ಕೆಲಸದಿಂದ ಕಿಕ್ ಔಟ್ ಆದ್ಮೇಲೆ ಅವನು ಕೋಟ್ಯಾಧಿಪತಿಯಾದ….!

ಒಂದು ಹೊತ್ತಿನ ಊಟಕ್ಕೂ ಗತಿ ಇರಲಿಲ್ಲ. ಆದರೆ, ಒಂದೊಳ್ಳೆ ದಿನ ಬಂದೇ ಬರುತ್ತೆ ಅಂತ ಕಾದಿದ್ರು. ಕಷ್ಟಪಟ್ಟು ಮಗನನ್ನು ಓದಿಸಿದ್ರೆ, ಅವನು ದೊಡ್ಡ ಅಧಿಕಾರಿ ಆಗ್ತಾನೆ.‌ ಕೈ ತುಂಬಾ ಸಂಬಳ ಸಿಗುತ್ತೆ…ನಮ್ಮ ಕಷ್ಟಗಳೆಲ್ಲವೂ ದೂರವಾಗುತ್ತೆ ಅಂತ ಬಡ ಅಪ್ಪ-ಅಮ್ಮ ಒಬ್ಬನೇ ಒಬ್ಬ ಮಗನನ್ನು ಕೂಲಿನಾಲಿ ಮಾಡಿ, ಹೊಟ್ಟೆ-ಬಟ್ಟೆ ಕಟ್ಟಿ ಓದಿಸಿದ್ರು. ಅವರ ಮಗನೂ ಅಷ್ಟೇ ಅಪ್ಪ-ಅಮ್ಮನ ಕನಸು ನನಸು ಮಾಡಲು, ಅವರನ್ನು ಚೆನ್ನಾಗಿ ನೋಡಿಕೊಳ್ಳಬೇಕೆಂದು ಕಷ್ಟಪಟ್ಟು ಓದಿದ. ಅವರಿವರತ್ರ ಸಾಲ ಮಾಡಿ, ಬ್ಯಾಂಕ್ ನಲ್ಲಿ ಎಜುಕೇಶನ್ ಲೋನ್ ತಗೊಂಡು ಅಂತೂ ಇಂತು ಅವನು ಎಂಬಿಎ ಪಾಸ್ ಮಾಡ್ದ.
ಎಂಬಿಎ ಮುಗಿಯುತ್ತಿದ್ದಂತೆ ಕೆಲಸವೇನೋ ಸಿಕ್ತು….ಕೆಲವು ವರ್ಷಗಳ ನಂತರ ಕೆಲಸ ಕಳೆದುಕೊಂಡ. ಕೆಲಸ ಕಳೆದುಕೊಂಡ ಮೇಲೆ ಕೋಟ್ಯಾಧಿಪತಿಯಾದ…!
ಏನಪ್ಪ? ಇದು ಕೆಲಸ ಕಳ್ಕೊಂಡ ಮೇಲೆ ಕೋಟ್ಯಾಧಿಪತಿ ಆಗಿದ್ದು ಹೇಗೆ…? ಎಂಬ ಪ್ರಶ್ನೆ ನಿಮ್ಮಂತೆ ನಮ್ಮನ್ನು ಕಾಡ್ತು. ಆದರೆ, ನನಗೆ ಈ ಕಥೆ ಹೇಳಿದ ಗೆಳೆಯರೊಬ್ಬರು ಎಳೆ ಎಳೆಯಾಗಿ ಈ ಸಾಧಕನ ಕಥೆಯನ್ನು ಬಿಚ್ಚಿಟ್ಟರು.

