
ಇತ್ತೀಚಿನ ದಿನಗಳಲ್ಲಿ ವಾಣಿಜ್ಯ ಕ್ಷೇತ್ರದಲ್ಲಿ ಮಹಿಳಾ ಉದ್ಯಮಿಗಳ ಸಂಖ್ಯೆ ಹೆಚ್ಚುತ್ತಿದೆ. ತೊಟ್ಟಿಲು ತೂಗುವ ಕೈ ದೇಶವನ್ನಾಳುತ್ತದೆ ಎಂಬ ಮಾತಿನಂತೆ, ಹಾಸನದ ಪ್ರತಿಭೆ ನಮ್ಮ ಸ್ನೇಹಾ ರಾಕೇಶ್ ಕೂಡ ದೇಶ-ವಿದೇಶಗಳಲ್ಲಿ ಸಾಕಷ್ಟು ಹೆಸರು ಮಾಡಿ ಸೈ ಎನಿಸಿಕೊಂಡಿದ್ದಾರೆ.
ಜೀವನದಲ್ಲಿ ಸಾಕಷ್ಟು ಸವಾಲುಗಳನ್ನು ಎದುರಿಸಿದ್ದ ಸ್ನೇಹಾ, ಕಿರಿಯ ವಯಸ್ಸಿನಲ್ಲಿಯೇ ತಂತ್ರಜ್ಞಾನ ಕ್ಷೇತ್ರದಲ್ಲಿ ಪ್ರಬಲ ಮಹಿಳೆಯರ ಸಾಲಿನಲ್ಲಿ 6ನೇ ಸ್ಥಾನ ಪಡೆದು ಆಕ್ಸ್ವರ್ಡ್ ಟೆಕ್ನಾಲಜಿ ಪ್ರೈವೇಟ್ ಲಿಮಿಟೆಡ್ ಐಟಿ ಕಂಪೆನಿ ಸ್ಥಾಪಿಸಿ ಸಾಕಷ್ಟು ಹೆಸರು ಮಾಡಿದ್ರು. ಸಣ್ಣ ರೂಮಿನಲ್ಲಿ 4 ಗೋಡೆಗಳ ಮಧ್ಯೆ ಶುರುವಾದ ಇವರ ಬ್ಯುಸಿನೆಸ್ ಈಗ ರಾಷ್ಟ್ರ, ದೇಶ-ವಿದೇಶಗಳಲ್ಲಿ ಆವರಿಸಿಕೊಂಡಿದೆ. ಅಲ್ಲಿಯ ವರೆಗೆ ಸ್ನೇಹಾ ಬೆಳೆದು ಸಾವಿರಾರು ಮಂದಿಗೆ ಉದ್ಯೋಗಾವಕಾಶವನ್ನು ಮಾಡಿಕೊಟ್ಟಿದ್ದಾರೆ.
ಹಾಸನದ ಸರ್ಕಾರಿ ಶಾಲೆಯಲ್ಲಿ ಓದಿ ಬೆಳೆದ ಸ್ನೇಹ ಸಣ್ಣ ವಯಸ್ಸಿನಲ್ಲಿಯೇ ನಾನು ದೊಡ್ಡವಳಾದ ಮೇಲೆ ಏನಾದರೂ ಸಾದನೆ ಮಾಡಬೇಕು ಅಂತ ಕನಸು ಕಟ್ಟಿಕೊಂಡಿದ್ರು. ತಾತನ ಮಾರ್ಗದರ್ಶನದಲ್ಲಿ, ಸರ್ಕಾರಿ ಶಾಲೆಯಲ್ಲಿ ಬೆಳೆದ ಸ್ನೇಹಾರಿಗೆ ಇಂಗ್ಲೀಷ್ ಮಾತಾಡೋಕೆ ಬರದ ಕಾರಣ ಬೆಂಗಳೂರಿನಲ್ಲಿ ಪ್ರಾರಂಭದಲ್ಲಿ ಸುದೀರ್ಘವಾಗಿ ಕೆಲಸ ಮಾಡಲು ಆಗಲಿಲ್ಲ. ಆದರೂ ಛಲ ಬಿಡದ ಸ್ನೇಹಾ ತನ್ನ ಬಳಿ ದುಡ್ಡಿಲ್ಲದಿದ್ದರೂ ಹಠ ಹಿಡಿದು ವಿದ್ಯಾಭ್ಯಾಸದ ಲೋನ್ ಪಡೆದು ರಾಮಯ್ಯ ಕಾಲೇಜಿನಲ್ಲಿ ಎಂಎಸ್ಸಿ, ಇಂಜಿನಿಯರಿಂಗ್ ಓದಿದ್ರು.
