ಸುಧಾರಾಣಿ ಚಿತ್ರರಂಗಕ್ಕೆ ಬರಲು ಆ ಒಂದು ಕಾರ್ಯಕ್ರಮ ಕಾರಣವಾಯ್ತು..!

ಸ್ಯಾಂಡಲ್‍ವುಡ್‍ನಲ್ಲಿ 90 ದಶಕದಲ್ಲಿ ಅತ್ಯಂತ ಸುಂದರವಾದ ನಟಿ ಅಂದರೆ ಅದು ಸುಧಾರಾಣಿ. ಚಿಕ್ಕಂದಿನಿಂದಲೇ ಅತ್ಯಂತ ಸುಂದರವಾಗಿದ್ದ ಇವರು ತಮ್ಮ ಮೂರನೇ ವಯಸ್ಸಿನಲ್ಲಿ ರೂಪದರ್ಶಿಯಾಗಿದ್ದರು, ತದನಂತರದಲ್ಲಿ ಸಿನಿಮಾದಲ್ಲೂ ಪಯಣ ಬೆಳೆಸಿ ತಮ್ಮದೇ ಆದ ಛಾಪನ್ನು ಮೂಡಿಸಿದ್ರು, ಸಿನಿ ಜೀವನದಲ್ಲಿ ಉತ್ತಂಗದ ಶಿಖರವನ್ನು ಕಂಡಿರೋ ಸುಧಾರಾಣಿ, 90ರ ದಶಕದಲ್ಲಿ ಒಬ್ಬ ಟಾಪ್ ಹೀರೋಯಿನ್ ಆಗಿ ಮೆರೆದವರು, ಇನ್ನು ಸ್ಯಾಂಡಲ್‍ವುಡ್‍ಗೆ ಹಿರೋಯಿನ್‍ಗಳನ್ನ ಪರಿಚಯ ಮಾಡಿಸುದರಲ್ಲಿ ಅಣ್ಣಾವ್ರ ಕುಟುಂಬ ಪ್ರಮುಖ ಪಾತ್ರವಹಿಸುತ್ತದೆ. ಅದೇ ರೀತಿ ಸುಧಾರಾಣಿಯವರನ್ನು ಸ್ಯಾಂಡಲ್‍ವುಡ್‍ಗೆ ಪರಿಚಯ ಮಾಡಿಸಿದ ಕೀರ್ತಿ ಕೂಡ ಅಣ್ಣಾವ್ರ ಕುಟುಂಬಕ್ಕೆ ಸಲ್ಲುತ್ತದೆ.

Love Story : ನವಿಲೂರಿನ ಗದ್ದೆಯ ಅಂಚಿನಲ್ಲಿ ಪ್ರತಿದಿನವೂ ಬೆಳದಿಂಗಳ ಹಾಲ್ಗೆನೆಯ ಸುಂದರಿ ರಮ್ಯಾ

ಹೌದು 1973ರಲ್ಲಿ ಜನಿಸಿದ ಸುಧಾರಾಣಿಯವರಿಗೆ ಚಿಕ್ಕಂದಿನಿಂದಲೂ ನಟೆನೆಯಲ್ಲಿ ಆಸಕ್ತಿ ಇತ್ತು, ಹೀಗಿರುವಾಗ 1986ರಲ್ಲಿ ಆನಂದ್ ಸಿನಿಮಾ ಮೂಲಕ ಸ್ಯಾಂಡಲ್‍ವುಡ್‍ಗೆ ಎಂಟ್ರಿ ಕೊಡ್ತಾರೆ ಸುಧಾರಾಣಿಯವ್ರು, ಇನ್ನು ಶಿವಣ್ಣ ಮತ್ತು ಸುಧಾರಾಣಿ ಕಾಂಭಿನೇಷನ್‍ನಲ್ಲಿ ಸೂಪರ್ ಹಿಟ್ ಸಿನಿಮಾಗಳು ಸಾಲುಸಾಲಾಗಿ ಬರುವುದಲ್ಲದೆ ನಿರ್ಮಾಪಕರ ಜೇಬನ್ನು ಸಹ ತುಂಬಿಸುತ್ತದೆ. ಅತೀ ಚಿಕ್ಕ ವಯಸ್ಸಿನಲ್ಲೇ ಸ್ಯಾಂಡಲ್‍ವುಡ್‍ಗೆ ನಾಯಕಿಯಾಗಿ ಗುರುತಿಸಿಕೊಂಡ ಸುಧಾರಾಣಿಯವರ ನಿಜವಾದ ಹೆಸರು ಜಯಶ್ರೀ,ಜಯಶ್ರೀ ಚಿಕ್ಕ ವಯಸ್ಸಿನಲ್ಲಿ ಪೇಪರ್ ಆಡ್‍ಗಳಿ ರೂಪದರ್ಶಿಯಾಗಿ ಕಾಣಿಸಿಕೊಳ್ಳುವ ಮೂಲಕ ಮಾಡೆಲಿಂಗ್ ಲೋಕಕ್ಕೆ ಕಾಲಿಡೋ ಇವರು ಭರತನಾಟ್ಯದಲ್ಲಿ ಪ್ರಾವಿಣ್ಯತೆಯನ್ನು ಹೊಂದಿದ್ದರು.

