ದಿ ವಿಲನ್ ಬಗ್ಗೆ ಸ್ಫೋಟಕ ಮಾಹಿತಿ ಬಿಚ್ಚಿಟ್ಟ ಪೈಲ್ವಾನ್ ಸುದೀಪ್..!

ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಅವರ ಪೈಲ್ವಾನ್ ಸಿನಿಮಾ ತೆರೆಗೆ ಬರಲು ರೆಡಿಯಾಗಿದೆ. ಕನ್ನಡದ ಜೊತೆಗೆ ಹಿಂದಿ, ತೆಲುಗು, ತಮಿಳು, ಮಲೆಯಾಳಂ ಭಾಷೆಗಳಲ್ಲಿ ಸಿನಿಮಾ ರಿಲೀಸ್ ಆಗಲಿದೆ.
Read : ಪೈಲ್ವಾನ್​ ನಂತಾ ಸಿನಿಮಾ ಮಾಡಲ್ಲ ಎಂದಿದ್ದೇಕೆ ಸುದೀಪ್..?!

ಪೈಲ್ವಾನ್ ಪ್ರೆಸ್​ಮೀಟ್​ ನಲ್ಲಿ ಮಲ್ಟಿ ಸ್ಟಾರ್ ಸಿನಿಮಾಗಳ ಬಗ್ಗೆ ಮಾತನಾಡಿದ ಸುದೀಪ್ ದಿ ವಿಲನ್​ ಬಗ್ಗ ಸ್ಫೋಟಕ ಮಾಹಿತಿಯನ್ನು ಬಿಚ್ಚಿಟ್ಟಿದ್ದಾರೆ. ವಿಲನ್ ಸಿನಿಮಾ ಶಿವಣ್ಣನ ಫ್ಯಾನ್ಸ್​ಗೆ ಇಷ್ಟವಾಗಿರ್ಲಿಲ್ಲ. ಸಿನಿಮಾ ಅಂದ್ರೆ ಸುಮ್ಮನಲ್ಲ. ಇಬ್ರು ಸ್ಟಾರ್​ ನಟರನ್ನು ಹಾಕ್ಕೊಂಡು ಸಿನಿಮಾ ಮಾಡುವಾಗ ತುಂಬಾ ಹುಷಾರಾಗಿರ್ಬೇಕು. ಇಲ್ಲಂದ್ರೆ ಬೇಜಾರಾಗುತ್ತೆ. ದಿ ವಿಲನ್ ರಿಲೀಸ್ ಆದ್ಮೇಲೆ ಹೀಗಾಗುತ್ತೆ ಅಂತ ನಂಗಾಗಲಿ, ಶಿವಣ್ಣಗಾಗಲಿ ಅಥವಾ ಡೈರೆಕ್ಟರ್ ಪ್ರೇಮ್​ಗಾಗಲಿ ಗೊತ್ತಿರ್ಲಿಲ್ಲ ಅಂತ ಹೇಳಿದ್ದಾರೆ.


ಇದರೊಂದಿಗೆ ದಿ ವಿಲನ್ ಸಿನಿಮಾ ಶಿವಣ್ಣನ ಅಭಿಮಾನಿಗಳಿಗೆ ಇಷ್ಟ ಆಗಿರಲಿಲ್ಲ ಅನ್ನೋದನ್ನು ಸುದೀಪ್ ಅವರೇ ಒಪ್ಪಿಕೊಂಡಿದ್ದಾರೆ. ವಿಲನ್ ಬಗ್ಗೆ ನಿರೀಕ್ಷೆ ತುಂಬಾ ಇತ್ತು. ಆದರೆ ಅಂದುಕೊಂಡಂತೆ ಬಂದಿಲ್ಲ ಅಂತ ಸುದೀಪ್ ಮತ್ತು ಶಿವಣ್ಣ ಅಭಿಮಾನಿಗಳು ಸುದೀಪ್ ಹಾಗೂ ಶಿವಣ್ಣ ಮೇಲೆ ಕಿಡಿ ಕಾರಿದ್ದನ್ನು ಈ ವೇಳೆ ನೆನಪಿಸಿಕೊಳ್ಳಬಹುದು.

ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಳ್ಳಿ

Similar Articles

Comments
Top