ಹುಷಾರ್ ನಿಮ್ಮ ಹೆಲ್ಮೆಟ್‍ನಲ್ಲೂ ಹಾವು ಸೇರಿಕೊಂಡಾತು.!

haavu helmet nalli

ಕಾಡು ನಾಶವಾಗುತ್ತಿದ್ದಂತೆ ಕಾಡು ಪ್ರಾಣಿಗಳು ನಾಡಿಗೆ ಬರೋದು ಸರ್ವೆ ಸಾಮಾನ್ಯವಾಗಿದೆ, ಅವುಗಳು ನಮಗೆ ತೊಂದರೆ ಕೊಡದಿದ್ದರು ಅವುಗಳಿಗೆ ನಾವು ತೊಂದರೆ ಕೊಟ್ಟು ನಾಡಿನ ಕಡೆ ಅವು ಮುಖ ಮಾಡುವ ರೀತಿ ಮಾಡಿದ್ದೇವೆ, ಇನ್ನು ದೇಶದಲ್ಲಿ ಮಳೆ ಹೆಚ್ಚಾಗಿದ್ದು, ಯಾವ ಪ್ರಾಣಿ,ಯಾವ ಕೀಟ ಯಾವ ಜಾಗದಲ್ಲಿ ಬಂದು ಸೇರಿಕೊಳ್ಳುತ್ತಿವೆ ಅನ್ನೋದನ್ನು ಊಹಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ, ಅದರಲ್ಲೂ ಹಾವಿನ ಕಾಟ ಮಳೆ ಹೆಚ್ಚಾಗಿರುವುದರಿಂದ ಜಾಸ್ತಿಯಾಗಿದ್ದು ಹಾವು ಯಾವ ವಸ್ತುವಿನಲ್ಲಿ ಬಂದು ಸೇರಿಕೊಂಡಿರುತ್ತದೆ ಅನ್ನೋದೆ ಗೊತ್ತಾಗುವುದಿಲ್ಲ. ಇತ್ತಿಚೆಗೆ ಹಾವೊಂದು ಬೈಕ್‍ನಲ್ಲಿ ಸೇರಿಕೊಂಡು ಇಡೀ ಬೈಕ್ ಅನ್ನೇ ಬಿಚ್ಚಿದ್ದ ಘಟನೆಯ ಸುದ್ದಿ ನಾವೆಲ್ಲಾ ಓದಿದ್ದೇವೆ, ಇದರ ಜೊತೆಯಲ್ಲಿ ಮಕ್ಕಳ ಶೂ, ಚಪ್ಪಲ್‍ಗಳಲ್ಲಿ ಸೇರಿಕೊಂಡಿರುವುದನ್ನು ನಾವು ಸೋಶಿಯಲ್ ಮೀಡಿಯಾದಲ್ಲಿ ನೋಡಿರ್ತಿವಿ, ಆದ್ರೆ ಹಾವೊಂದು ವಾಹನ ಸವಾರರು ಬಳಸುವ ಹೆಲ್ಮೆಟ್ ಒಳಗಡೆ ಸೇರಿಕೊಂಡಿರುವ ಸುದ್ದಿ ಈಗ ಎಲ್ಲಾ ಕಡೆ ಹರಿದಾಡ್ತಾ ಇದೆ, ಹೌದು ಹಾವೊಂದು ಬೈಕ್ ಚಲಾಯಿಸುವಾಗ ಬಳಸುವ ಹೆಲ್ಮೆಟ್ ಒಳಗಡೆ ಸೇರಿಕೊಂಡಿರೋ ಫೋಟೋ ಒಂದು ಈಗ ಸೋಶಿಯಲ್ ಮೀಡಿಯಾದಲ್ಲಿ ಭಾರೀ ವೈರಲ್ ಆಗಿದ್ದು, ಈಗ ಎಲ್ಲಾ ಕಡೆ ಹೆಲ್ಮೆಟ್ ಹಾಕುವ ಮೊದಲು ಹಾವಿದ್ಯ ಚೆಕ್ ಮಾಡ್ಕೊಪಾ ಅನ್ನೋ ಮಾತುಗಳು ಆಡಲು ಶುರುಮಾಡಿಕೊಂಡಿದ್ದಾರೆ, ಸದ್ಯ ಪೋಟೋ ವೈರಲ್ ಆಗುತ್ತಿದ್ದಂತೆ ಹೆಲ್ಮೆಟ್ ಧರಿಸುತ್ತಿದ್ದವರು ಒಂದ್ ಸಾರಿ ನೋಡ್ಕೊಬಿಡೋಣ ಅಂತ ಮನಸಿನಲ್ಲೇ ಅಂದುಕೊಳ್ತಾ ಇದ್ದಾರೆ.

ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಳ್ಳಿ

Similar Articles

Comments
Top