ಆತನ ಹೆಸರು ಸಚ್ಚಿದಾನಂದ್. ಆಂಧ್ರಪ್ರದೇಶದ ಯಾವುದೋ ಒಂದು ಕುಗ್ರಾಮದವರಂತೆ. ತುಂಬಾ ಬಡತನದಲ್ಲಿ ಬೆಳೆದಿದ್ದು. ಇವರ ತಂದೆ-ತಾಯಿಗೆ ಇವರೊಬ್ಬರೇ ಮಗ. ಬಡತನದ ನಡುವೆಯೂ ಮೊದಲೇ ಹೇಳಿದಂತೆ ಕಷ್ಟಪಟ್ಟು ಓದಿಸಿದ್ರು. ಅಂದುಕೊಂಡಂತೆ ಒಳ್ಳೆಯ ಕೆಲಸವೂ ಸಿಗ್ತು.
ಸೇರಿದ 3-4 ವರ್ಷದಲ್ಲಿ ಪ್ರತಿಷ್ಠಿತ ಕಂಪನಿಯಲ್ಲಿ ಸುಮಾರು 1 ಲಕ್ಷ ರೂ ಸಂಬಳ ಸಿಗಲಾರಂಭಿಸಿತು.‌ ಒಂದು ಹಂತದ ಮಟ್ಟಿಗೆ ಮನೆಯ ಆರ್ಥಿಕ ಪರಿಸ್ಥಿತಿ ಸುಧಾರಿಸ್ತಾ ಬಂತು.
ಆದರೆ ಇದ್ದಕ್ಕಿದ್ದಂತೆ ಒಂದು ದಿನ ಕಂಪನಿ ನಷ್ಟದ ನೆಪವೊಡ್ಡಿ ಹೆಚ್ಚು ಸಂಬಳ ಪಡೆಯುತ್ತಿದ್ದವರನ್ನು ಫ್ರೆಶರ್ ಗೆ ನೀಡುವಷ್ಟು ಸಂಬಳ‌ ಕೊಡ್ತೀವಿ. ಇಲ್ಲ ಕೆಲಸ ಬಿಟ್ಟು ಹೋಗಿ ಎಂದು ಹೇಳ್ತು.
ತುಂಬಾ ಜನ ಕೆಲಸ ಬಿಟ್ರು. ಹೆಚ್ಚೋ ಅದೇ ಸಂಬಳಕ್ಕೆ, ಅದಕ್ಕಿಂತಲೂ ಕಮ್ಮಿ ಸಂಬಳಕ್ಕೆ ಬೇರೆಕಡೆ ಕೆಲಸಕ್ಕೆ ಸೇರ್ಕೊಂಡ್ರು.
ಸಚ್ಚಿದಾನಂದ್ ಬೇರೆ ಕಡೆ ಟ್ರೈ ಮಾಡಿದ್ರು. ಕನಿಷ್ಠ 50-60 ಸಾವಿರ ರೂ ಸಂಬಳ ಕೇಳಿದ್ರು ಯಾವ ಕಂಪನಿಯೂ ಕೊಡೋಕೆ ರೆಡಿ ಇರ್ಲಿಲ್ಲ. ಹೊಸಬರನ್ನು ತಗೊಂಡು ದುಡಿಸಿಕೊಳ್ಳಬಹುದು ಎಂಬುದು ಅವುಗಳ ಸಹಜ ಪ್ಲಾನ್.

