ತಪ್ಪಾಗಿದ್ದರೆ ಕ್ಷಮಿಸಿ ಎಂದ ರೋರಿಂಗ್‌ ಸ್ಟಾರ್‌..!

bharate success

ರೋರಿಂಗ್‌ ಸ್ಟಾರ್‌ ಅಭಿನಯದ ಭರಾಟೆ ಸಿನಿಮಾ ಕಳೆದ ವಾರ ರಿಲೀಸ್‌ ಆಗಿ ಭರ್ಜರಿ ರೆಸ್ಪಾನ್ಸ್‌ ಪಡೆದುಕೊಂಡಿದೆ, ಇನ್ನು ಕಲೆಕ್ಷನ್‌ನಲ್ಲೂ ಎಲ್ಲೂ ಹಿಂದೆ ಬೀಳದ ಭರಾಟೆ ಸಿನಿಮಾ ದಾಖಲೆ ಕಲೆಕ್ಷನ್‌ ಜೊತೆ ಮುನ್ನುಗುತ್ತಿದೆ, ಇದೇ ವೇಳೆ ಚಿತ್ರ ತಂಡ ಸಕ್ಸಸ್‌ ಕಾರ್ಯಕ್ರಮವನ್ನು ಏರ್ಪಡಿಸಿದ್ರು, ಇನ್ನು ಕಾರ್ಯಕ್ರಮದಲ್ಲಿ ಮಾತನಾಡಿದ ನಟ ರೋರಿಂಗ್‌ ಸ್ಟಾರ್‌ ಶ್ರೀಮುರುಳಿ ಈ ಸಿನಿಮಾ ಗೆಲುವಿಗೆ ಸಿನಿ ರಸಿಕರು ಮತ್ತು ಮಾಧ್ಯಮದವರು ಕಾರಣ, ಇನ್ನು ಒಳ್ಳೇ ಸಿನಿಮಾ ಜೊತೆ ನಿಮ್ಮ ಮುಂದೆ ಬರ್ತೀವಿ, ಮದಗಜ ಸಿನಿಮಾ ಈಗಾಗ್ಲೇ ಶುರುವಾಗಿದೆ, ನಮ್ಮ ಕೈಲಾದಷ್ಟು ಒಳ್ಳೇಯ ಸಿನಿಮಾಗಳನ್ನು ಕೊಡಲು ಪ್ರಯತ್ನ ಮಾಡುತ್ತೇವೆ, ತಪ್ಪಾಗಿದ್ದರೆ ಕ್ಷಮಿಸಿ, ಮುಂದೆ ಆ ತಪ್ಪುಗಳು ಆಗದ ರೀತಿ ಎಚ್ಚರವಹಿಸುತ್ತೇವೆ ಅಂತ ಹೇಳಿದ್ರು,

ಇನ್ನು ಇದೇ ವೇಳೆ ನಾಯಕಿ ಶ್ರೀಲೀಲಾ ನಿರ್ದೇಶಕ ಚೇತನ್‌ ಸಾಥ್‌ ನೀಡಿದ್ರು.

ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಳ್ಳಿ

Similar Articles

Comments
Top