ಕೊನೆಗೂ ಬಯಲಾಯ್ತು ಸ್ಮೃತಿ ಮಂದಾನ ಜೆರ್ಸಿ ನಂಬರ್ ಸೀಕ್ರೆಟ್.!

smriti mandanna jourcey secret

ಟೀಂ ಇಂಡಿಯಾದ ಮಹಿಳಾ ಕ್ರಿಕೆಟ್ ಟೀಂನ ಸ್ಪೋಟಕ ಆಟಗಾರ್ತಿ, ಬ್ಯೂಟಿ ಆಫ್ ಟೀಂ ಇಂಡಿಯಾ ಸ್ಮೃತಿ ಮಂದಾನ ಸದ್ಯ ಟೀಂ ಇಂಡಿಯಾದ ರನ್ ಮಷಿನ್, ಪ್ರತಿಷ್ಟಿತ ಐಸಿಸಿ ಅವಾರ್ಡ್ ಗೆದ್ದಿರೋ ಮಂದನ್ನ, ತಾವು ಬಳಸೋ ಜೆರ್ಸಿ ನಂಬರ್ ಸೀಕ್ರೆಟ್ ಬಗ್ಗೆ ಈಗ ಬಾಯ್ ಬಿಟ್ಟಿದ್ದಾರೆ. ಇತ್ತಿಚೆಗೆ ಚಾಹಲ್ ಟಿವಿಯಲ್ಲಿ ಮಾತನಾಡಿದ ಸ್ಮೃತಿ ಮಂದಾನ ತಾವು ಹಾಕೋ ಜೆರ್ಸಿ ನಂಬರ್ 18, ಇದು ಟೀಂ ಇಂಡಿಯಾದ ಕ್ಯಾಪ್ಟನ್ ವಿರಾಟ್ ಕೊಹ್ಲಿಯವರ ಜೆರ್ಸಿ ನಂಬರ್ ಕೂಡ ಹೌದು ಆದ್ರೆ ವಿರಾಟ್ ಅವರ ಜೆರ್ಸಿ ನಂಬರ್ ನನ್ನ ನಂಬರ್ ಒಂದೇ ಅನ್ನೋದು ನನಗೆ ಎಷ್ಟೋ ದಿನಗಳವರೆಗೆ ಗೊತ್ತೆ ಇರಲಿಲ್ಲ, ಅಲ್ಲದೇ ನಾನು ಮೊದಲು ಕೇಳಿದ್ದಿದ್ದು ಜೆರ್ಸಿ ನಂಬರ್ 7 ಇದು ಧೋನಿಯವರ ಜೆರ್ಸಿ ನಂಬರ್ ಕೂಡ ಹೌದು ಅಲ್ಲದೇ ಇದು ನನ್ನ ಶಾಲಾ ದಿನದ ರೋಲ್‍ ನಂಬರ್ ಕೂಡ ಆಗಿತ್ತು, ಆದ್ರೆ ಆ ನಂಬರ್ ಬೇರೆಯವರು ಚಾಯ್ಸ್ ಮಾಡಿದ್ರು ಆಗ ನಮ್ಮ ಟೀಂನ ಮ್ಯಾನೇಜರ್ ಆದ ವಿಕಾಸ್ ಸರ್ ಅವರು ನನಗೆ ಜೆರ್ಸಿ ನಂಬರ್ 18 ಅನ್ನು ಆಯ್ಕೆ ಮಾಡಲು ಹೇಳಿದ್ರು, ಅಲ್ಲದೇ ಅದು ನನ್ನ ಹುಟ್ಟುಹಬ್ಬದ ದಿನ ಅಂದ್ರೆ ಜುಲೈ 18 ಅಂತ ಹೇಳಿಕೊಂಡಿದ್ದಾರೆ.. ಅಲ್ಲದೇ ವಿರಾಟ್ ಜೆರ್ಸಿ ನಂಬರ್ ಯಾವುದು ಅನ್ನೋದು ನನಗೆ ಕೆಲವು ವರ್ಷಗಳ ವರೆಗೆ ಗೊತ್ತೇ ಇರಲಿಲ್ಲ ಅಂತಾನೂ ಹೇಳಿಕೊಂಡಿದ್ದಾರೆ. ಅಲ್ಲದೇ ನ್ಯೂಜಿಲ್ಯಾಂಡ್ ವಿರುದ್ಧದ ಏಕದಿನ ಪಂದ್ಯದಲ್ಲಿ ಚಹಲ್ ಅವರ ಬ್ಯಾಟಿಂಗ್‍ನಿಂದ ಸ್ಪೂರ್ತಿ ಹೊಂದಿದ್ದೇನೆ ಅಂತಾನೂ ಸಹ ಹೇಳಿದ್ರು.

ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಳ್ಳಿ

Similar Articles

Comments
Top