ಫಿಕ್ಸ್ ಆಯ್ತು ಸುದೀಪ್ ಅನೂಪ್ ಭಂಡಾರಿ ಜೋಡಿಯ ಸಿನಿಮಾ ಟೈಟಲ್.!

ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಮತ್ತು ನಿರ್ದೇಶಕ ಅನೂಪ್ ಭಂಡಾರಿ ಕಾಂಬಿನೇಷನ್‍ನ ಬಿಗ್ ಬಜೆಟ್ ಸಿನಿಮಾಗೆ ಫ್ಯಾಂಟಂ’ ಎಂದು ಟೈಟಲ್ ಫಿಕ್ಸ್ ಮಾಡಲಾಗಿದೆ ಅನ್ನೋ ಸುದ್ದಿ ಈಗ ಗಾಂಧಿನಗರದ ಗಲ್ಲಿ ಗಲ್ಲಿಯಲ್ಲಿ ಕೇಳಿ ಬರ್ತಾ ಇದೆ, ಆದ್ರೆ ಅನೂಪ್ ಭಂಡಾರಿಯವರು ಮಾತ್ರ ಇನ್ನು ಚಿತ್ರದ ಟೈಟಲ್ ಫೈನಲ್ ಆಗಿಲ್ಲ, ಎರಡು ಮೂರು ಟೈಟಲ್ ಇದೆ ಅದರಲ್ಲಿ ಒಂದನ್ನು ಸದ್ಯದರಲ್ಲೇ ಫೈನಲ್ ಮಾಡುತ್ತೇವೆ ಆ ನಂತರ ಅನೌನ್ಸ್ ಮಾಡುತ್ತೇವೆ ಅಂತ ಹೇಳಿದ್ದಾರೆ, ಆದ್ರೆ ಇನ್ನು ಟೈಟಲ್ ಫೈನಲ್ ಆಗೋ ಮೊದಲೇ ಚಿತ್ರದ ಟೈಟಲ್ ಟ್ರೆಂಡ್ ಆಗ್ತಾ ಇರೋದು ಇದೇ ಮೊದಲು, ಸದ್ಯ ಕೋಟಿಗೊಬ್ಬ 3 ಮತ್ತುದಬಾಂಗ್ 3′ ಚಿತ್ರದ ಶೂಟಿಂಗ್‍ನಲ್ಲಿ ಬ್ಯುಸಿ ಇರೋ ಕಿಚ್ಚ ಸುದೀಪ್ ಆ ಎರಡು ಚಿತ್ರದ ಶೂಟಿಂಗ್ ಕಂಪ್ಲೀಟ್ ಆದ ನಂತರ ಮತ್ತು ಬಿಗ್‍ಬಾಸ್ ಸೀಸನ್ 7 ಶುರುವಾಗುತ್ತಿದ್ದು ಇದರ ಪ್ರಾಜೆಕ್ಟ್ ಕಂಪ್ಲೀಟ್ ಆದ ನಂತರವಷ್ಟೇ ಅನೂಪ್ ಭಂಡಾರಿ ನಿರ್ದೇಶನದ ಸಿನಿಮಾ ಕೈಗೆತ್ತಿಕೊಳ್ಳಲಿದ್ದಾರೆ. ಒಂದು ಮಾಹಿತಿಯ ಪ್ರಕಾರ ಡಿಸೆಂಬರ್ ತಿಂಗಳಿನಲ್ಲಿ ಅನೂಪ್ ಭಂಡಾರಿ ಮತ್ತು ಕಿಚ್ಚ ಸುದೀಪ್ ಕಾಂಬಿನೇಶನ್ ಸಿನಿಮಾ ಸೆಟ್ಟೇರಲಿದೆಯಂತೆ.. ಒಟ್ಟಿನಲ್ಲಿ ಕಿಚ್ಚ ಸುದೀಪ್ ಪೈಲ್ವಾನ್ ಚಿತ್ರ ಯಶಸ್ಸಿನ ನಂತರ ಕಿಚ್ಚ ಅವರ ಮುಂದಿನ ಸಿನಿಮಾಗಳ ಮೇಲು ಅಭಿಮಾನಿಗಳಲ್ಲಿ ಬೆಟ್ಟದಷ್ಟು ನಿರೀಕ್ಷೆ ಇರುವುದಂತು ನಿಜ.

ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಳ್ಳಿ

Similar Articles

Comments
Top