SRH ಟೀಂನಲ್ಲಿ ಇರೋ ಈ ಚೆಲುವೆ ಯಾರು ಗೊತ್ತಾ..

ಐಪಿಎಲ್‌ 2020 ಪ್ರತಿ ಪಂದ್ಯವೂ ರೋಚಕತೆಯಿಂದ ಕೂಡಿರುತ್ತಿದ್ದು, ನಿನ್ನೆ ನಡೆದ ಪಂದ್ಯದಲ್ಲಿ ಪಂಜಾಬ್‌ ವಿರುದ್ಧ ಸನ್‌ ರೈಸರ್ಸ್‌ ಹೈದರಬಾದ್‌ ತಂಡ ಭರ್ಜರಿಗೆಲುವನ್ನು ಸಾಧಿಸಿತು, ಡೇವಿಡ್‌ ವಾರ್ನರ್‌ ಮತ್ತು ಬೆನ್‌ ಸ್ಟೋ ಅವರ ಅಮೋಘ ಬ್ಯಾಟಿಂಗ್‌ ನೆರವಿನಿಂದ 200ರನ್‌ ಕಲೆಹಾಕಿದ ಹೈದರಬಾದ್‌ ತಂಡ ಪಂಜಾಬ್‌ ವಿರುದ್ಧ 69ರನ್‌ಗಳ ಭರ್ಜರಿ ಗೆಲುವನ್ನು ಸಾಧಿಸಿತು. ಆದ್ರೆ ಸನ್‌ರೈಸರ್ನ್‌ ಹೈದರಬಾದ್‌ ಆಟಗಾರರು ಸಿಕ್ಸರ್‌,ಬೌಂಡರಿ ಬಾರಿಸಿದಾಗ ಮತ್ತು ವಿಕೇಟ್‌ ಕಿತ್ತಾಗ ಆಟಗಾರರರು ಸಂಭ್ರಮಿಸು ರೀತಿ ಸನ್‌ರೈಸರ್ಸ್‌ ಹೈದರಬಾದ್‌ ತಂಡ ಡಗೌಟ್‌ನಲ್ಲಿ ಒರ್ವ ಚೆಲುವೆ ಸಂಭ್ರಮಿಸೋದು ಕಾಣಸಿಗುತ್ತೆ, ಆದ್ರೆ ಆ ಚೆಲುವೆ ಯಾರು ಎಂಬ ಪ್ರಶ್ನೆ ಇದೀಗ ಕ್ರಿಕೆಟ್‌ ಅಭಿಮಾನಿಗಳಲ್ಲಿ ಮತ್ತು ಹೈದರಬಾದ್‌ ತಂಡದ ಫ್ಯಾನ್ಸ್‌ಗಳಲ್ಲಿ ಮೂಡಿದೆ.

ಡೇವಿಡ್‌ ವಾರ್ನರ್‌ ಟೀಂ ಅನ್ನು ಪ್ರತಿ ಪಂದ್ಯದಲ್ಲೂ ಚೀಯರ್‌ ಮಾಡುತ್ತಿರೊ ಈ ಚೆಲುವೆ ಯಾರು ಅನ್ನೊದು ಇದೀಗ ಕ್ರಿಕೆಟ್‌ ಅಭಿಮಾನಿಗಳಲ್ಲಿ ಮೂಡಿದ್ದು, ಹೈದರಬಾದ್‌ ಜೆರ್ಸಿ ತೊಟ್ಟು, ಸಖತ್‌ ಸ್ಟೈಲೀಶ್‌ ಆಗಿ ಕಾಣಿಸೋ ಈ ಚೆಲುವೆ ಯಾರು ಅನ್ನೋ ಚರ್ಚೆ ಇದೀಗ ಜೋರಾಗಿ ಶುರುವಾಗಿದೆ, ಅದಕ್ಕೆ ಉತ್ತರ ಇದೀಗ ಸಿಕ್ಕಿದ್ದು, ಆಕೆ ಬೇರೆಯಾರು ಅಲ್ಲ ಸನ್‌ರೈಸರ್ಸ್‌ ಹೈದರಬಾದ್‌ ತಂಡದ ಮಾಲೀಕ ಕಲಾನಿಧಿ ಮಾರನ್‌ ಅವರ ಪುತ್ರಿ ಕಾವ್ಯ ಮಾರನ್‌.

28 ವರ್ಷದ ಕಾವ್ಯ ಮಾರನ್‌ ಸದ್ಯ ಯುಎಇಯಲ್ಲಿ ನಡೀತಾ ಇರೋ ಐಪಿಎಲ್‌ನಲ್ಲಿ ತಮ್ಮ ತಂಡವನ್ನು ಚಿಯರ್‌ ಮಾಡೋ ಮೂಲಕ ಹುರಿದುಮ್ಮಿಸುತ್ತಿದ್ದು, ಇತ್ತ ಕ್ರಿಕೆಟ್‌ ಅಭಿಮಾನಿಗಳ ಎದೆಬಡಿತವನ್ನು ಸಹ ಹೆಚ್ಚು ಮಾಡ್ತಿದ್ದಾರೆ. ಸನ್‌ ನೆಟ್‌ವರ್ಕ್‌ನ ಮಾಲೀಕರಾಗಿರೋ ಕಾವ್ಯ ಮಾರನ್‌ ಚೆನ್ನೈನ ಸ್ಟೆಲಿಯಾ ಮಾರಿಸ್‌ ಕಾಲೇಜಿನಲ್ಲಿ ಬಿಕಾಂ ಮುಗಿಸಿದ್ದು, ನಂತರ ನ್ಯೂಯಾರ್ಕ್‌ ಯುನಿವರ್ಸಿಟಿಯಲ್ಲಿ ಎಂಬಿಎ ಮುಗಿಸಿದ್ದಾರೆ. ಓದು ಮುಗಿಸಿದ ಕಾವ್ಯ ಮಾರನ್‌ ತಮ್ಮ ನೆಟ್‌ವರ್ಕ್‌ ಸಂಸ್ಥೆಯಲ್ಲಿ ಒಂದು ವರ್ಷ ಕೆಲಸ ಮಾಡಿ ನಂತರ ಸನ್‌ ನೆಟ್‌ವರ್ಕ್‌ ಬೋರ್ಡಿನ ಡೈರೆಕ್ಟರ್‌ ಆಗಿ ಕೆಲಸ ನಿರ್ವಹಿಸುತ್ತಿದ್ದಾರೆ. ಇನ್ನು ಕಾವ್ಯ ಮಾರನ್‌ 2019ರಲ್ಲಿ ನಡೆದ ಐಪಿಎಲ್‌ ಆಕ್ಷನ್‌ನಲ್ಲೂ ಸಹ ಪಾಲ್ಗೊಂಡಿದ್ದರು. ಸನ್‌ ನಟ್‌ವರ್ಕ್‌ನಲ್ಲಿ ಪ್ರಮುಖ ಕಾರ್ಯನಿರ್ವಹಿಸುತ್ತಿರೋ ಇವರು ಇದೀಗ ಐಪಿಎಲ್‌ನಲ್ಲಿ ತಮ್ಮ ತಂಡವನ್ನು ಹುರಿದುಂಬಿಸಿ ಚಿಯರ್‌ ಮಾಡುತ್ತಿದ್ದಾರೆ.

ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಳ್ಳಿ

Similar Articles

Comments
Top