ಮನಸಿದ್ದರೆ ಮಾರ್ಗ ಅನ್ನೋದಕ್ಕೆ ಈ ಹಾಸನದ ಶಿಲ್ಪ‌ ಸಾಕ್ಷಿ..!

mangaluru successful women

ಮನಸಿದ್ದರೆ ಏನೂ ಬೇಕಾದರೂ‌ ಸಾಧಿಸಬಹುದು, ಹೆಣ್ಣು ಅಬಲೆಯಲ್ಲ‌ ಸಬಲೆ ಅನ್ನೋದಕ್ಕೆ ಈ ಸ್ಟೋರಿಯೇ ಸಾಕ್ಷಿ. ಇನ್ನು ಸಾಧನೆ ಮಾಡೋಕೆ ಯಾವ ವಯಸ್ಸಿನ ಮಿತಿಯೂ ಇಲ್ಲ, ಭಾಷೆಯ ಗಡಿಯೂ ಇಲ್ಲ. ಹೌದು ಈ ಒಂದು ವಿಷಯಕ್ಕೆ ಉದಾಹರಣೆಯಾಗಿ ನಿಲ್ಲೋದು ಹಾಸನ ಮೂಲದ ಈ ಶಿಲ್ಪ. 2005ರಲ್ಲಿ ಮದುವೆಯಾಗಿ ಮಂಗಳೂರಿಗೆ ಶಿಲ್ಪ‌ ದಂಪತಿಗಳು ಬಂದು ನೆಲೆಸಿದ್ರು. ಈ ವೇಳೆ ಹಣ ತರುವುದಾಗಿ ಬೆಂಗಳೂರಿಗೆ ಬಂದ ಶಿಲ್ಪ ಪತಿ ಬೆಂಗಳೂರಿನಿಂದ ವಾಪಾಸ್ ಬರಲೇ ಇಲ್ಲ. ಈ ವೇಳೆ ಪಿಯುಸಿ ಓದಿದ್ದ ಶಿಲ್ಪ 3 ವರ್ಷದ ಮಗುವಿನ ಜೊತೆ ಜೀವನ ನಡೆಸೋದು ಕಷ್ಟಕರವಾಗಿತ್ತು.ಈ ವೇಳೆ ಧೈರ್ಯ ಗುಂದದ ಶಿಲ್ಪ ಕ್ಯಾಂಟಿನ್ ತೆರೆಯೋ ಧೈರ್ಯ ಮಾಡಿದ್ರು. ಮಂಗಳೂರಿನ ಜನರಿಗೆ ತಮ್ಮ ಕೈ ರುಚಿಯನ್ನು ತೋರಿಸೋ ಮೂಲಕ ಮಂಗಳೂರಿನ ಜನಕ್ಕೆ ಅಕ್ಕಿ, ಜೋಳ,ರಾಗಿ ರೊಟ್ಟಿಯ ರುಚಿ ತೋರಿಸಿ ಮಂಗಳೂರಿನಲ್ಲಿ ಪ್ರಖ್ಯಾತಿ ಪಡೆದಿದ್ದಾರೆ.ಇನ್ನು ರಾಗಿ ಜೋಳ ರೊಟ್ಟಿ ಜೊತೆಯಲ್ಲಿ, ಬಿಸಿಬೇಳೆ ಬಾತ್, ರೈಸ್ ಬಾತ್ ಕೂಡ ಶಿಲ್ಪ ಅವರ ಮೊಬೈಲ್ ಕ್ಯಾಂಟಿನ್ ಫೇಮಸ್ ಆಗೋಕೆ ಸಹಾಯವಾದವೂ,
ಇನ್ನು ಇವರ ಈ ಸಾಧನೆಯನ್ನು ಗುರುತಿಸಿದ ಮಹೀಂದ್ರಾ ಕಂಪನಿಯ ಮಾಲೀಕರು ಶಿಲ್ಪ ಅವರು ಇನ್ನೊಂದು ಮೊಬೈಲ್ ಕ್ಯಾಂಟಿನ್‌ ತೆರೆಯುವುದಾದರೆ ಅವರಿಗೆ ಬೊಲೆರೋ ವಾಹನ ಕೊಡುವ ಮೂಲಕ ಅವರ ಉದ್ಯಮದಲ್ಲಿ ಹೂಡಿಕೆ ಮಾಡೋ ಇಚ್ಛೆ ಹೊಂದಿದ್ದೇನೆ ಅಂತ ಟ್ವೀಟ್ ಮಾಡಿದ್ದಾರೆ. ಇನ್ನು ಹೇಳಿದಂತೆ ಬೊಲೆರೋ ವಾಹನವನ್ನು ಕೂಡ ಕೊಟ್ಟಿದ್ದಾರೆ. ಒಟ್ಟಿ‌ನಲ್ಲಿ‌ ಸಾಧನೆ ಮಾಡೋ ಮನಸಿದ್ದರೆ ವಯಸ್ಸು ಮತ್ತು ಭಾಷೆ ಊರು ಯಾವುದು ಲೆಕ್ಕಕ್ಕೆ ಬರೋದಿಲ್ಲ. ನಮ್ ಕಡೆಯಿಂದನೂ ಶಿಲ್ಪ ಅವರಿಗೆ ಶುಭಹಾರೈಕೆಗಳು. ಈ ಸ್ಟೋರಿಯನ್ನು ಎಲ್ಲರಿಗೂ ಶೇರ್ ಮಾಡಿ ಯಾರಿಗಾದರೂ ಇದು ಸ್ಪೂರ್ತಿಯಾಗಿ ಅವರ ಜೀವನವೂ ಬದಲಾಗಬಹುದು. ನಿಮ್ಮ ವಾಟ್ಸ್ ಆಪ್ ನಲ್ಲಿ ಇಂಟರೆಸ್ಟಿಂಗ್ ಸ್ಟೋರಿಗಳನ್ನು ಪಡೆಯಲು ಈ ನಂಬರ್ ಗೆ ವಾಟ್ಸ್ ಆಪ್ ಮಾಡಿ +918296301915

ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಳ್ಳಿ

Similar Articles

Comments
Top