ಸ್ಯಾಂಡಲ್‌ವುಡ್‌ಗೆ ಬಂತು ಹೊಸಬರಿಂದ ʻಶುಕ್ರದೆಸೆʼ..!

shukradese kannada movie

ಸ್ಯಾಂಡಲ್‌ವುಡ್‌ನಲ್ಲಿ ಇತ್ತೀಚೆಗೆ ಪ್ರಯೋಗಾತ್ಮಕ ಚಿತ್ರಗಳ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ, ಅದರಲ್ಲೂ ಹೊಸಬರೆ ಸೇರಿ ಮಾಡ್ತಾ ಇರೋ ಭಿನ್ನ ವಿಭಿನ್ನ ಸಿನಿಮಾಗಳನ್ನು ಮಾಡ್ತಾ ಇದ್ದಾರೆ, ಅದರ ಸಾಲಿಗೆ ಮತ್ತೊಂದು ಹೊಸಬರ ಟೀಂ ಸೇರ್ತಾ ಇದೆ. ʻಶುಕ್ರದೆಸೆʼ ಅನ್ನೋ ಟೈಟಲ್‌ ಇಡ್ಕೊಂಡು ಸ್ಯಾಂಡಲ್‌ವುಡ್‌ಗೆ ಸೇರಿದಂತೆ ತಮಗೂ ಶುಕ್ರದೆಸೆ ತರಲು ಮುಂದಾಗಿದ್ದಾರೆ. ʻಅನಿಲ್‌ ಬಿದಹಾಸ್‌ ಅವರ ಸ್ಟೋರಿ ಸ್ಕ್ರೀನ್‌ ಪ್ಲೇ ಇರೋ ಈ ಚಿತ್ರಕ್ಕೆ ಅಯ್ಯೋರಾಮ ಎಸ್‌.ಆರ್‌.ರಾಮಕೃಷ್ಣ ಮ್ಯೂಸಿಕ್‌ ನೀಡಿದ್ದಾರೆ. ಹೊಸ ಪ್ರತಿಭೆಗಳೇ ಸೇರಿ ಮಾಡ್ತಾ ಇರೋ ಈ ʻಶುಕ್ರದೆಸೆʼ ಚಿತ್ರದ ಸಣ್ಣ ಟೀಸರ್‌ ಒಂದು ರಿಲೀಸ್‌ ಮಾಡಿದ್ದು ಸಣ್ಣದೊಂದು ಡೈಲಾಗ್‌ ತುಣುಕು ಸದ್ಯ ಸಿನಿರಸಿಕರಲ್ಲಿ ಕ್ಯೂರ್ಯಾಸಿಟಿ ಹೆಚ್ಚಿಸಿದೆ.

ಇನ್ನು ಈ ಚಿತ್ರಕ್ಕೆ ಅನೀಶಾ ಬಿದಹಾಸ್‌ ಬಂಡವಾಳ ಹೂಡಿದ್ದು, ಚಿತ್ರ ಬಿಡುಗಡೆಗೆ ಎಲ್ಲಾ ರೀತಿಯ ತಯಾರಿ ನಡೆಸಿಕೊಳ್ತಾ ಇದೆ. ಅರ್ಜುನ್‌ ಅಜಿತ್‌ ಕ್ಯಾಮರಾ ಕೈಚಳ ಮತ್ತು ಎಲಿ ಅವರ ಧ್ವನಿಯಲ್ಲಿ ಮೋಡಿಮಾಡಲು ಶುಕ್ರದೆಸೆ ರೆಡಿಯಾಗಿದ್ದು ಇನ್ನೇನು ಸಿನಿರಸಿಕರನ್ನು ರಂಜಿಸಲು ಸದ್ಯರದಲ್ಲೇ ಬರಲಿದೆ.

ಸ್ಯಾಂಡಲ್‌ವುಡ್‌ಗೆ ಬಂತು ಹೊಸಬರಿಂದ ʻಶುಕ್ರದೆಸೆ,
ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಳ್ಳಿ

Similar Articles

Comments
Top