ಸುಮಲತಾ ಅವರನ್ನು ಈ ಡ್ರೆಸ್‌ನಲ್ಲಿ ನೀವೂ ನೋಡಿರೋಕೆ ಚಾನ್ಸೇ ಇಲ್ಲಾ..!

80ರ ದಶಕದ ಕಲಾವಿದರು ಪ್ರತಿ ವರ್ಷ ಒಂದೆಡೆ ಸೇರಿ ಪಾರ್ಟಿ ಮಾಡೋ ಪ್ರತೀತಿ ನಡೀತಾನೇ ಇದೆ..ಇದರಲ್ಲಿ ದಕ್ಷಿಣ ಭಾರತದ ಕಲಾವಿದರು ಮತ್ತು ಬಾಲಿವುಡ್‌ನ ಕೆಲವು ಹಿರಿಯ ಕಲಾವಿದರು ಪಾಲ್ಗೊಳುತ್ತಾರೆ. ಅದರಂತೆ ಈ ಬಾರಿ ಈ ಪಾರ್ಟಿ ಮೆಗಾ ಸ್ಟಾರ್‌ ಜಿರಂಜೀವಿ ಅವರ ಮನೆಯಲ್ಲಿ ನಡೆದಿದ್ದು,

ಪ್ರತಿ ವರ್ಷವೂ ಒಂದು ಥೀಮ್‌ನಲ್ಲಿ ಪಾರ್ಟಿಯನ್ನು ಮಾಡಲಾಗುತ್ತದೆ. ಈ ಬಾರಿ ಬ್ಲಾಕ್‌ ಅಂಡ್‌ ಗೋಲ್ಡನ್‌ ಕಾಸ್ಟ್ಯೂಮ್‌ ಅನ್ನು ಕಲಾವಿದರು ಧರಿಸಿದ್ದು. ಇದರಲ್ಲಿ ಸುಮಲತಾ ಕೂಡ ಪಾಲ್ಗೊಂಡಿದ್ದರು. ಇನ್ನು ಅವರು ಹಾಕಿದ್ದ ಬ್ಲಾಕ್‌ ಅಂಡ್‌ ಗೋಲ್ಡನ್‌ ಕಾಂಬೀನೇಷನ್‌ ಡ್ರೆಸ್‌ ಡಿಫರೆಂಟ್‌ ಆಗಿ ಕಾಣಿಸಿದ್ದು, ಸುಮಲತಾ ಅವರನ್ನು ಈ ರೀತಿಯ ಕಾಸ್ಟ್ಯೂಮ್‌ನಲ್ಲಿ ಇದುವರೆಗೂ ನೋಡಿಯೇ ಇರಲಿಲ್ಲ..

ಸದ್ಯ ಇತ್ತೀಚೆಗೆ ನಡೆದ ಪಾರ್ಟಿಯ ಕೆಲವೊಂದಿಷ್ಟು ಫೋಟೋಗಳು ಲಭ್ಯವಾಗಿದ್ದು ಇದರಲ್ಲಿ ಎಲ್ಲಾ 80ರ ದಶಕದ ಕಲಾವಿದರ ಜೊತೆ ಕೆಲವೊಂದಿಷ್ಟು ಇತ್ತೀಚಿನ ಕಲಾವಿದರನ್ನು ಸಹ ಕಾಣಬಹುದಾಗಿದೆ.

ಇನ್ನು ಈ ಕಾರ್ಯಕ್ರಮದಲ್ಲಿ ನಟ ಚಿರಂಜೀವಿ, ಮೋಹನ್‌ಲಾಲ್‌, ರಮೇಶ್‌ ಅರವಿಂದ್‌,ಫ್ರಭು, ನಾಗಾರ್ಜುನ, ವಿಕ್ಟರಿ ವೆಂಕಟೇಶ್‌,ಶರತ್‌ಕುಮಾರ್‌, ಸಂಪತ್‌ ಕುಮಾರ್‌, ಜಗಪತಿ ಬಾಬು, ಸುಹಾಸಿನಿ, ಜಾಕಿ ಶ್ರಾಫ್‌ ಸೇರಿದಂತೆ ಅನೇಕ ಕಲಾವಿದರು ಈ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು.

ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಳ್ಳಿ

Similar Articles

Comments
Top