ಸುಟ್ಟ ಗಾಯಕ್ಕೆ ಆಲೂಗಡ್ಡೆಯೇ ಮನೆ ಮದ್ದು.!

ನಾವು ಎಲ್ಲಾದರೂ ಸ್ವಲ್ಪ ಯಡವಟ್ಟಾಗಿ ಬೆಂಕಿಯಲ್ಲಿ ಸುಟ್ಟುಕೊಂಡರೆ ತಕ್ಷಣ ನಾವು ಸುಟ್ಟ ಗಾಯಕ್ಕೆ ಚಿಕಿತ್ಸೆ ಪಡೆಯಲು ವೈದ್ಯರ ಬಳಿ ಹೋಗುತ್ತೇವೆ ಆದ್ರೆ ಹಾಗೆ ಮಾಡುವ ಬದಲು ಮನೆಯಲ್ಲಿಯೇ ಕೆಲವೊಂದು ಅಂಶಗಳನ್ನು ಗಮನದಲ್ಲಿ ಇಟ್ಟುಕೊಂಡು ನಾವು ಹೇಳಿದ ಮಾಹಿತಿಯನ್ನು ಉಪಯೋಗಿಸಿಕೊಂಡು ಅನುಸರಿಸಿದ್ರೆ ಯಾವ ತೊಂದರೆಯೂ ಆಗುವುದಿಲ್ಲ.

ಈ ಕೆಳಗಿನ ಮಾಹಿತಿಗಳಿಂದ ನಿಮಗಾದ ಸುಟ್ಟ ಗಾಯವನ್ನು ಮನೆಯಲ್ಲಿಯೇ ಶಮನ ಮಾಡಿಕೊಳ್ಳಬಹುದು.

  • ರಾತ್ರಿ ಮಲಗುವ ಮುನ್ನ ಸುಟ್ಟಿರುವ ಭಾಗಕ್ಕೆ ಹಾಲಿಗೆ ಸ್ವಲ್ಪ ಅರಿಶಿನವನ್ನು ಬೆರೆಸಿ ಸುಟ್ಟ ಗಾಯಕ್ಕೆ ಹಚ್ಚುವುದರಿಂದ ಗಾಯ ಬಹುಬೇಗನೇ ಗುಣವಾಗುತ್ತದೆ.
  • ನೀವು ದೇಹದಲ್ಲಿ ಯಾವುದೇ ಭಾಗವನ್ನು ಸುಟ್ಟುಕೊಂಡ ತಕ್ಷಣ ನೀರಿನಲ್ಲಿ ಸುಟ್ಟ ಭಾಗವನ್ನು ತೊಳೆಯಿರಿ, 10 ನಿಮಿಷಕ್ಕೂ ಹೆಚ್ಚು ಕಾಲ ತೊಳೆದು ನಂತರ ಐಸ್ ಕ್ಯೂಬ್‍ನಿಂದ ಉಜ್ಜಬೇಕು, ಇನ್ನು ಸುಟ್ಟಗಾಯ ಒಣಗುವವರೆಗೂ ಪ್ರತಿದಿನ 10-12 ಲೋಟ ನೀರನ್ನು ತಪ್ಪದೇ ಕುಡಿಯ ಬೇಕು.
  • ಇನ್ನು ತಣ್ಣೀರಿನಲ್ಲಿ ಸುಟ್ಟಗಾಯವನ್ನು ತೊಳೆದ ನಂತರ ಸುಟ್ಟ ಜಾಗಕ್ಕೆ ಸ್ವಲ್ಪ ಜೇನು ತುಪ್ಪವನ್ನು ಹಚ್ಚುವುದರಿಂದ ಗಾಯವಾದ ಜಾಗಕ್ಕೆ ಯಾವ ಸೋಂಕು ಕೂಡ ತಗುಲುವುದಿಲ್ಲ.
  • ಸುಟ್ಟಗಾಯವಾದಾಗ ಆದಷ್ಟು ಒಣದ್ರಾಕ್ಷಿ, ಟೊಮ್ಯಾಟೋ, ಚೆರ್ರಿ ಈ ರೀತಿಯ ಹಣ್ಣುಗಳನ್ನು ತಿನ್ನುವುದರಿಂದ ಸುಟ್ಟಗಾಯ ಆದಷ್ಟು ಬೇಗ ಒಣಗಿ ಹೋಗುತ್ತದೆ.
  • ದೇಹದ ಯಾವುದಾದರೂ ಭಾಗವನ್ನು ಸುಟ್ಟುಕೊಂಡಾಗ ತಕ್ಷಣ ಆಲೂಗಡ್ಡೆಯನ್ನು ಬೇಯಿಸಿ ಚೆನ್ನಾಗಿ ಪೇಸ್ಟ್ ಮಾಡಿ ಸುಟ್ಟ ಭಾಗಕ್ಕೆ ಹಚ್ಚುವುದರಿಂದ ಗಾಯಕ್ಕೆ ಯಾವ ಸೋಂಕು ತಗುಲುವುದಿಲ್ಲ ಜೊತೆಗೆ ಬಹುಬೇಗನೇ ಗಾಯ ಒಣಗುತ್ತದೆ.
  • ನೀರಿನಲ್ಲಿ ಸ್ವಲ್ಪ ಪ್ರಮಾಣದಲ್ಲಿ ವಿನಿಗರ್ ಬಳಸಿ ಸುಟ್ಟಗಾಯಕ್ಕೆ ಹಚ್ಚುವುದರಿಂದ ಗಾಯ ಬೇಗನೆ ವಾಸಿಯಾಗುತ್ತದೆ.
  • ಸುಟ್ಟ ಜಾಗಕ್ಕೆ ದಿನದಲ್ಲಿ ಎರಡು ಬಾರಿಯಾದರೂ ಲೋಳೆರಸವನ್ನು ಹಚ್ಚುವುದರಿಂದ ಗಾಯವೂ ಬೇಗ ಗುಣವಾಗುತ್ತದೆ, ಗಾಯದ ಕಲೆಯು ಉಳಿಯುವುದಿಲ್ಲ.

Read : ಮುಖದಲ್ಲಿ ಮೊಡವೆಯೇ.? ಒಂದೇ ವಾರದಲ್ಲಿ ಸಿಗಲಿದೆ ಪರಿಹಾರ.! ಹೀಗೆ ಮಾಡಿ ಅಷ್ಟೇ..!

ಈ ರೀತಿ ಸುಟ್ಟಗಾಯಕ್ಕೆ ಮನೆಯಲ್ಲಿ ಮದ್ದು ಮಾಡಿಕೊಳ್ಳುವುದರಿಂದ ಬಹುಬೇಗನೇ ಗಾಯ ವಾಸಿಯಾಗುತ್ತದೆ. ಜೊತೆಗೆ ಸಮಯವೂ ಉಳಿಯುತ್ತದೆ.

ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಳ್ಳಿ

Similar Articles

Comments
Top