ಶುರುವಾಗ್ತಿದೆ ಬಿಗ್ ಬ್ಯಾಶ್ ಟೂರ್ನಿ..! ಯಾವಾಗ ಗೊತ್ತಾ.?

ಕ್ರಿಕೆಟ್ ಲೋಕದಲ್ಲಿ ಈ ಟೂರ್ನಿಗಳು ಸಖತ್ ಹೆಸರು ಮತ್ತು ಹಣವನ್ನು ತಂದು ಕೊಡುವ ಟೂರ್ನಿ ಎಂದ್ರೆ ತಪ್ಪಾಗಲಾರದು, ಒಂದು ಕಡೆ ಭಾರತದಲ್ಲಿ ನಡಿಯೋ ಐಪಿಎಲ್ ವಿಶ್ವದ ನಂಬರ್ ಒನ್ ಟೂರ್ನಿ ಆದ್ರೆ, ಆಸ್ಟ್ರೇಲಿಯಾದಲ್ಲಿ ನಡಿಯೋ ಬಿಗ್‍ಬ್ಯಾಶ್ ಕೂಡ ಅಷ್ಟೇ ಪ್ರಸಿದ್ಧಿಯನ್ನು ಪಡೆದಿರೋ ಟೂರ್ನಿ,ಈ ಎರಡು ಟೂರ್ನಿಯಲ್ಲಿ ಆಡಬೇಕು ಅಂತ ಇಡೀ ವಿಶ್ವದ ಕ್ರಿಕೆಟ್ ಪ್ಲೇಯರ್ಸ್‍ಗಳು ಕಾಯ್ತಾ ಹಾತೋರೆಯುತ್ತಿರುತ್ತಾರೆ.

ಈಗಾಗಲೇ ವಿಶ್ವ ಕ್ರಿಕೆಟ್ ಟೂರ್ನಿಗಳು ಒಂದರ ಹಿಂದೆ ಒಂದು ಆರಂಭವಾಗಲು ಸನ್ನಧವಾಗುತ್ತಿರುವಾಗ, ಇತತ ಭಾರತ ಕೂಡ ಐಪಿಎಲ್ ಆಯೋಜಿಸಬೇಕು ಅನ್ನೋ ಪ್ಲಾನ್‍ನಲ್ಲಿ ಕೂಡ ಇದೆ. ಅಕ್ಟೋಬರ್ ಮತ್ತು ನವೆಂಬರ್ ತಿಂಗಳಿನಲ್ಲಿ ಐಪಿಎಲ್ ಆಯೋಜನೆ ಮಾಡಲು ಬಿಸಿಸಿಐ ಎಲ್ಲಾ ರೀತಿಯ ತಯಾರಿಗಳನ್ನು ಮಾಡಿಕೊಳ್ಳುತ್ತಿದ್ರೆ, ಇತ್ತ ಆಸ್ಟ್ರೇಲಿಯಾದಲ್ಲೂ ಕೂಡ ಬಿಗ್‍ಬ್ಯಾಶ್ ಆಯೋಜನೆ ಮಾಡಲು ಎಲ್ಲಾ ರೀತಿಯ ತಯಾರಿಗಳನ್ನು ಮಾಡಿಕೊಳ್ತಾ ಇದ್ದಾರೆ.

ಈಗಾಗೇ ಬಿಗ್ ಬ್ಯಾಶ್ ನಡೆಸಲು ದಿನಾಂಕವನ್ನು ನಿಗದಿಮಾಡಿದ್ದು ಕ್ರಿಕೆಟ್ ಆಸ್ಟ್ರೇಲಿಯಾ, 10 ನೇ ಆವೃತ್ತಿಯನ್ನು ಡಿಸೆಂಬರ್ 3 ರಿಂದ ಫ್ರೆಬ್ರವರಿ 6ರವಗೆ ನಡೆಸಲು ಪ್ಲಾನ್ ಮಾಡಿಕೊಂಡಿದ್ಯಂತೆ.

ಡಿಸೆಂಬರ್‍ನಲ್ಲಿ ನಡಿಯೋ ಬಿಗ್‍ಬ್ಯಾಶ್ ಟೂರ್ನಿ ಈ ಬಾರಿ ಹಗಲಿನ ಮ್ಯಾಚ್‍ಗಿಂತ ಪ್ರೈಂ ಟೈಂ ಮ್ಯಾಚ್‍ಗಳು ಹೆಚ್ಚಾಗಿ ನಡೆಯಲಿದಯಂತೆ, ಇನ್ನು ಟೂರ್ನಿಯ ವೇಳಪಟ್ಟಿ ರೆಡಿಯಾಗಿದ್ದು, ಮೊದಲ ಮ್ಯಾಚ್ ಅಡಿಲೇಡ್ ಸ್ಟ್ರೈಕರ್ಸ್ ಮತ್ತು ಮೆಲ್ಬೋರ್ನ್ ರೆನಿಗೇಡ್ಸ್ ನಡುವೆ ನಡೆಯಲಿ.

ಕೋವಿಡ್ ಆತಂಕದ ನಡುವೆ ಎಲ್ಲಾ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಂಡು ಆಸ್ಟ್ರೇಲಿಯಾ ಕ್ರಿಕೆಟ್ ಬಿಗ್ ಬ್ಯಾಶ್ ಆಡಿಸಲು ಸನ್ನಧವಾಗುತ್ತಿದೆ.

ಮಹಿಳಾ ಬಿಗ್‍ಬ್ಯಾಶ್ ಲೀಗ್‍ಗೂ ದಿನಾಂಕ ನಿಗದಿ..!

ಮೆನ್ ಬಿಗ್ ಬ್ಯಾಶ್ ರೀತಿಯಲ್ಲಿ ಮಹಿಳಾ ಬಿಗ್‍ಬ್ಯಾಶ್ ಕೂಡ ಅಷ್ಟೇ ಪ್ರಸಿದ್ಧಿ ಹೊಂದಿದ್ದು, ಈ ಲೀಗ್‍ನ ದಿನಾಂಕವೂ ಕೂಡ ಈಗ ನಿಗದಿಯಾಗಿದೆ.
ಮಹಿಳಾ ಬಿಗ್ ಬ್ಯಾಶ್ ಅಕ್ಟೋಬರ್ 17 ರಿಂದ ನವೆಂಬರ್ 22ರ ವರೆಗೆ ನಡೆಸಲು ಚಿಂತನೆ ನಡೆಸಿದ್ದು, ಆಸ್ಟ್ರೇಲಿಯಾದಲ್ಲಿ ಸದ್ಯ ಕೋವಿಡ್ ಪರಿಸ್ಥಿತಿ ಹೆಚ್ಚಾಗಿದ್ದು, ಅಕ್ಟೋಬರ್ ತಿಂಗಳಲ್ಲಿ ಕೋವಿಡ್ ಪರಿಸ್ಥಿತಿ ನೋಡಿ ಲೀಗ್ ಆರಂಭಿಸಲಿದ್ದಾರೆ.ಕೋವಿಡ್ ಕಂಟಕ ಹೀಗೆ ಮುಂದುರವರೆಯುತ್ತಿದ್ದರೆ, ಮಹಿಳಾ ಬಿಗ್ ಬ್ಯಾಶ್ ವೇಳಾಪಟ್ಟಿ ಕೂಡ ಬದಲಾವಣೆಯಾಗುವ ಸಾಧ್ಯತೆ ಇದೆ.

ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಳ್ಳಿ

Similar Articles

Comments
Top