ಸುಮಲತಾ ಈಗ ಕೈ ಜೆಡಿಎಸ್‍ಗೆ ಹೊರಲಾರದ ಭಾರ.!

sumalatha mandya

ಕರ್ನಾಟಕದ ಸಮ್ಮಿಶ್ರ ಸರ್ಕಾರಕ್ಕೆ ಈಗ ಮಂಡ್ಯ ಲೋಕಸಭಾ ಕ್ಷೇತ್ರದ ಚಿಂತೆಯಾಗಿದೆ. ಒಂದು ಕಡೆ ಕಾಂಗ್ರೆಸ್ ಮಂಡ್ಯ ಲೋಕಸಭಾ ಕ್ಷೇತ್ರವನ್ನು ಜೆಡಿಎಸ್‍ಗೆ ಬಿಟ್ಟುಕೊಟ್ಟು ಸಮಸ್ಯೆ ಬಗೆಹರಿಯಿತು ಎನ್ನುಕೊಳ್ಳುವಾಗಲೇ, ಮಂಡ್ಯ ಕ್ಷೇತ್ರಕ್ಕೆ ಸುಮಲತಾ ಅಂಬರೀಶ್ ಎಂಟ್ರಿಕೊಡೋ ಮೂಲಕ ಕೈ ಮತ್ತು ತೆನೆಗೆ ದೊಡ್ಡ ತಲೆನೋವು ಉಂಟಾಗಿದೆ. ಮಂಡ್ಯ ಕ್ಷೇತ್ರ ಜೆಡಿಎಸ್‍ಗೆ ಬಿಟ್ಟು ಕೊಟ್ಟ ಮೇಲೆ ಜೆಡಿಎಸ್ ಮುಖ್ಯಮಂತ್ರಿ ಮಗ ನಿಖಿಲ್ ಕುಮಾರಸ್ವಾಮಿ ಅವರನ್ನು ಲೋಕಸಭಾ ಕಣಕ್ಕೆ ಇಳಿಸಲು ತಯಾರಿ ನಡೆಸಿಕೊಳ್ಳುತ್ತಿದೆ. ಇತ್ತ ಕಾಂಗ್ರೆಸ್‍ನಿಂದ ಟಿಕೆಟ್ ಕೇಳಿದ್ದ ಸುಮಲತಾಗೆ ಕಾಂಗ್ರೆಸ್ ಟಿಕೆಟ್ ನಿರಾಕರಿಸಿದ್ದು ಈಗ ಸುಮಲತಾ ಮಂಡ್ಯ ಲೋಕಸಭಾ ಕ್ಷೇತ್ರದಿಂದ ಪಕ್ಷೇತರ ಅಭ್ಯರ್ಥಿಯಾಗಿ ನಿಲ್ಲಲು ಚಿಂತನೆ ನಡೆಸಿದ್ದಾರೆ, ಇನ್ನು ಸುಮಲತಾ ಅವರಿಗೆ ಬೆಂಗಳೂರು ಉತ್ತರ ಅಥವಾ ದಕ್ಷಿಣದ ಆಫರ್ ನೀಡಲಾಗಿತ್ತು, ಆದ್ರೆ ಈ ಆಫರ್ ಅನ್ನು ಸುಮಲತಾ ತಿರಸ್ಕರಿಸಿದ್ದಾರೆ. ಇನ್ನು ಸುಮಲತಾ ಅವರನ್ನು ಸಮಾಧಾನ ಮಾಡಲು ಟ್ರಬಲ್ ಶೂಟರ್ ಡಿ.ಕೆ.ಶಿವಕುಮಾರ್ ಮುಂದಾಗಿದ್ರು ಸುಮಲತಾ ಅವರನ್ನು ಸಮಾಧಾನ ಪಡಿಸುವಲ್ಲಿ ವಿಫಲವಾಗಿದ್ದಾರೆ. ಇನ್ನು ಸುಮಲತಾ ಅವರು ಮಂಡ್ಯ ಲೋಕಸಭೆಗೆ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧೆಮಾಡಲಿ ಅಂತ ಅಭಿಮಾನಿಗಳು ಒತ್ತಾಯ ಮಾಡುತ್ತಿದ್ದಾರೆ. ಈ ಎಲ್ಲಾ ಬೆಳವಣಿಗೆಗಳು ಈಗ ಕಾಂಗ್ರೆಸ್‍ಗೆ ನುಂಗಲಾರದ ತುತ್ತಾಗಿ ಪರಿಣಮಿಸಿದೆ, ಇದೇ ವಿಚಾರಕ್ಕೆ ಸಂಬಂಧಿಸಿದಂತೆ ಮಾರ್ಚ್ 4ರಂದು ಸಮನ್ವಯ ಸಮಿತಿಯಲ್ಲಿ ನಿರ್ಧರಕೈಗೊಳ್ಳಲಿದ್ದಾರಂತೆ ಕೈನಾಯಕರು..
`ಬಿಜೆಪಿ ಆಫರ್ ತಿರಸ್ಕರಿಸಿದ ಸುಮಲತಾ..!’
ಇನ್ನು ಮಂಡ್ಯ ಲೋಕಸಭೆಗೆ ಬಿಜೆಪಿ ಕೂಡ ಸುಮಲತಾಗೆ ಆಫರ್ ನೀಡಿತ್ತು ಈ ವೇಳೆ ಬಿಜೆಪಿ ಆಫರ್ ಅನ್ನು ತಿರಸ್ಕರಿಸಿರೋ ಸುಮಲತಾ ಬಾಹ್ಯ ಬೆಂಬಲ ನೀಡುವಂತೆ ಮನವಿಯನ್ನು ಮಾಡಿಕೊಂಡಿದ್ದಾರಂತೆ, ಇದಕ್ಕೆ ಒಪ್ಪಿಗೆ ಸೂಚಿಸಿರೋ ಬಿಜೆಪಿಯ ನಾಯಕರು ಮಂಡ್ಯದಲ್ಲಿ ಬಿಜೆಪಿ ಅಭ್ಯರ್ಥಿಯನ್ನು ಲೋಕಸಭಾ ಚುನಾವಣೆಯಲ್ಲಿ ಕಣಕ್ಕೆ ಇಳಿಸದಿರಲು ನಿರ್ಧರಿಸಿದೆಯಂತೆ, ಜೊತೆಗೆ ಸುಮಲತಾ ಅವರನ್ನು ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಿ ಅವರನ್ನು ಗೆಲ್ಲಿಸುವ ಜವಬ್ದಾರಿಯನ್ನು ಮಾಜಿ ಮಖ್ಯಮಂತ್ರಿ ಎಸ್.ಎಂ ಕೃಷ್ಣ ಅವರ ಹೆಗಲಿಗೆ ನೀಡಲಾಗಿದೆ ಅನ್ನೋ ಮಾತುಗಳು ಕೇಳಿಬರುತ್ತಿದೆ.

ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಳ್ಳಿ

Similar Articles

Comments
Top