ಕೆಲಸ ಮಾಡ್ತಿದ್ದ ಕಂಪನಿಯಲ್ಲಿ ಹೆಚ್ಚೆಂದರೆ 30 ಸಾವಿರ ರೂ ನೀಡ್ತೀವಿ ಅಂದ್ರು. ದಿಢೀರನೆ ಅಷ್ಟೊಂದು ಕಡಿಮೆ ಸಂಬಳಕ್ಕೆ ಇಳಿದಾಗ ಕಷ್ಟವಾಗುತ್ತೆ. ನಿರ್ಧಿಷ್ಟ ಸಂಬಳದ ಮಿತಿಗನುಣವಾಗಿ ಲೈಫ್ ಲೀಡ್ ಮಾಡುತ್ತಿರುವಾಗ ಮತ್ತೆ ಕಡಿಮೆ ಖರ್ಚು ವೆಚ್ಚ ಕಷ್ಟ..! ಆದರೆ, ಸಚ್ಚಿಗೆ ಅದು ಕಷ್ಟ ಎನಿಸಲಿಲ್ಲ‌. ಬಡತನದಿಂದ ಬಂದವ ಅವರಿಗೆ ದುಡ್ಡಿನ ಬೆಲೆ ಗೊತ್ತಿತ್ತು.
ಸಂಬಳದ ಮುಖ ನೋಡದೇ ಇದ್ದರೂ ಕೆಲಸ ಬಿಡುವ ನಿರ್ಧಾರ ಮಾಡಿದ್ರು. ಬೇರೆಯವರ ಕೈ ಕೆಳಗೆ ಎಷ್ಟು ದಿ‌ನ ಹೀಗೆ ದುಡಿಯುವುದು..‌..? ಕಷ್ಟಪಟ್ಟು ದುಡಿದರೂ ಬೆಲೆ ಇಲ್ಲ‌.‌ ಜಾಬ್ ಸೆಕ್ಯೂರ್ ಬೇರೆ ಇಲ್ಲ. ಇಷ್ಟ ಬಂದಾಗ ಮನೆಗೆ ಕಳುಹಿಸ್ತಾರೆ ಎಂದು ಯೋಚಿಸಿ ಕೆಲಸ ಬಿಟ್ಟು ಊರಿಗೆ ಹೋದ….!
ಮುಂದೇನು? ಅಂತ ಯೋಚಿಸುತ್ತಾ ಮನೆಯ ಜಗಲಿಯಲ್ಲಿ ಕುಳಿತಿರುವಾಗ ಮನೆಯ ಎದುರು, ಅಕ್ಕ-ಪಕ್ಕ ಇದ್ದ ಕಾಲಿ ಜಾಗ ಕಣ್ಣಿಗೆ ಬಿತ್ತು. ಆ ಜಾಗದಲ್ಲಿ ತರಕಾರಿ ಬೆಳೆಯಲು ನಿರ್ಧರಿಸಿದರು. ಅದು ಕೈ ಹಿಡಿಯಿತು. ಕೈಯಲ್ಲಿದ್ದ ಅಲ್ಪ-ಸ್ವಲ್ಪ ದುಡ್ಡಿನ ಜೊತೆಗೆ ಬ್ಯಾಂಕ್ ನಲ್ಲಿ ಸಾಲ ಪಡೆದು ಜಮೀನು ಖರೀಧಿಸಿ, ಭತ್ತ , ರಾಗಿ , ಅಡಕೆ ಹೀಗೆ ಬೇರೆ ಬೇರೆ ಬೆಳೆಗಳನ್ನು ನಿಧಾನಕ್ಕೆ ಒಂದೊಂದಾಗಿ ಬೆಳೆಯಲು ಆರಂಭಿಸಿದರು. ಭೂತಾಯಿ ಒಳ್ಳೆಯದನ್ನೇ ಮಾಡಿದಳು.

ಬಡವರಿಗೆ ಕೆಲಸ ಕೊಟ್ಟು, ಅವರೊಡನೆ ತಾನೂ ಕೆಲಸ ಮಾಡಿದರು. ಜಮೀನಿನ ಜೊತೆಗೆ ನಗರ ಕೇಂದ್ರದಲ್ಲಿ ಕಂಪ್ಯೂಟರ್ ತರಬೇತಿ ಶಾಲೆಯನ್ನು ಆರಂಭಿಸಿ. ಅಲ್ಲಿ ತನ್ನ ಒಂದಿಬ್ಬರು ನಿರುದ್ಯೋಗಿ ಗೆಳೆಯರನ್ನು ತರಬೇತಿಗೆ ಬಿಟ್ಟ ಸಚ್ಚಿದಾನಂದ್ ಅವರಿಗೆ ಅದೂ ಸಹ ಕ್ಲಿಕ್ ಆಯ್ತು. ಜಮೀನು ಕಂಪ್ಯೂಟರ್ ಸೆಂಟರ್ , ಟ್ಯುಟೋರಿಯಲ್ , ಮಂಡಿ ಸೇರಿದಂತೆ ಹತ್ತಾರು ಉದ್ಯಮಗಳಿಗೆ ಕೈ ಹಾಕಿದರು.‌ ಇವರ ಪ್ರಯತ್ನಕ್ಕೆ ಫಲ‌ಸಿಕ್ಕಿತು. ಪ್ರತಿಯೊಂದು ಕೆಲಸಗಳೂ ಸಹ ಕೈ ಹಿಡಿದವು. ಒಂದಿಷ್ಟು ಜನರಿಗೆ ಉದ್ಯೋಗದಾತರೂ ಆದರು.
ಇವತ್ತು ಕಡಿಮೆ ಅಂದ್ರೂ ಇವರ ಎಲ್ಲಾ ಸ್ಥಿರಾಸ್ಥಿ, ಚರಾಸ್ಥಿ ಮೌಲ್ಯ ಹೆಚ್ಚು ಕಡಿಮೆ‌ 10 ಕೋಟಿ ಇದೆಯಂತೆ…!

ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಳ್ಳಿ

Similar Articles

Comments
Top