ಇಷ್ಟೆಲ್ಲಾ ಪ್ರತಿಭೆಯನ್ನು ಹೊಂದಿದ್ದ ಸುಧಾರಾಣಿಯವರು ಸ್ಯಾಂಡಲ್‍ವುಡ್‍ಗೆ ಎಂಟ್ರಿಕೊಟ್ಟ ಸನ್ನಿವೇಶವೇ ಒಂದು ಸ್ವಾರಸ್ಯಕರ, ಹೌದು ಸುಧಾರಾಣಿ ಆನಂದ್ ಸಿನಿಮಾಗೆ ಆಯ್ಕೆಯಾಗಲು ಆ ಒಂದು ಕಾರ್ಯಕ್ರಮವೇ ಕಾರಣವಂತೆ, ಒಮ್ಮೆ ಪಾರ್ವತಮ್ಮ ರಾಜ್‍ಕುಮಾರ್ ಅವರು ಉಪನಯನ ಕಾರ್ಯಕ್ರಮದ ಒಂದು ವಿಡಿಯೋವನ್ನು ನೋಡುತ್ತಿರುವ ವೇಳೆ , ಆ ವಿಡಿಯೋದಲ್ಲಿ ಜಯಶ್ರೀಯನ್ನು ನೋಡಿದ ಪಾರ್ವತಮ್ಮ ರಾಜ್‍ಕುಮಾರ್ ಆ ಹುಡುಗಿಯ ಬಗ್ಗೆ ವಿಚಾರಿಸಿದಾಗ, ಆಕೆ ಚಿ.ಉದಯ್ ಶಂಕರ್ ಅವರ ಸಂಬಂಧಿ ಎಂದು ತಿಳಿಯುತ್ತದೆ. ಅಷ್ಟೇ ಅಲ್ಲದೇ ಆಕೆಗೆ ಸಿನಿಮಾದಲ್ಲಿ ನಟಿಸೋ ಆಸಕ್ತಿ ಇರೋ ವಿಚಾರವೂ ಪಾರ್ವತಮ್ಮನವರಿಗೆ ತಿಳಿಯುತ್ತದೆ.

ಇದನ್ನು ಗಮನಿಸಿದ ಪಾರ್ವತಮ್ಮನವರು ಶಿವರಾಜ್‍ಕುಮಾರ್ ಅವರ ಮೊದಲ ಸಿನಿಮಾ ಆನಂದ್‍ಗೆ ನಾಯಕಿಯಾಗಿ ಆಯ್ಕೆ ಮಾಡುತ್ತಾರೆ. ಇನ್ನು ಆ ವೇಳೆಗೆ ಸುಧಾರಾಣಿಯವರಿಗೆ ಕೇವಲ 12 ವರ್ಷ ವಯಸ್ಸಾಗಿದ್ದು, ಆನಂದ್ ಸಿನಿಮಾದ ನಂತರ ಕರ್ನಾಟಕದ ಮನೆ ಮಗಳಾಗುತ್ತಾರೆ.ಅನಂತರದಲ್ಲಿ ಶಿವಣ್ಣನ ಜೊತೆ ಸಾಲು ಸಾಲು ಬ್ಲಾಕ್ ಬಸ್ಟರ್ ಸಿನಿಮಾಗಳು ನೀಡೋ ಜೊತೆಗೆ ಸ್ಯಾಂಡಲ್‍ವುಡ್‍ನ ಸೂಪರ್ ಜೋಡಿ ಅಂತಾನು ಗುರುತಿಸಿಕೊಳ್ತಾರೆ. 90ರ ದಶಕದಲ್ಲಿ ಉತ್ತುಂಗದಲ್ಲಿ ಇರುವಾಗಲೇ ತಮಿಳು ತೆಲುಗು,ಮಲೆಯಾಳಂ ಚಿತ್ರಗಳಲ್ಲೂ ನಟಿಸಿ ಎಲ್ಲರ ಮನಗೆದ್ದಿದ್ದ ಸುಧಾರಾಣಿ ಸದ್ಯ ತಮ್ಮ ಮಗಳನ್ನು ಸ್ಯಾಂಡಲ್‍ವುಡ್‍ಗೆ ಕರೆತರೋ ಪ್ಲಾನ್‍ನಲ್ಲೂ ಕೂಡ ಇದ್ದಾರೆ.

ಲವ್ ಸ್ಟೇಟಸ್ | ಪ್ರೀತಿಯ ಕವನಗಳಿಗೆ ಇಲ್ಲಿ ಕ್ಲಿಕ್ ಮಾಡಿ

Kannada Kavanagalu | Preetiya Kavana – #06

Kannada Kavanagalu | Preetiya Kavana – #02

Kannada Kavanagalu | Preetiya Kavana – #01

Kannada Nudimuttugalu – Ver.03

ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಳ್ಳಿ

Similar Articles

Comments
Top