ್ಯವನ್ನು ವಹಿಸಿಕೊಳ್ಳುತ್ತಿದ್ದು, ಈ ವಿಚಾರವಾಗಿ ಈಗ ಪಾಕಿಸ್ತಾನ ಕ್ರಿಕೆಟ್‌ ಬೋರ್ಡ್‌ ಐಸಿಸಿಗೆ ಪತ್ರವನ್ನು ಬರೆದು ಮನವಿಯನ್ನು ಮಾಡಿಕೊಂಡಿದೆ.


ಮುಂದಿನ ದಿನದಲ್ಲಿ ಭಾರತ ಐಸಿಸಿ ವರ್ಲ್ಡ್‌ ಕಪ್‌ ಆತಿಥ್ಯ ವಹಿಸಿಕೊಂಡಿರಿವುದರಿಂದ ಎರಡು ಟೂರ್ನಿಗಳಲ್ಲಿ ಪಾಕಿಸ್ತಾನ ಆಟಗಾರರು ಭಾಗವಹಿಸಲು ಭಾರತಕ್ಕೆ ಬರಲು ಅವಕಾಶ ನೀಡ್ತಾರ ಇಲ್ವಾ ಅನ್ನೋ ಅನುಮಾನ ಸದ್ಯ ಪಿಸಿಬಿಗೆ ಶುರುವಾಗಿದ್ದು , ಇದರ ಸಲುವಾಗಿ ಪಿಸಿಬಿ ಈಗ ಐಸಿಸಿಗೆ ಮನವಿಯನ್ನು ಮಾಡಿಕೊಂಡಿದೆ.

2021ರಲ್ಲಿ ಟಿ 20 ವಿಶ್ವಕಪ್‌ ಮತ್ತು 2023ರಲ್ಲಿ ಏಕದಿನ ವಿಶ್ವಕಪ್‌ ಆತಿಥ್ಯವನ್ನು ಭಾರತ ವಹಿಸಿಕೊಂಡಿರುವುದರಿಂದಾಗಿ ಪಾಕಿಸ್ತಾನದ ಆಟಗಾರರು ಭಾಗವಹಿಸಲು ಭಾರತಕ್ಕೆ ಪ್ರವೇಶ ನೀಡುವ ಸಲುವಾಗಿ ಬಿಸಿಸಿಐ ಲಿಖಿತ ರೂಪದಲ್ಲಿ ಭರವಸೆ ನೀಡಬೇಕು. ಈ ಎರಡು ಟೂರ್ನಿಯಲ್ಲಿ ಭಾಗವಹಿಸುವ ಪಾಕಿಸ್ತಾನದ ಆಟಗಾರರಿಗೆ ಯಾವುದೇ ಸಮಸ್ಯೆ ಉಂಟಾಗದ ರೀತಿ ನೋಡಿಕೊಳ್ಳುತ್ತೇವೆ ಎಂದು ಲಿಖಿತ ರೂಪದಲ್ಲಿ ಭರವಸೆ ಕೊಡಿಸುವಂತೆ ಐಸಿಸಿಗೆ ಪಾಕಿಸ್ತಾನ ಕ್ರಿಕೆಟ್‌ ಬೋರ್ಡ್‌ ವಿಶೇಷವಾದ ಮನವಿಯನ್ನು ಮಾಡಿಕೊಂಡಿದೆ.

ಅಷ್ಟೇ ಅಲ್ಲದೇ ವೀಸಾ ವಿಷಯವಾಗಿ ಎಲ್ಲಾ ಕ್ಲಿಯರೆನ್ಸ್‌ ಅನ್ನು ನೀಡಬೇಕು ಅಂತಾನೂ ಮನವಿಯಲ್ಲಿ ತಿಳಿಸಿದೆ. ಈ ವಿಷಯವಾಗಿ ಮಾತನಾಡಿರುವ ಪಿಸಿಬಿ ಸಿಇಒ ವಸೀಂ ಖಾನ್‌, ಭಾರತ ಈ ವಿಚಾರವಾಗಿ ಲಿಖಿತ ರೂಪದಲ್ಲಿ ಭರವಸೆಯನ್ನು ನೀಡಬೇಕು ಅಂತ ಐಸಿಸಿಗೆ ಮನವಿ ಮಾಡಿಕೊಂಡಿದ್ದೇವೆ ಎಂದು ಹೇಳಿದ್ದಾರೆ.

ಭಾರತ ಮತ್ತು ಪಾಕ್‌ ವಿಚಾರವಾಗಿ ಉತ್ತಮ ಸಂಬಂಧ ಇರದ ಕಾರಣ ಎರಡು ತಂಡಗಳು ಯಾವುದೇ ಟೂರ್ನಿಯನ್ನು ಆಯೋಚನೆ ಮಾಡಿಕೊಂಡಿರಲಿಲ್ಲ, ಸದ್ಯ ಭಾರತ ಎರಡು ಪ್ರಮುಖ ಟೂರ್ನಿಗಳ ಆತಿಥ್ಯ ವಹಿಸಿರುವುದರಿಂದ ಪಾಕ್‌ ತಮ್ಮ ಆಟಗಾರರಿಗೆ ಎಲ್ಲಿ ಭಾಗವಹಿಸಲು ಅನುಮತಿ ಸಿಗುವುದಿಲ್ಲ ಅನ್ನೋ ಸಮಸ್ಯೆಯನ್ನು ಅರಿತು ತನ್ನ ಎಲ್ಲಾ ರೀತಿಯಲ್ಲೂ ಪ್ರಯತ್ನಗಳನ್ನು ಮಾಡಲು ಮುಂದಾಗಿದೆ ಪಾಕ್‌ ಕ್ರಿಕೆಟ್‌ ಬೋರ್ಡ್‌.

ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಳ್ಳಿ

Similar Articles

Comments
Top