19ನೇ ವಯಸ್ಸಿಗೆ ಸಾಫ್ಟವೇರ್ ಇಂಜಿಯರ್ ಆದ್ರು, ಹಾಗೇನೆ 5 ಕಂಪೆನಿಗಲಲ್ಲಿ ಕೆಲಸ ಮಾಡೋದಕ್ಕೆ ಶುರು ಮಾಡಿದ್ರು. ಕಂಪ್ಯೂಟರ್ ಸೈನ್ಸ್, ನೆಟ್ವರ್ಕ್ನಲ್ಲಿ ಮಾಸ್ಟರ್ ಡಿಗ್ರಿ ಪಡೆದು ಮತ್ತಷ್ಟು ಪರಿಣಿತರಾದರು. ಓದ್ತಾನೆ ಆನ್ಲೈನ್ನಲ್ಲಿ ಫ್ರೀಲಾನ್ಸ್ ಆಗಿ ಪ್ರಾಜೆಕ್ಟ್ ವರ್ಕ್ಗಳನ್ನ ಮಾಡೋಕೆ ಶುರು ಮಾಡಿದ್ರು. ಸಣ್ಣ ಕೆಲಸದಲ್ಲಿ ಗಳಿಸುತ್ತಿದ್ದ ಪುಟಾಣಿ ದುಡ್ಡನ್ನ ನೋಡುತ್ತಲೇ ಸ್ನೇಹಾ ದೊಡ್ಡ ಕಂಪೆನಿ ಶುರು ಮಾಡುವ ಕನಸ್ಸನ್ನು ಹೊಂದಿದ್ರು.
ಡಾ. ಸ್ನೇಹ ರಾಕೇಶ್ ಅವರ ಸಾಲುದ್ದ ಸಾಧನೆಗೀಗ 2020ರ ಬ್ಯುಸಿನೆಸ್ ಮಿಂಟ್ ಅತ್ಯುತ್ತಮ ಉದಯೋನ್ಮುಖ ಮಹಿಳಾ ಉದ್ಯಮಿ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡಿದ್ದಾರೆ. “ ವಿ ಕ್ರಿಯೇಟ್ ಸಾಪ್ಟ್ ವೇರ್ ಸಲ್ಯೂಷನ್ಸ್” ಎಂಬ ಹೆಸರಿನ ಕಂಪನಿಯನ್ನು “ ಅಕರಮ್ಯಾಕ್ಸಸ್ ಟೆಕ್ ಪ್ರೈವೈಟ್ ಲಿಮಿಟೆಡ್ ಎಂದು ಬದಲಿಸಿ ಮುನ್ನಡೆಸುತ್ತಿದ್ದಾರೆ.
ಸ್ನೇಹಾ ರಾಕೇಶ್ ಇಷ್ಟು ದಿನ ಯುವ ಸಮೂಹಕ್ಕೆ ಕೌಶಲ್ಯ ತರಬೇತಿ, ನಿರುದ್ಯೋಗ, ಉಜ್ವಲ ಭವಿಷ್ಯ ಕಲ್ಪಿಸುವ ನಿಟ್ಟಿನಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ. ಅಷ್ಟೇ ಅಲ್ಲ ಯುವ ಜನಾಂಗದ ಭವಿಷ್ಯದ ಕನಸುಗಳನ್ನು ಸಾಕಾರಗೊಳಿಸಲು ತರಬೇತಿ ಕಾರ್ಯಕ್ರಮಗಳನ್ನು ಸಹ ಹಮ್ಮಿಕೊಳ್ಳುತ್ತಿದ್ದಾರೆ. 2019ರ ಜೂನ್ ನಲ್ಲಿ ಅಂತಾರಾಷ್ಟ್ರೀಯ ಮ್ಯಾಗಜಿನ್ ಬ್ಯುಸಿನೆಸ್ ಕನೆಕ್ಟ್ ನ ಉತ್ತಮ ಮಹಿಳಾ ಉದ್ಯಮಿಯಾಗಿಯೂ ಗುರುತಿಸಿಕೊಂಡಿದ್ದಾರೆ. ಇದೀಗ ಇವರ ಸಾಧನೆಯನ್ನು ಪೋಬ್ಸ್ ಪತ್ರಿಕೆ ಗುರುತಿಸಿದ್ದು, ಕರುನಾಡಿನ ಮಹಿಳಾ ಉದ್ಯಮಿಯ ಸಾಧನೆಯನ್ನು ಜಗತ್ತಿಗೆ ಪಸರಿಸಿದೆ.