SPBಗೆ ಲವ್‌ ಯೂ ಹೇಳಿ ಧನ್ಯವಾದ ತಿಳಿಸಿದ ಸಲ್ಮಾನ್‌ ಖಾನ್‌

ಗಾಯಕ ಬ್ರಹ್ಮ ಎಸ್‌ಪಿ ಬಾಲಸುಬ್ರಹ್ಮಣ್ಯ ಅವರ ಆರೋಗ್ಯ ಸ್ಥಿತಿ ಗಂಭೀರವಾಗಿದ್ದು, ಶೀಘ್ರ ಗುಣಮುಖರಾಗುವಂತೆ ಅವರ ಅಭಿಮಾನಿಗಳು, ಹಿತೈಶಿಗಳು ಹಾರೈಸುತ್ತಿದ್ದಾರೆ. ಇದೀಗ ಬಾಲಿವುಡ್‌ ಸಲ್ಮಾನ್‌ ಖಾನ್‌ ಟ್ವೀಟ್‌ ಮಾಡಿ ಎಸ್‌ಪಿಬಿ ಧನ್ಯವಾದ ತಿಳಿಸಿದ್ದಾರೆ.

ಸಲ್ಮಾನ್‌ ಖಾನ್‌ ತಮ್ಮ ಟ್ವೀಟರ್‌ನಲ್ಲಿ ಬಾಲಸುಬ್ರಹ್ಮಣ್ಯಂ ಸರ್‌, ಆರೋಗ್ಯ ಬೇಗ ಸುಧಾರಿಸಲಿ ಎಂದು ನಾನು ಮನಸಾರೆ ಹಾರೈಸುತ್ತೇನೆ. ನೀವು ನನಗೋಸ್ಕರ ಹಾಡಿರುವ ಎಲ್ಲ ಹಾಡುಗಳು ನನಗೆ ಸ್ಪೆಷಲ್‌ ಆಗಿವೆ. ಇಂತಿ ನಿಮ್ಮ ದಿಲ್‌ ದಿವಾನಾ ಹೀರೋ ಪ್ರೇಮ್‌,ಲವ್‌ ಯೂ ಸರ್‌ ಎಂದು ಟ್ವೀಟರ್‌ನಲ್ಲಿ ಬರೆದುಕೊಂಡಿದ್ದಾರೆ.

ಕೊರೋನಾ ಪಾಸಿಟಿವ್‌ ಹಿನ್ನೆಲೆ ಆಗಸ್ಟ್‌ ೫ರಂದು ಚೆನ್ನೈನ ಎಂಜಿಎಂ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಎಸ್‌ಪಿಬಿ ಆರೋಗ್ಯ ಮತ್ತೆ ಗಂಭೀರವಾಗಿದ್ದು, 24 ಗಂಟೆಗಳಿಂದ ಅವರ ಆರೋಗ್ಯದ ಮೇಲೆ ನಿಗಾ ಇಡಲಾಗಿದೆ. ನಿನ್ನೆ ಆಸ್ಪತ್ರೆ ಪ್ರೆಸ್‌ ರಿಲೀಸ್‌ ಮಾಡುವ ಮೂಲಕ ಎಸ್‌ಪಿಬಿ ಆರೋಗ್ಯ ಚಿಂತಯಾಜನಕವಾಗಿದೆ ಎಂದು ತಿಳಿಸಿದ್ರು.

ಇನ್ನು ನಟ ಕಮಲ್‌ ಹಾಸನ್‌ ನಿನ್ನೆ ತಡ ರಾತ್ರಿ ಆಸ್ಪತ್ರೆಗೆ ಭೇಟಿ ನೀಡಿ ಎಸ್‌ಪಿಬಿ ಅವರ ಆರೋಗ್ಯವನ್ನು ವಿಚಾರಿಸಿದ್ದಾರೆ.

ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಳ್ಳಿ

Similar Articles

Comments
Top