
ಟೆಸ್ಟ್ ರ್ಯಾಂಕಿಂಗ್ನಲ್ಲಿ ನಂಬರ್ 1 ಪ್ಲೇಯರ್ ಆಗಿರೋ ಆಸ್ಟ್ರೇಲಿಯಾದ ಸ್ಪೋಟಕ ಬ್ಯಾಟ್ಸ್ಮನ್ ಸ್ಟೀವ್ ಸ್ಮಿತ್ ಪಾಕ್ ವಿರುದ್ಧ ಟೆಸ್ಟ್ ಪಂದ್ಯದಲ್ಲಿ ನಾಲ್ಕು ರನ್ಗೆ ಔಟ್ ಆಗಿದಕ್ಕೆ ತಮಗೆ ತಾವೇ ಶಿಕ್ಷೆ ಕೊಟ್ಟುಕೊಂಡಿದ್ದು ಸದ್ಯ ಈ ಸುದ್ದಿ ಈ ಭಾರಿ ಸೌಂಡ್ ಮಾಡ್ತಾ ಇದೆ.

ಸದ್ಯ ಆಸ್ಟ್ರೇಲಿಯಾ ಪಾಕಿಸ್ತಾನದ ವಿರುದ್ಧ ಟೆಸ್ಟ್ ಸರಣಿ ಆಡ್ತಾ ಇದ್ದು. ಮೂರು ದಿನದ ಹಿಂದೆ ಮುಕ್ತಾಯವಾದ ಮೊದಲ ಟೆಸ್ಟ್ ಪಂದ್ಯದಲ್ಲಿ ಆಸ್ಟ್ರೇಲಿಯಾ ಇನಿಂಗ್ಸ್ ಜಯ ಗಳಿಸಿತ್ತು, ಆದ್ರೆ ಸ್ಟೀವ್ ಸ್ಮಿತ್ ಈ ಪಂದ್ಯದಲ್ಲಿ ಉತ್ತಮ ಪ್ರದರ್ಶನ ನೀಡಿರಲಿಲ್ಲ, ಅಲ್ಲದೇ ನಾಲ್ಕು ರನ್ಗೆ ಔಟ್ ಕೂಡ ಆಗಿದ್ರು, ಈ ಕಾರಣಕ್ಕಾಗಿ ಸ್ಮಿತ್ ತಮಗೆ ತಾವೇ ಶಿಕ್ಷೆಯನ್ನು ವಿಧಿಸಿಕೊಂಡಿದ್ದಾರೆ.

ಹೌದು ಪಂದ್ಯ ಮುಗಿದ ನಂತರ ಸ್ಟೇಡಿಯಂ ನಿಂದ ತಾವು ತಂಗಿರುವ ಹೋಟೆಲ್ಗೆ ಎಲ್ಲಾ ಪ್ಲೆಯರ್ಸ್ ಬಸ್ನಲ್ಲಿ ಹೋಗಿದ್ರ, ಸ್ಮಿತ್ ಮಾತ್ರ ಬಸ್ನಲ್ಲಿ ಹೋಗದೇ ಸ್ಟೇಡಿಯಂ ನಿಂದ ಹೋಟೆಲ್ ಇರೋ ಮೂರು ಕಿಲೋಮೀಟ್ರ್ ದೂರವನ್ನು ಓಡುವ ಮೂಲಕ ತಮಗೆ ತಾವೇ ಶಿಕ್ಷೆ ವಿಧಿಸಿಕೊಂಡಿದ್ದಾರೆ.

ಇನ್ನು ಈ ವಿಚಾರವಾಗಿ ಮಾತನಾಡಿದ ಸ್ಟೀವ್ ಸ್ಮಿತ್ ನಾನು ರನ್ ಗಳಿಸಲು ಸಾಧ್ಯವಾಗದೇ ಇದ್ದಾಗ ನನಗೆ ನಾನೇ ಶಿಕ್ಷೆ ಕೊಟ್ಟುಕೊಳ್ಳುತ್ತೇನೆ. ಶತಕ ಸಿಡಿಸಿದಾಗ ಆ ದಿನ ನಾನು ಬಾರ್ಗೆ ಹೋಗಿ ನನಗೆ ನಾನೇ ಬಹುಮಾನ ಕೊಟ್ಟುಕೊಳ್ಳುತ್ತೇನೆ. ಇನ್ನು ಯಾವುದೇ ಪಂದ್ಯದಲ್ಲಿ ನನಗೆ ರನ್ಗಳಿಸಲು ಆಗದಿದ್ದಾಗ ನಾನು ಜಿಮ್ ಅಥವಾ ಬೇರೆಡೆ ಹೋಗಿ ನನಗೆ ನಾನೇ ಶಿಕ್ಷೆಕೊಟ್ಟುಕೊಳ್ಳುತ್ತೇನೆ ಅಂತ ಹೇಳಿದ್ದಾರೆ.