ಸುಶಾಂತ್ ಸಿಂಗ್ ಪ್ರಕರಣ ಸಿಬಿಐಗೆ ನೀಡಿ ಅಂತ ಅಮಿತ್ ಶಾಗೆ ಮನವಿ ಮಾಡಿದ ನಟಿ

ನಟ ಸುಶಾಂತ್ ಸಿಂಗ್ ಸಾವನ್ನಪ್ಪಿ ತಿಂಗಳ ಕಳೆದರೂ ಸುಶಾಂತ್ ಸಾವಿನ ಸುತ್ತ ಹಲವು ಅನುಮಾನಗಳ ಹುತ್ತ ಹುಟ್ಟುಕೊಂಡಿದೆ. ಮೇಲ್ನೋಟಕ್ಕೆ ಆತ್ಮಹತ್ಯೆಯಂತೆ ಕಂಡುಬಂದರೂ ಆತ್ಮಹತ್ಯೆ ಮಾಡಿಕೊಳ್ಳುವ ಸ್ಥಿತಿಗೆ ಇರಲಿಲ್ಲ, ಇದರಲ್ಲಿ ಕಾಣದ ಕೈಗಳು ಕೆಲಸ ಮಾಡಿವೆ ಎಂದು ಬಾಲಿವುಡ್‍ನಲ್ಲಿ ಸುದ್ದಿಮಾಡುತ್ತಿದೆ.

ಇನ್ನು ಸುಶಾಂತ್ ಸಿಂಗ್ ಸಾವಿಗೆ ನ್ಯಾಯ ಬೇಕು ಅನ್ನೋ ಕೂಗು ಸೋಶಿಯಲ್ ಮೀಡಿಯಾದಲ್ಲಿ ಕೇಳಿ ಬರ್ತಾ ಇದ್ರೆ, ಇನ್ನು ಸುಶಾಂತ್ ಆತ್ಮಹತ್ಯೆ ಮಾಡಿಕೊಂಡಿಲ್ಲ ಇದು ಕೊಲೆ ಅನ್ನೋ ರೀತಿ ಹಲವು ಫೋಟೋಗಳು ಈಗ ಸೋಶೀಯಲ್ ಮೀಡಿಯಾದಲ್ಲಿ ಓಡಾಡ್ತಾ ಇದೆ.

ಹೀಗಿರುವಾಗ ಸುಶಾಂತ್ ಸಿಂಗ್ ಪ್ರೇಯಸಿ ಸಾವಿನ ಒಂದು ತಿಂಗಳ ಬಳಿಕ ಸೋಶಿಯಲ್ ಮೀಡಿಯಾದಲ್ಲಿ ಆಕ್ಟಿವ್ ಆಗಿದ್ದು, ಸುಶಾಂತ್ ಸಿಂಗ್ ರಜಪೂತ್ ಪ್ರಕರಣವನ್ನು ಸಿಬಿಐಗೆ ವರ್ಗಾಯಿಸಬೇಕು ಎಂದು ಟ್ವೀಟ್ ಮಾಡುವ ಮೂಲಕ ಕೇಂದ್ರ ಗೃಹ ಸಚಿವ ಅಮಿತ್ ಷಾಗೆ ಒತ್ತಾಯಿಸಿದ್ದಾರೆ.

ಟ್ವೀಟರ್‍ನಲ್ಲಿ ರಿಯಾ ಅವ್ರು ಮಾನ್ಯ ಅಮಿತ್ ಶಾ ರವರೇ,ನಾನು ಸುಶಾಂತ್ ಸಿಂಗ್ ರಜಪೂತ್ ಗೆಳತಿ ರಿಯಾ ಚಕ್ರವರ್ತಿ, ಸುಶಾಂತ್ ಸಾವನಪ್ಪಿ ಒಂದು ತಿಂಗಳು ಆಗಿದೆ, ನನಗೆ ಸರ್ಕಾರದ ಮೇಲೆ ನಂಬಿಕೆ ಇದೆ. ಸುಶಾಂತ್ ಸಾವಿನ ಪ್ರಕರಣವನ್ನು ದಯವಿಟ್ಟು ಸಿಬಿಐಗೆ ವಹಿಸಿ ಅಂತ ಖೇಳಿಕೊಳ್ಳುತ್ತೇನೆ. ಸುಶಾಂತ್ ಯಾವ ಕಾರಣಕ್ಕೆ ಈ ರೀತಿ ನಿರ್ಧಾರ ತೆಗೆದುಕೊಂಡ ಎಂಬುದು ಗೊತ್ತಾಗಬೇಕಾಗಿದೆ ಎಂದು ಟ್ವೀಟ್ ಮಾಡಿದ್ದಾರೆ.

