
ತ್ರಿವಿದ ದಾಸೋಹಿ, ನಡೆದಾಡುವ ದೇವರು ಶ್ರೀ ಸಿದ್ಧಗಂಗಾ ಶ್ರೀಗಳ ಪುಣ್ಯಸ್ಮರಣೆಗೆ ಮಠದಲ್ಲಿ ಸಕಲ ಸಿದ್ಧತೆ ನಡೆಯುತ್ತಿದೆ. ಇದೇ ಜನವರಿ 31 ರಂದು ನಡೆಯಲಿರುವ ಶ್ರೀಗಳ ಪುಣ್ಯಸ್ಮರಣೆಗೆ ಪೂರ್ವ ತಯಾರಿ ಭರದಿಂದ ಸಾಗುತ್ತಿದೆ. ಪುಣ್ಯ ಸ್ಮರಣೆ ಹಿನ್ನೆಲೆ ಮಠದ ಆವರಣವನ್ನ ಸ್ವಚ್ಚತೆಗೊಳಿಸಲಾಗುತ್ತಿದ್ದು, ಕಾರ್ಯಕ್ರಮಕ್ಕಾಗಿ ಗೋಸಲ ಸಿದ್ದೇಶ್ವರ ಬೃಹತ್ ವೇದಿಕೆ ಸಿದ್ಧಗೊಳ್ತಿದೆ. ಶ್ರೀಗಳ ಪುಣ್ಯ ಸ್ಮರಣೆ ಕಾರ್ಯಕ್ರಮಕ್ಕೆ ಸುಮಾರು 4 ರಿಂದ 5 ಲಕ್ಷಕ್ಕೂ ಹೆಚ್ಚು ಭಕ್ತರು ಪಾಲ್ಗೊಳ್ಳುವ ನಿರೀಕ್ಷೆ ಇದೆ. ಈ ಕಾರಣದಿಂದ ಬರುವ ಭಕ್ತಾಧಿಗಳಿಗೆ ಬೋಜನಕ್ಕೂ ತಯಾರಿಮಾಡಿಕೊಳ್ಳಲಾಗುತ್ತಿದೆ ಭಕ್ತರಿಗಾಗಿ ಬೂಂದಿ, ಖಾರ, ಜಹಂಗೀರ್, ಮಾಲ್ದಿ ಪುಡಿ ಸೇರಿದಂತೆ ಇನ್ನಿತರೆ ಖಾದ್ಯಗಳ ತಯಾರಿ ನಡೆಯುತ್ತಿದೆ. ಮಠದ ಭಕ್ತಾದಿಗಳಿಗಾಗಿ ಬಾಣಸಿಗರಿಂದ 250 ಕ್ವಿಂಟಾಲ್ ಸಿಹಿಬೂಂದಿ ತಯಾರು ಮಾಡಲಾಗುತ್ತಿದೆ. ವಿವಿಐಪಿಗಳ ಆಗಮನ ಹಿನ್ನೆಲೆ ಮಠದಲ್ಲಿ ಹೆಚ್ಚಿನ ಭದ್ರತಾ ವ್ಯವಸ್ಥೆ ಮಾಡಲಾಗಿದೆ.