ಕೆನರಾ & ಸಿಂಡಿಕೇಟ್ ಬ್ಯಾಂಕ್ ವಿಲೀನ ಇದರ ಜೊತೆ ಇನ್ನು 10ಬ್ಯಾಂಕ್ ವಿಲೀನ.!

ಕುಂಟಿತಗೊಂಡಿರೋ ದೇಶದ ಆರ್ಥಿಕ‌ ಪರಿಸ್ಥಿತಿಯನ್ನು ಸುದಾರಣೆಗೆ ತರಲು ಕೇಂದ್ರ ಹಣಕಾಸು ಸಚಿವೆ ಕೆಲವೊಂದು‌ ಮಹತ್ವದ ನಿರ್ಧಾರಗಳನ್ನು ಕೈಗೊಂಡಿದ್ದಾರೆ ಈ ಮೂಲಕ‌ ಸರ್ಕಾರ ಸ್ವಾಮ್ಯದ ಹಲವು‌ ಬ್ಯಾಂಕುಗಳನ್ನು ವಿಲೀನ ಗೊಳಿಸುವ ನಿರ್ಧಾರಕ್ಕೆ ನಿರ್ಮಲ ಸೀತಾರಾಮ್ ಬಂದಿದ್ದಾರೆ, ಇದರಿಂದ‌ 27 ಸರ್ಕಾರಿ ಸ್ವಾಮ್ಯದ ಬ್ಯಾಂಕುಗಳ ಸಂಖ್ಯೆ ಇನ್ನು ಮುಂದೆ 12 ಆಗಲಿದೆ. ಇನ್ನು ಕರ್ನಾಟಕದ ಕೆನರಾ ಬ್ಯಾಂಕ್ ಮತ್ತು‌ ಸಿಂಡಿಕೇಟ್ ಬ್ಯಾಂಕ್ ಗಳನ್ನು ವಿಲೀನ ಮಾಡಲಿದ್ದು ಇದು ಇದು‌ ದೇಶದ ಅತೀ ದೊಡ್ಡ ಬ್ಯಾಂಕ್‌ ಆಗಿ ಹೊರಹೊಮ್ಮಲಿದೆ. ಇ‌ನ್ನು ಕರ್ನಾಟಕದ‌ ಮತ್ತೊಂದು ಬ್ಯಾಂಕ್ ಆದ ಕಾರ್ಪೋರೇಷನ್ ಬ್ಯಾಂಕ್‌ ಮತ್ತು ಯೂನಿಯನ್ ಬ್ಯಾಂಕ್ ಹಾಗೂ ಆಂಧ್ರ ಬ್ಯಾಂಕುಗಳನ್ನು ವಿಲೀನಗೊಳಿಸಲು‌ ಸಿದ್ಧತೆ ನಡೆಸಲಾಗುತ್ತಿದೆ, ಇದು ನಾಲ್ಕು ಹಂತದಲ್ಲಿ 10 ಬ್ಯಾಂಕುಗಳ ವಿಲೀನ ಪ್ರಕ್ರಿಯೆ ನಡೆಯಲಿದೆ. ಈ ಹಿಂದೆ ಬ್ಯಾಂಕ್ ಆಫ್ ಬರೋಡಾ ಜೊತೆ ವಿಜಯ‌ಬ್ಯಾಂಕ್ ಮತ್ತು‌ ದೇನಾ ಬ್ಯಾಂಕ್ ಅನ್ನು 2018ರಲ್ಲಿ ವಿಲೀನ ಗೊಳಿಸಲಾಗಿತ್ತು.

ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಳ್ಳಿ

Similar Articles

Comments
Top