Sushant’s ‘girlfriend’ Rhea Chakraborty requests Amit Shah

ಇನ್ನು ಜುಲೈ 14ರಂದು ರಿಯಾ ಸುಶಾಂತ್ ಜೊತೆಗಿನ ಫೋಟೋ ಶೇರ್ ಮಾಡಿ ಹೃದಯಕ್ಕೆ ಆದ ಗಾಯ ಇನ್ನೂ ಆರಿಲ್ಲ ಎಂದು ಬರೆದುಕೊಂಡಿದ್ರು, ಇನ್ನು ಜೂನ್ 14ರಂದು ಸುಶಾಂತ್ ಆತ್ಮಹತ್ಯೆ ಮಾಡಿಕೊಂಡ ಸ್ಥಿತಿಯಲ್ಲಿ ಅವರ ಮನೆಯಲ್ಲಿ ಶವ ದೊರಕಿತ್ತು.

ಈಗಾಗಲೇ ಸುಶಾಂತ್ ಸಾವಿನ ಸುತ್ತ ಅನುಮಾನಗಳು ಹುಟ್ಟಿಕೊಂಡಿರುವ ಹಿನ್ನೆಲೆಯಲ್ಲಿ ಅನೇಕರ ಹೆಸರು ಸೋಶಿಯಲ್ ಮೀಡಿಯಾದಲ್ಲಿ ಕೇಳಿಬರ್ತಾ ಇದೆ. ಈಗಾಗಲೇ ಪೊಲೀಸರು ಪ್ರಕರಣದ ತನಿಖೆಯನ್ನು ಚುರುಕಾಗಿ ನಡೆಸ್ತಾ ಇದ್ದು, ಇದರ ವಿಚಾರವಾಗಿ ಅನೇಕರನ್ನು ವಿಚಾರಣೆಗೂ ಒಳಪಡಿಸಿದ್ರು,

ಸುಶಾಂತ್ ಸಾವಿಗೆ ಬಾಲಿವುಡ್‍ನ ಘಾಟಾನುಘಟಿ ಸ್ಟಾರ್‍ಗಳು ಕಾರಣ,ಬಾಲಿವುಡ್‍ನಲ್ಲಿ ನೆಪೊಟಿಸಂ ಹೆಚ್ಚಾಗಿ ಇರೋದ್ರಿಂದಾಗಿ ಸುಶಾಂತ್ ಸಾವಾಗಿದೆ ಅನ್ನೋ ಮಾತುಗಳು ಸೋಶಿಯಲ್ ಮೀಡಿಯಾದಲ್ಲಿ ಜೋರಾಗಿ ಹರಿದಾಡ್ತಾ ಇದೆ.

ಒಟ್ಟಿನಲ್ಲಿ ಈಗ ಸುಶಾಂತ್ ಪ್ರೇಯಸಿ ಈ ಪ್ರಕರಣವನ್ನು ಸಿಬಿಐಗೆ ವಹಿಸಿ ಅಂತ ಹೇಳಿರೋದು ಮತ್ತಷ್ಟು ಸುಶಾಂತ್ ಸಾವಿನ ವಿಚಾರವಾಗಿ ಸುದ್ದಿಯಾಗಲು ಅನುವುಮಾಡಿಕೊಟ್ಟಿದೆ.

ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಳ್ಳಿ

Similar Articles

Comments
Top